Site icon Samastha News

Highway Minister: ಟೋಲ್ ಸಂಗ್ರಹ ಸಂಸ್ಥೆಗಳಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಎಚ್ಚರಿಕೆ

Highway Minister

Highway Minister

ಭಾರತದಲ್ಲಿ ವಾಹನ ಚಾಲಕರಿಗೆ ಹಲವು ಸಮಸ್ಯೆಗಳು. ಅತಿಯಾದ ಟ್ರಾಫಿಕ್, ಕೆಟ್ಟ ರಸ್ತೆ, ಕಿರಿದಾದ ರಸ್ತೆಗಳು, ರಸ್ತೆಗೆ ಅಡ್ಡ ಬರುವ ಪ್ರಾಣಿಗಳು. ಇವ್ಯಾವು ಇಲ್ಲದ ಒಳ್ಳೆಯ ರಸ್ತೆ ಇದೆಯೆಂದರೆ ಆ ರಸ್ತೆಯಲ್ಲಿ ಸಂಚರಿಸಲು ವಸೂಲಿ ಮಾಡಲಾಗುವ ದುಬಾರಿ ಟೋಲ್. ಭಾರತದಲ್ಲಿ ಎಲ್ಲೇ ಒಳ್ಳೆಯ ರಸ್ತೆಯಾಗಲಿ ಆ ರಸ್ತೆಗೆ ಟೋಲ್ ಕಟ್ಟಲೇಬೇಕು ಎನ್ನುವಂತಾಗಿದೆ. ಇದರ ನಡುವೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಟೋಲ್ ಸಂಗ್ರಹ ಸಂಸ್ಥೆಗಳಿಗೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ.

ಸ್ಟಾಟಲೈಟ್ ಆಧರಿತ ಟೋಲ್ ಸಂಗ್ರಹದ ಕಾರ್ಯಾಗಾರದಲ್ಲಿ ಮಾತನಾಡಿದ ಸಚಿವ ನಿತಿನ್ ಗಡ್ಕರಿ ರಸ್ತೆಯ ಗುಣಮಟ್ಟದ ಬಗ್ಗೆ ಮಾತನಾಡುತ್ತಾ, ಹೆದ್ದಾರಿ ಏಜೆನ್ಸಿಗಳಿಗೆ ‘ರಸ್ತೆಗಳು ಚೆನ್ನಾಗಿಲ್ಲದಿದ್ದರೆ, ರಿಪೇರಿ ಇದ್ದರೆ ಜನರಿಂದ ಟೋಲ್‌ ಸಂಗ್ರಹಿಸಬೇಡಿ’ ಎಂದಿದ್ದಾರೆ.

‘ಜನರಿಂದ ಬೇಗನೆ ಹಣ ಸಂಗ್ರಹಿಸಿ ನಮ್ಮ ಖಾತೆ ತುಂವಿಸಿಕೊಳ್ಳುವ ಉತ್ಸುಕತೆಯಲ್ಲಿದ್ದೇವೆ. ಆದರೆ ನಾವು ಜನರ ಪರವಾಗಿ ಯೋಚಿಸಬೇಕಿದೆ. ಗುಣಮಟ್ಟದ ಸೇವೆ ನಿಒಡೊ ಅವರಿಂದ ಹಣ ಪಡೆಯಬೇಕು. ಹಳ್ಳಕೊಳ್ಳಗಳಿರುವ ರಸ್ತೆ, ಮಣ್ಣು ತುಂಬಿದ ರಸ್ತೆಯಿದ್ದಾಗಲೂ ಹಣ ಪಡೆಯಲು ಮುಂದಾದರೆ ಜನರ ವಿರೋಧ ಎದುರಿಸಬೇಕಾಗುತ್ತದೆ’ ಎಂದಿದ್ದಾರೆ ನಿತಿನ್ ಗಡ್ಕರಿ.

ನ್ಯಾಷನಲ್ ಹೈವೆ ಅಥಾರಿಟಿ ಆಫ್ ಇಂಡಿಯಾವು ಸ್ಯಾಟಲೈಟ್ ಆಧರಿತ ಟೋಲ್ ಸಂಗ್ರಹಕ್ಕೆ ಮುಂದಾಗಿದ್ದು, ಪ್ರಾಯೋಗಿಕ ಹಂತವಾಗಿ 5000 ಕಿ.ಮೀಗಳ ವ್ಯಾಪ್ತಿಯಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗೂತ್ತಿದೆ. ಮೊದಲಿಗೆ ವಾಣಿಜ್ಯ ವಾಹನಗಳ ಟೋಲ್ ಅನ್ನು ಮಾತ್ರವೇ ಸ್ಯಾಟಲೈಟ್ ಆಧಾರದಲ್ಲಿ ಸಂಗ್ರಹಿಸಲಿದ್ದು, ಆ ನಂತರ ಖಾಸಗಿ ವಾಹನಗಳ ಟೋಲ್ ಅನ್ನು ಸಹ ಸ್ಯಾಟಲೈಟ್ ಆಧಾರದಲ್ಲಿ ಸಂಗ್ರಹ ಮಾಡಲಿದೆ‌.

ಇನ್ನು ಮುಂದೆ ದೇಶದಲ್ಲಿ ಹೆದ್ದಾರಿಗಳು ಎಚ್ ಎ ಎಂ ಆಧಾರದಲ್ಲಿ ಮಿರ್ಮಾಣವಾಗಲಿದ್ದು ಕೇಂದ್ರ ಸರ್ಕಾರವು, 40% ಹಣವನ್ನು ರಸ್ತೆ ನಿರ್ಮಾಣಕ್ಕೆ ನೀಡಿದರೆ ಉಳಿದ 60% ಹಣವನ್ನು ಹೆದ್ದಾರಿ ಕಾಂಟ್ರಾಕ್ಟರ್ ನೀಡಲಿದ್ದಾರೆ. ಆ ಬಳಿಕ ಟೋಲ್‌ಸಂಗ್ರಹದ ಮೂಲಕ ಆ ಹಣವನ್ನು ಕಾಂಟ್ರಾಕ್ಟರ್ ಮರಳಿ ಪಡೆಯಲಿದ್ದಾರೆ.

Exit mobile version