Site icon Samastha News

Ganesh Chaturthi: ಗಣಪತಿಯ 32 ರೂಪಗಳು ಯಾವುವು? ಯಾವ ರೂಪವನ್ನು ಪೂಜಿಸಬೇಕು?

Ganesh Chaturthi

Ganesh Chaturthi

ಗಣೇಶ ಚತುರ್ಥಿಯಂದು ದೇಶವೆಲ್ಲ ಗಣೇಶನ ಹಬ್ಬ ಆಚರಿಸುವಲ್ಲಿ ನಿರತವಾಗಿದೆ. ಬೀದಿ ಬೀದಿಗಳಲ್ಲಿ ತಮ್ಮ ಶಕ್ತ್ಯಾನುಸಾರ ಯುವಕರು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಸಂಭ್ರಮಿಸುತ್ತಿದ್ದಾರೆ. ಮನೆಗಳಲ್ಲೂ ಸಹ ಗಣೇಶ ಕೂರಿಸಿ ಗರಿಕೆ ಏರಿಸಿ ಪೂಜಿಸಲಾಗುತ್ತದೆ. ಎಲ್ಲ ಗಣಪತಿಯೂ ನೋಡಲು ಒಂದೇ ರೀತಿ ಕಾಣುತ್ತದೆಯಾದರೂ ಬಹಳ ಭಿನ್ನತೆ ಇದೆ. ಗಣೇಶನ 32 ರೂಪಗಳು ಇವೆ. ಇವುಗಳಲ್ಲಿ ಪೂಜಿಸಬಾರದ ಗಣೇಶ ಸಹ ಇದೆ. ಯಾವುದದು? ಗಣೇಶನ 32 ರೂಪಗಳು ಯಾವುವು? ಇಲ್ಲಿ ತಿಳಿಯಿರಿ…

ಬಾಲ ಗಣಪತಿ

ಈ ಗಣಪತಿಯ ಮೂರ್ತಿ ಬಾಲಕನ ರೂಪದಲ್ಲಿ ಇರುತ್ತದೆ. ಕೈಯಲ್ಲಿ ಮೋದಕ ಹಿಡಿದು ತೆವಳುತ್ತಾ ಸಾಗುತ್ತಿರುವ ಚಿತ್ರಣವಿರುತ್ತೆದೆ.

ತರುಣ ಗಣಪತಿ

ತರುಣ ಗಣಪತಿಯ ಹೊಟ್ಟೆ ಡೊಳ್ಳಾಗಿರುವುದಿಲ್ಲ. ಹಲವು ಆಯುಧಗಳು ಕೈಯಲ್ಲಿರುತ್ತವೆ.

ಭಕ್ತಿ ಗಣಪತಿ

ಹೆಸರೇ ಹೇಳುವಂತೆ ಭಕ್ತಿ ಗಣಪತಿ ಶಾಂತಿವಾಗಿಯೂ ಚತುರ್ಭುಜವಾಗಿಯೂ ಇರುತ್ತದೆ. ಕೈಗಳಲ್ಲಿ ಸೇಬು, ಬಾಳೆ, ಪಾಯಸ ಹಿಡಿದಿರುತ್ತದೆ ಅಭಯ ಹಸ್ತ ಮುದ್ರೆಯನ್ನು ತೋರುತ್ತಿರುತ್ತದೆ.

ವೀರ ಗಣಪತಿ

ವೀರ ಗಣಪತಿಗೆ ಹದಿನಾಲ್ಕು ಭುಜಗಳಿರುತ್ತವೆ. ಪ್ರತಿ ಕೈಗಳಲ್ಲಿ ಆಯುಧಗಳನ್ನು ಹಿಡಿದಿರುತ್ತದೆ. ಗಣಪತಿಯ ಅಕ್ಕ-ಪಕ್ಕ ಇಬ್ಬರು ಯೋಧರು ಇರುತ್ತಾರೆ.

ಶಕ್ತಿ ಗಣಪತಿ

ದೇವಿಯನ್ನು ತೊಡೆಯ ಮೇಲೆ ಕೂರಿಸಿಕೊಂಡಿರುವ ಭಂಗಿಯಲ್ಲಿ ಶಕ್ತಿ ಗಣಪತಿ ನೋಡಲು ಸಿಗುತ್ತದೆ. ಈ ಗಣಪತಿಯ ಕೈಯಲ್ಲಿ ಪಾಶ ಮತ್ತು ಅಂಕುಶ ಇರುತ್ತದೆ. ವಿಶೇಷ ಸಂದರ್ಭಗಳಲ್ಲಿ ಕೆಲವರಷ್ಟೆ ಈ ಗಣಪತಿಯ ಪೂಜೆ ಮಾಡುತ್ತಾರೆ.

ದ್ವಿಜ ಗಣಪತಿ

ದ್ವಿಜ ಎಂದರೆ ಎರಡು ಬಾರಿ ಜನಿಸಿರುವ ಎಂದರ್ಥ. ಈ ಗಣಪತಿಗೆ ನಾಲ್ಕು ಮುಖವಿರುತ್ತದೆ. ಅಲ್ಲದೆ ಈ ಗಣಪತಿಯ ಬಣ್ಣ ಚಂದ್ರನ ಬಣ್ಣವಾಗಿರುತ್ತದೆ.

ಸಿದ್ಧಿ ಗಣಪತಿ

ಜ್ಞಾನೋದಯ, ಅಥವಾ ಸಾಕ್ಷಾತ್ಕಾರ ಎಂಬರ್ಥ ಸಿದ್ಧಿ ಪದಕ್ಕಿದೆ. ಸಿದ್ದಿ ಗಣಪತಿಯನ್ನು ಸಾಮಾನ್ಯವಾಗಿ ಎಲ್ಲರೂ ಪೂಜಿಸುತ್ತಾರೆ. ಈ ಗಣಪತಿಗೆ ಎಂಟು ಭುಜಗಳಿರುತ್ತವೆ.

ಉಚ್ಚಿಷ್ಟ ಗಣಪತಿ

ಇದನ್ನು ತಾಂತ್ರಿಕ ಗಣಪತಿ ಎಂದು ಕರೆಯಲಾಗುತ್ತದೆ. ಸಾಮಾನ್ಯರು, ಈ ದೇವರ ಬಗ್ಗೆ ಅರಿವಿಲ್ಲದ ಪಂಡಿತರು ಸಹ ಇದನ್ನು ಪೂಜಿಸುವಂತೆ, ಆರಾಧಿಸುವಂತಿಲ್ಲ. ಉಚ್ಛಿಷ್ಟ ಗಣಪತಿಯ ವಿವಿಧ ಭಂಗಿಯ ಮೂರ್ತಿಗಳು, ವಿಗ್ರಹಗಳು ನೋಡಲು ಸಿಗುತ್ತವೆ.

ವಿಘ್ನ ಗಣಪತಿ

ವಿಘ್ನನನ್ನು ಕೊಲ್ಲುತ್ತಿರುವ ರೂಪದಲ್ಲಿ ಈ ಗಣೇಶನ ಮೂರ್ತಿ ಇರುತ್ತದೆ. ಇದರ ಮುಖ ತುಸು ಭಿನ್ನ ರೂಪದಲ್ಲಿರುತ್ತದೆ. ಇದರ ನಿಲವು ಸಹ ಭಿನ್ನವಾಗಿರುತ್ತದೆ.

ಕ್ಷಿಪ್ರ ಗಣಪತಿ

ಕ್ಷಿತ್ರ ಗಣಪತಿಯ ಬಣ್ಣ ಭಿನ್ನವಾಗಿರುತ್ತದೆ. ಶಾಂತ ರೂಪದಲ್ಲಿ ಈ ಗಣಪತಿ ಇರುತ್ತದೆ. ಅಭಯ ಹಸ್ತ ಮುದ್ರೆ ತೋರಿಸುತ್ತಿರುತ್ತದೆ.

ಹೇರಂಭ ಗಣಪತಿ

ಹೇರಂಭ ಗಣಪತಿ ಸಿಂಹದ ಮೇಲೆ ಕುಳಿತಿರುತ್ತದೆ. ಈ ಗಣಪತಿಗೆ ಐದು ಮುಖಗಳಿರುತ್ತವೆ. ಈ ಗಣಪತಿ ಪಾಶ, ಕೊಡಲಿ ಇದ್ಯಾದಿ ಆಯುಧಗಳನ್ನು ಹಿಡಿದಿರುತ್ತದೆ.

ಲಕ್ಷ್ಮಿಪತಿ ಗಣಪತಿ

ಲಕ್ಷ್ಮಿ ಸಮೇತನಾಗಿ ರಾಜಮುದ್ರೆಯಲ್ಲಿ ಗಣಪತಿ ಕುಳಿತಿರುವ ಭಂಗಿ ಇರುತ್ತದೆ. ಬಿಳಿಯ ಬಣ್ಣದಲ್ಲಿಯೂ ಈ ಗಣಪತಿಯನ್ನು ನೋಡಬಹುದು.

ಮಹಾ ಗಣಪತಿ

ದಶಭುಜದ ಈ ಗಣಪತಿ ಶಕ್ತಿ ಸಮೇತವಾಗಿ ಕಾಣಸಿಗುತ್ತದೆ. ಶಕ್ತಿಯ ಉತ್ಕೃಷ್ಟ ರೂಪವೆಂದು ಮಹಾ ಗಣಪತಿಯನ್ನು ಪರಿಗಣಿಸಲಾಗುತ್ತದೆ.

ವಿಜಯ ಗಣಪತಿ

ಇಲಿಯ ಮೇಲೆ ಕುಳಿತ ಗಣಪತಿ, ತನ್ನ ಮುರಿದ ದಂತ ವನ್ನು ಕೈಯಲ್ಲಿ ಹಿಡಿದುಕೊಂಡಿರುವ ಭಂಗಿಯಲ್ಲಿ ಗಣಪತಿ ಕಾಣುತ್ತಾರೆ.

ನೃತ್ಯ ಗಣಪತಿ

ಹೆಸರೇ ಹೇಳುವಂತೆ ಈ ಗಣಪತಿ ನೃತ್ಯ ಮಾಡುತ್ತಿರುವ ಭಂಗಿಯಲ್ಲಿ ನೋಡಬಹುದಾಗಿದೆ.

ಊರ್ದ್ವ ಗಣಪತಿ

ಊರ್ದ್ವ ಗಣಪತಿ ಆಕಾರದಲ್ಲಿ ದೊಡ್ಡದಾಗಿಯೂ ಗಂಭೀರವಾಗಿಯೂ ಇರುತ್ತದೆ. ತೊಡೆಯ ಮೇಲೆ ಶಕ್ತಿ ಕೂತಿರುತ್ತಾಳೆ. ಕೈಯಲ್ಲಿ ಬಾಣ, ಕಬ್ಬು, ಹೂವು ಇತರೆ ವಸ್ತುಗಳು ಇರುತ್ತವೆ.

ಏಕಾಕ್ಷರ ಗಣಪತಿ

ಪದ್ಮಾಸನ ಹಾಕಿರುವ ಗಣಪತಿ ಮೂಷಿಕದ ಮೇಲೆ ಕುಳಿತಿರುವ ಭಂಗಿಯಲ್ಲಿ ಏಕಾಕ್ಷರ ಗಣಪತಿ ನೋಡಲು ದೊರೆಯುತ್ತದೆ.

ವರದ ಗಣಪತಿ

ಶಾಂತ ರೂಪದಲ್ಲಿ ಕಾಣುತ್ತದೆ ಈ ಗಣಪತಿ. ಅಭಯ ಹಸ್ತ ಮುದ್ರೆ ಇರುತ್ತದೆ.

ತ್ರೈಅಕ್ಷರ ಗಣಪತಿ

ಈ ಗಣಪತಿಯ ಕಿವಿಯ ಆಕಾರ ಭಿನ್ನವಾಗಿರುತ್ತದೆ. ಸಂಸ್ಕೃತದಲ್ಲಿ ಮೂರು ಬೀಜಾಕ್ಷರದ ಅರ್ಥ ಈ ಗಣಪತಿಯ ರೂಪ.

ಕ್ಷಿಪ್ರ ಪ್ರಸಾದ ಗಣಪತಿ

ಬೇಗನೆ ವರಗಳನ್ನು ಕೊಡುವ ಗಣಪತಿಯೆಂದು ಕ್ಷಿಪ್ರ ಪ್ರಸಾದ ಗಣಪತಿ ಎಂದು ಕರೆಯಲಾಗುತ್ತದೆ.

ಹರಿದ್ರಾ ಗಣಪತಿ

ರಾಜಾಸನದ ಮೇಲೆ ಕುಳಿತಿರುವ ಈ ಗಣಪತಿ ಹಳದಿ ಬಣ್ಣದ್ದಾಗಿರುತ್ತದೆ. ಈ ಗಣಪತಿಗೆ ನಾಲ್ಕು ಭುಜಗಳಿರುತ್ತವೆ.

ಏಕದಂತ ಗಣಪತಿ

ದಣಪತಿ ಧ್ಯಾನ ಭಂಗಿಯಲ್ಲಿ ಕುಳಿತಿರುವ ಮೂರ್ತಿಯನ್ನು ಏಕದಂತ ಗಣಪತಿ ಎನ್ನಲಾಗುತ್ತದೆ.

ಸೃಷ್ಠಿ ಗಣಪತಿ

ಮೂಷಕನ ಮೇಲೆ ಕುಳಿತು ಚಲಿಸುತ್ತಿರುವ ರೀತಿಯ ಗಣಪತಿ, ಸೃಷ್ಠಿ ಗಣಪತಿ. ಇಲ್ಲಿ ಗಣಪತಿಗೆ ಕಿರೀಟ, ಪ್ರಭೆ ಇರುತ್ತದೆ.

ಉದ್ದಂಡ ಗಣಪತಿ

ಶಕ್ತಿಯನ್ನು ತೊಡೆಯ ಮೇಲೆ ಕೂರಿಸಿಕೊಂಡಿರುತ್ತದೆ. ಧರ್ಮವನ್ನು ಕಾಪಾಡುವ ದೇವರು ಉದ್ದಂಡ ಗಣಪತಿ.

ರಿನಾಮೋಚನಾ ಗಣಪತಿ

ಸಾಲವನ್ನು ನಿವಾರಿಸುವ, ಹಣಕಾಸು ಸಂಕಟವನ್ನು ನಿವಾರಿಸುವ ಗಣಪತಿ, ರಿನಾಮೋಚನಾ ಗಣಪತಿ. ಈ ದೇವರ ಮೂರ್ತಿ ಬಿಳಿಯ ಬಣ್ಣದಲ್ಲರುತ್ತದೆ.

ದುಂಡಿ ಗಣಪತಿ

ಶೈವ ಪದ್ಧತಿಗೆ ಸೇರಿದವರ ಗಣಪತಿ ಇದು. ಈ ಗಣಪತಿ ಮೋಕ್ಷಕ್ಕೆ ಸಂಬಂಧಿಸಿದ್ದಾಗಿದೆ.

ದ್ವಿಮುಖ ಗಣಪತಿ

ಈ ಗಣಪತಿಗೆ ಎರಡು ಮುಖವಿರುತ್ತದೆ. ಎರಡೂ ಮುಖಗಳು ವಿರುದ್ಧ ದಿಕ್ಕಿಗೆ ನೋಡುತ್ತಿರುತ್ತವೆ.

ತ್ರಿಮುಖ ಗಣಪತಿ

ಈ ಗಣಪತಿಗೆ ಮೂರು ಮುಖಗಳಿರುತ್ತವೆ. ಈ ಗಣಪತಿ ನಕ್ಷತ್ರ ಮತ್ತು ಧನಿಷ್ಠಕ್ಕೆ ಸಂಬಂಧಿಸಿದ ಗಣಪತಿ.

ಸಿಂಹ ಗಣಪತಿ

ಹೆಸರೇ ಹೇಳುತ್ತಿರುವಂತೆ ಈ ಗಣಪತಿಯ ವಾಹನ ಇಲಿಯಲ್ಲ ಬದಲಿಗೆ ಸಿಂಹ. ಈ ಗಣಪತಿಯ ಕೈಯಲ್ಲಿ ಗದೆ ಇರುತ್ತದೆ.

ಯೋಗ ಗಣಪತಿ

ಈ ಗಣಪತಿ ಶಾಂತ ರೂಪದಲ್ಲಿರುತ್ತದೆ. ಧ್ಯಾನ ಭಂಗಿಯಲ್ಲಿ ಕೂತಿರುವಂತೆ ಮೂರ್ತಿಗಳು, ವಿಗ್ರಹಗಳು ಇರುತ್ತವೆ.

ದುರ್ಗಾ ಗಣಪತಿ

ಉತ್ತರ ಭಾದ್ರಪದ ನಕ್ಷತ್ರಕ್ಕೆ ಸೇರಿದ ಈ ಗಣಪತಿ ದುರ್ಗಾ ಮಾತೆಯಂತೆ ಶಕ್ತಿಗೆ ಪರಿಚಿತ.

Weekly Horoscope: ಸೆಪ್ಟೆಂಬರ್ ಮೊದಲ ವಾರದಲ್ಲಿ ಎರಡು ರಾಶಿಗೆ ಲಾಭವೋ ಲಾಭ

ಸಂಕಟಹರ ಗಣಪತಿ

ಪ್ರಸನ್ನ ರೀತಿಯಲ್ಲಿ ಕಾಣುವ ಈ ಗಣಪತಿಯ ಉಪಾಸನೆಯಿಂದ ಸಂಕಟಗಳು ದೂರಾಗುತ್ತವೆಂಬ ನಂಬಿಕೆ ಇದೆ.

Exit mobile version