Cold Water
ಬಿಸಿನೀರು ಒಳ್ಳೆಯದಾ ತಣ್ಣೀರು ಒಳ್ಳೆಯದಾ ಎಂಬ ಚರ್ಚೆ ದಶಕಗಳಿಂದಲೂ ನಡೆದುಕೊಂಡು ಬರುತ್ತಲೇ ಇದೆ. ಕೆಲವರು ಹೇಳುವಂತೆ ಬಿಸಿ ನೀರು ಸೇವಿಸುವುದು ಹಾಗೂ ಬಿಸಿ ನೀರಿನಿಂದ ಸ್ನಾನ ಮಾಡುವುದು ಒಳ್ಳೆಯದು. ಇನ್ನು ಕೆಲವರು ಹೇಳುವಂತೆ ತಣ್ಣೀರು ಸೇವಿಸುವುದು ಹಾಗೂ ತಣ್ಣೀರಿನ ಸ್ನಾನ ಬಹಳ ಒಳ್ಳೆಯದು. ಆದರೆ ಈ ಚರ್ಚೆಗೆ ಒಂದು ನಿರ್ದಿಷ್ಟ ಉತ್ತರ ಸಿಕ್ಕಿದೆ. ವಿಜ್ಞಾನಿಗಳ ಪ್ರಕಾರ ಬಿಸಿ ನೀರಿನ ಸ್ನಾನಕ್ಕಿಂತಲೂ ತಣ್ಣೀರ ಸ್ನಾನವೇ ಶ್ರೇಷ್ಠ. ಇದರ ಲಾಭಗಳು ಬಹಳಷ್ಟಿವೆ.
ಕೆಲ ವರ್ಷದ ಹಿಂದೆ ಐಸ್ ಬಕೆಟ್ ಚಾಲೆಂಜ್ ಹೆಸರಿನ ಒಂದು ಸೋಷಿಯಲ್ ಮೀಡಿಯಾ ಚಾಲೆಂಜ್ ಬಂದಿತ್ತು ನೆನಪಿರಬೇಕು. ಅಮೆರಿಕ ಮಾಜಿ ಅಧ್ಯಕ್ಷ ಒಬಾಮಾ, ಟ್ರಂಪ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ತಮ್ಮ ತಲೆಯ ಮೇಲೆ ಐಸ್ ತುಂಬಿದ ನೀರನ್ನು ಸುರಿದುಕೊಂಡರು. ಆದರೆ ಈಗ ಅದು ತೀರ ಸಾಮಾನ್ಯವಾಗಿದೆ. ಕ್ರೀಡಾಪಟುಗಳು, ದೇಹದಾರ್ಡ್ಯ ಮಾಡುವವರು, ಜಿಮ್ ಮಾಡುವವರು ಪ್ರತಿದಿನವೂ ಹೀಗೆ ಐಸ್ ತುಂಬಿದ ಕೊರೆಯುವಷ್ಟು ತಣ್ಣಗಿನ ನೀರಿನಲ್ಲಿ ತಮ್ಮ ಇಡೀ ದೇವಹವನ್ನು ಮುಳುಗಿಸುತ್ತಾರೆ. ಈಗ ಇದನ್ನು ಐಸ್ ಬಾತ್ ಎನ್ನಲಾಗುತ್ತಿದೆ.
ಐಸ್ ಬಾತ್ ದೇಹಕ್ಕೆ ಬಹಳ ಒಳ್ಳೆಯದಂತೆ. ಎಲ್ಲ ಕ್ರಿಕೆಟಿಗರು, ಫುಟ್ಬಾಟ್ ಆಟಗಾರರು, ಅಧಿಕವಾಗಿ ಜಿಮ್ ಮಾಡುವವರು, ಸಮಂತಾ, ಅಕ್ಷಯ್ ಕುಮಾರ್ ಇನ್ನೂ ಕೆಲವು ದೊಡ್ಡ ಸೆಲೆಬ್ರಿಟಿಗಳು ಪ್ರತಿದಿನವೂ ಈ ಐಸ್ ಬಾತ್ ತೆಗೆದುಕೊಳ್ಳುತ್ತಾರೆ. ಏಕೆಂದರೆ ಐಸ್ ಬಾತ್ನಿಂದ ಅಥವಾ ಕೊರೆಯುವ ತಣ್ಣಗಿನ ನೀರಿನಲ್ಲಿ ಮುಳುಗುವುದರಿಂದ ಮಾಂಸಖಂಡಗಳ ಆರೋಗ್ಯ ಉತ್ತಮವಾಗುತ್ತದೆ. ಮಾಂಸಖಂಡಗಳು ಗಟ್ಟಿಯಾಗುತ್ತವೆ. ಮಾಂಸಖಂಡಗಳಿಗೆ ಆಗಿರುವ ಗಾಯ ಅಥವಾ ನೋವುಗಳು ಶೀಘ್ರವಾಗಿ ನಿವಾರಣೆ ಆಗುತ್ತದೆ. ಹಾಗಾಗಿ ಕ್ರೀಡಾಪಟುಗಳು ಐಸ್ ಬಾತ್ ತೆಗೆದುಕೊಳ್ಳುತ್ತಾರೆ.
Health: ಮಹಿಳೆಯರೇ ಈ ಮೂರು ವಸ್ತುಗಳನ್ನು ಈಗಲೇ ಬದಲಾಯಿಸಿ
ನಿಮಗೆ ಐಸ್ ಬಾತ್ ತೆಗೆದುಕೊಳ್ಳಲು ಸಾಧ್ಯವಿಲ್ಲವಾದರೆ ಪ್ರತಿದಿನವೂ ತಣ್ಣೀರಿನಿಂದ ಸ್ನಾನ ಮಾಡಿ ಸಾಕು. ಇದು ದೇಹದ ಮಾಂಸಖಂಡಗಳಿಗೆ ಚೈತನ್ಯ ತುಂಬುತ್ತದೆ. ಮೆದುಳು ಚುರುಕಾಗಲು ಸಹಾಯ ಮಾಡುತ್ತದೆ. ನಿದ್ದೆಯ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ. ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ದೇಹ ಬೇಗ ಸುಸ್ತಾಗುವುದಿಲ್ಲ. ಉಸಿರಾಟದ ಕ್ರಮ ಉತ್ತಮವಾಗುತ್ತದೆ. ತಣ್ಣೀರ ಸ್ನಾನದಿಂದ ಒತ್ತಡ, ಆಂಕ್ಸೈಟಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.