Site icon Samastha News

MS Dhoni: ಧೋನಿ‌ ಜೊತೆ ಮಾತು ಬಿಟ್ಟು ಹತ್ತು ವರ್ಷವಾಯ್ತು: ಹರ್ಭಜನ್ ಸಿಂಗ್

M S Dhoni

MS Dhoni

ಎಂಎಸ್ ಧೋನಿ ಭಾರತ ಕ್ರಿಕೆಟ್ ಇತಿಹಾಸದ ಮರೆಯಲಾಗದ ನಾಯಕ. ಎರಡು ವಿಶ್ವಕಪ್ ಗೆದ್ದು ಕೊಟ್ಟ ಧೋನಿ ಬಗ್ಗೆ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಅಪಾರ ಪ್ರೇಮ ಮತ್ತು ಗೌರವ. ಆದರೆ ಎಲ್ಲರೂ ಧೋನಿಯೊಂದಿಗೆ ಹಾಗೆಯೇ ಇಲ್ಲ. ಧೋನಿ ಕ್ಯಾಪ್ಟನ್ ಆಗಿದ್ದಾಗಲೂ ಸಹ ಕೆಲವು ಆಟಗಾರರು ಧೋನಿ ಜೊತೆ ಮನಸ್ಥಾಪ ಮಾಡಿಕೊಂಡಿದ್ದರು. ಕೆಲ ಹಿರಿಯ ಆಟಗಾರರು ಧೋನಿ ಜೊತೆ ಜಗಳವಾಡಿದ್ದು ಸಹ ಇದೆ. ಇದೀಗ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಈ ಬಗ್ಗೆ ಮಾತನಾಡಿದ್ದಾರೆ.

ಧೋನಿ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದಾಗ ಆ ತಂಡದಲ್ಲಿ ಹರ್ಭಜನ್ ಸಿಂಗ್ ಇದ್ದರು, ಯುವರಾಜ್ ಸಿಂಗ್ ಅಹ ಇದ್ದರು, ಆದರೆ ಮುಂದಿನ ವಿಶ್ವಕಪ್ ವೇಳೆಗೆ ಇಬ್ಬರನ್ನೂ ಮೂಲೆಗುಂಪು ಮಾಡಲಾಗಿತ್ತು. ಪರೋಕ್ಷವಾಗಿ ಈ ಬಗ್ಗೆ ಮಾತನಾಡಿರುವ ಹರ್ಭಜನ್ ಸಿಂಗ್, ‘ನಾನು ಧೋನಿ ಜೊತೆ ಮಾತನಾಡಿ ಹತ್ತು ವರ್ಷಗಳಾಗಿದೆ. ಇಬ್ಬರೂ ಚೆನ್ನೈಗೆ ಒಂದು ಸೀಸನ್ ಐಪಿಎಲ್ ಆಡಿದೆವು ಆಗ ಫೀಲ್ಡ್ ನಲ್ಲಿ ಮಾತನಾಡಿದ್ದು ಬಿಟ್ಟರೆ ಹೊರಗೆ ಸಹ ನಾವು ಮಾತನಾಡುತ್ತಿರಲಿಲ್ಲ. ಇಬ್ಬರಿಗೂ ಅದರ ಅವಶ್ಯಕತೆ ಇರಲಿಲ್ಲ’ ಎಂದಿದ್ದಾರೆ ಹರ್ಭಜನ್ ಸಿಂಗ್.

‘ನನಗೆ ಧೋನಿ ಬಗ್ಗೆ ದ್ವೇಷ ಇಲ್ಲ, ಅವರಿಗೆ ನನ್ನ ಮೇಲೆ ದ್ವೇಷ ಇದ್ದರೆ ಅವರು ಅದನ್ನು ಹೇಳಬಹುದು. ನಾನು ಧೋನಿಗೆ ಕಾಲ್ ಸಹ ಮಾಡುವುದಿಲ್ಲ, ಯಾರು ನನ್ನ ಕರೆ ಸ್ವೀಕಾರ ಮಾಡುತ್ತಾರೆ ಅವರುಗಷ್ಟೆ ನಾನು ಕರೆ ಮಾಡುತ್ತೇನೆ. ನಾನು ಯಾರಿಗಾದರೂ ಗೌರವ ನೀಡಿದರೆ ಅದೇ ಗೌರವವನ್ನು ಅವರಿಂದ ನಿರೀಕ್ಷಿಸುತ್ತೇನೆ. ಇಂದಿಗೂ ಹಲವು ಕ್ರಿಕೆಟಿಗರ ಜೊತೆಗೆ ನಾನು ಸಂಪರ್ಕದಲ್ಲಿದ್ದೇನೆ. ಆಶಿಶ್ ನೆಹ್ರ, ಯುವರಾಜ್ ಸಿಂಗ್ ಜೊತೆ ನನ್ನ ಮಾತುಕತೆ ಆಗುತ್ತಲೆರ ಇರುತ್ತದೆ’ ಎಂದಿದ್ದಾರೆ ಬಜ್ಜಿ.

MS Dhoni: ಮಹೇಂದ್ರ ಸಿಂಗ್ ಧೋನಿ ವಿರುದ್ಧ ದೂರು ನೀಡಿದ ಮಾಜಿ ಆಪ್ತರು

ಒಟ್ಟಿಗೆ ಆಡುವ ಸಮಯದಲ್ಲಿ ಯುವರಾಜ್ ಸಿಂಗ್ ಹಾಗೂ ಧೋನಿ ಸಹ ಒಳ್ಳೆಯ ಗೆಳೆಯರಾಗಿದ್ದರು, ಆದರೆ ಕೆಲ ತಿಂಗಳ ಹಿಂದೆ ಸಂದರ್ಶನದಲ್ಲಿ ಯುವರಾಜ್ ಸಿಂಗ್ ಸಹ, ಧೋನಿ ಜೊತೆಗೆ ನಾನು ಸಂಪರ್ಕ ಇಟ್ಟುಕೊಂಡಿಲ್ಲ ಎಂದಿದ್ದರು. ಅಲ್ಲದೆ ತಂಡದಲ್ಲಿ ತಮ್ಮನ್ನು ಮೂಲೆ ಗುಂಪು ಮಾಡಲಾಯ್ತು ಎಂಬುದನ್ನು ಸಹ ಸೂಕ್ಷ್ಮವಾಗಿ ಆ ಸಂದರ್ಶನದಲ್ಲಿ ಯುವರಾಜ್ ಸಿಂಗ್ ಹೇಳಿದರು. ವಿರಾಟ್ ಕೊಹ್ಲಿ ಸಹ ಸಂದರ್ಶನವೊಂದರಲ್ಲಿ, ಧೋನಿ ತಮ್ಮ ಕರೆಗಳನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದರು.

ಆಡುವ ಸಮಯದಲ್ಲಿ ವಿರೇಂದ್ರ ಸೆಹ್ವಾಗ್, ಸೌರವ್ ಗಂಗೂಲಿ ಸಹ ಧೋನಿ ಜೊತೆ ಮುನಿಸು ಬೆಳೆಸಿಕೊಂಡಿದ್ದರು. ಹಿರಿಯ ಆಟಗಾರರನ್ನು ಧೋನಿ ಕಡೆಗಣಿಸಿದರು ಎಂದ ಆರೋಪ ಆಗ ಕೇಳಿ ಬಂದಿತ್ತು.

Exit mobile version