Site icon Samastha News

Bigg Boss Kannada: ಈ ಬಾರಿ ಬಿಗ್​ಬಾಸ್​ಗೆ ಹೋಗುತ್ತಿರುವವರು ಇವರೇ ನೊಡಿ

Bigg Boss Kannada

Bigg Boss Kannada

ಬಿಗ್​ಬಾಸ್ ಕನ್ನಡ ಸೀಸನ್ 11 ಶುರುವಾಗಲು ವಾರವಷ್ಟೆ ಉಳಿದಿದೆ. ಬಿಗ್​ಬಾಸ್ ಸೀಸನ್ 11 ಪ್ರಾರಂಭವಾಗುವ ದಿನಾಂಕದ ಘೋಷಣೆ ಈಗಾಗಲೇ ಮಾಡಿದ್ದಾಗಿದೆ. ಸೆಪ್ಟೆಂಬರ್ 29ರಂದು ಬಿಗ್​ಬಾಸ್ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಈ ಬಾರಿ ಸುದೀಪ್ ಬದಲು ಬೇರೊಬ್ಬರು ನಿರೂಪಣೆ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಅದೂ ಸಹ ಸುಳ್ಳಾಗಿದ್ದು, ಈ ಬಾರಿಯೂ ಸಹ ಸುದೀಪ್ ಅವರೇ ನಿರೂಪಣೆ ಮಾಡುವುದು ಖಾತ್ರಿಯಾಗಿದೆ. ಇದರ ನಡುವೆ ಈ ಬಾರಿ ಯಾರು ಬಿಗ್​ಬಾಸ್ ಮನೆ ಒಳಗೆ ಹೋಗಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಬಿಗ್​ಬಾಸ್ ಸೀಸನ್ 11 ಕ್ಕೆ ಹೋಗಲಿರುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಇಲ್ಲಿದೆ.

ನಟ ಸುನಿಲ್

ಬಾಲನಟನಾಗಿ ಚಿತ್ರರಂಗ ಎಂಟ್ರಿ ಕೊಟ್ಟು ಬಳಿಕ ನಾಯಕ ನಟನಾಗಿ ಸಾಕಷ್ಟು ಹೆಸರು ಮಾಡಿದ ಸುನಿಲ್ ಈ ಬಾರಿ ಬಿಗ್​ಬಾಸ್​ಗೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಸುದೀಪ್ ಜೊತೆ ಸಾಕಷ್ಟು ವರ್ಷಗಳಿಂದಲೂ ಗೆಳೆತನ ಹೊಂದಿರುವ ಸುನಿಲ್ ಬಿಗ್​ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗಲಿದ್ದಾರೆ ಎನ್ನಲಾಗುತ್ತಿದೆ.

ಸುಂದರಿ ಸುಕೃತಾ ನಾಗ್

ಅಗ್ನಿಸಾಕ್ಷಿ ಸೇರಿದಂತೆ ಇನ್ನೂ ಕೆಲವು ಧಾರಾವಾಹಿಗಳಲ್ಲಿ ನಟಿಸಿರುವ ಮುದ್ದು ಮುಖದ ಸುಂದರಿ ಸುಕೃತಾ ನಾಗ್ ಸಹ ಈ ಬಾರಿ ಬಿಗ್​ಬಾಸ್​ಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ಸುಕೃತಾ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಸಹ ಹೊಂದಿದ್ದಾರೆ. ತಮ್ಮ ಮುದ್ದು ಮುಖದಿಂದ ಅಭಿಮಾನಿಗಳನ್ನು ಗಳಿಸಿದ್ದಾರೆ.

ಕಮಿಡಿಯನ್ ಹುಲಿ ಕಾರ್ತಿಕ್

ಹುಲಿ ಕಾರ್ತಿಕ್, ಈಗಾಗಲೇ ಕಾಮಿಡಿ ಶೋಗಳಲ್ಲಿ ಬಹುವಾಗಿ ಗಮನ ಸೆಳೆದಿದ್ದಾರೆ. ಬಿಗ್​ಬಾಸ್​ನ ಪ್ರತಿ ಸೀಸನ್​ನಲ್ಲೂ ಒಬ್ಬ ಕಮಿಡಿಯನ್​ಗೆ ಅವಕಾಶ ಕೊಟ್ಟೇ ಕೊಡಲಾಗುತ್ತದೆ. ಅಂತೆಯೇ ಈ ಬಾರಿ ಹುಲಿ ಕಾರ್ತಿಕ್​ಗೆ ಅವಕಾಶ ನೀಡಲಾಗುತ್ತಿದೆ. ಹುಲಿ ಕಾರ್ತಿಕ್​ ಬಿಗ್​ಬಾಸ್​ಗೆ ಬರುವುದು ಕನ್​ಫರ್ಮ್ ಎನ್ನಲಾಗುತ್ತಿದೆ.

ಆರೋಪಿ ಚೈತ್ರಾ ಕುಂದಾಪುರ

ಹಿಂದೂ ಹೋರಾಟಗಾರ್ತಿ ಎಂದು ಗುರುತಿಸಿಕೊಂಡು ಆ ನಂತರ ಬಿಜೆಪಿ ಮುಖಂಡರ ಬಳಿ ಹಫ್ತಾ ವಸೂಲಿ ಮಾಡಿದ ಆರೋಪಕ್ಕೆ ತುತ್ತಾಗಿ ಜೈಲು ಪಾಲಾಗಿ ಜಾಮೀನಿನ ಮೇಲೆ ಹೊರಗೆ ಬಂದಿರುವ ಚೈತ್ರಾ ಕುಂದಾಪುರ್ ಈ ಬಾರಿ ಬಿಗ್​ಬಾಸ್​ಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ಚೈತ್ರಾ ಕುಂದಾಪುರ್ ಬಿಗ್​ಬಾಸ್​ಗೆ ಬಂದರೆ ಆಟ ಮಜವಾಗಿರುತ್ತದೆ.

ಹಿರಿಯ ನಟಿ ಪ್ರೇಮಾ

ಹಿರಿಯ ನಟಿ ಪ್ರೇಮಾ ಸಹ ಈ ಬಾರಿ ಬಿಗ್​ಬಾಸ್​ಗೆ ಬರುತ್ತಾರೆ ಎನ್ನಲಾಗುತ್ತಿದೆ. ಒಂದು ಸಮಯದಲ್ಲಿ ಕನ್ನಡ ಚಿತ್ರರಂಗದ ಟಾಪ್ ನಟಿಯಾಗಿದ್ದ ಪ್ರೇಮಾ ಆ ಬಳಿಕ ಚಿತ್ರರಂಗದಿಂದ ದೂರಾಗಿದ್ದರು. ಈಗ ಮರಳಿ ಬಂದು ರಿಯಾಲಿಟಿ ಶೋ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ನಟಿ ಪ್ರೇಮಾ ಬಿಗ್​ಬಾಸ್ ಶೋಗೆ ಬರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ನಕಲಿ ದರ್ಶನ್

ನಕಲಿ ದರ್ಶನ್, ಅವಿನಾಶ್ ಸಹ ಈ ಬಾರಿ ಬಿಗ್​ಬಾಸ್​ಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ಅವಿನಾಶ್ ನೋಡಲು ದರ್ಶನ್ ರೀತಿ ಕಾಣುತ್ತಾರೆ. ಅವರು ಮಾತನಾಡುವ ರೀತಿಯೂ ದರ್ಶನ್ ರೀತಿಯಾಗಿಯೇ ಇದೆ. ಇವರ ನಡೆ, ಡೈಲಾಗ್ ಕೇಳಿ ಸ್ವತಃ ರಚಿತಾ ರಾಮ್ ಶಾಕ್ ಆಗಿದ್ದರು. ಈಗ ಈ ಅವಿನಾಶ್ ಬಿಗ್​ಬಾಸ್​ಗೆ ಬರಲಿದ್ದಾರೆ.

ಇನ್ನುಳಿದ ಹೆಸರುಗಳು

ಇವರು ಮಾತ್ರವೇ ಅಲ್ಲದೆ ಇನ್ನೂ ಕೆಲವು ಹೆಸರುಗಳು ಚಾಲ್ತಿಯಲ್ಲಿವೆ. ರೀಲ್ಸ್ ರೇಷ್ಮಾ, ಪದ್ಮಾವತಿ ಧಾರಾವಾಹಿಯ ತ್ರಿವಿಕ್ರಮ್, ಅಮೃತಧಾರೆ ನಟ ಕರಣ್‌ ಕೆ ಆರ್‌‌, ಫಿಟ್​ನೆಸ್ ಎಂತೂಸಿಯಾಸ್ಟ್ ಪವಿ, ಮೋಟೊ ಬ್ಲಾಗರ್ ಟಿಪಿಕಲ್ ಕನ್ನಡಿಗ ಅಥವಾ ಡಿವಿ ಇನ್ ಕನ್ನಡ, ಲಿಪ್​ಸಿಂಕ್ ಭವ್ಯಾ, ದೀಪಕ್ ಗೌಡ ಇನ್ನೂ ಕೆಲವರು ಇರಲಿದ್ದಾರೆ ಎನ್ನಲಾಗುತ್ತಿದೆ.

Exit mobile version