Site icon Samastha News

Weekly Horoscope: ಮೇ ತಿಂಗಳ ಕೊನೆಯ ವಾರ ಹೇಗಿರಲಿದೆ ನಿಮ್ಮ ಭವಿಷ್ಯ?

Weekly Horoscope

Weekly Horoscope

ಮೇ ತಿಂಗಳ ಕೊನೆಯ ವಾರ (ಮೇ 27 ರೀಂದ ಜೂನ್‌ 1) ಶುಕ್ರನ ಸಂಚಾರವು ಎಲ್ಲ ರಾಶಿಗಳ ಮೇಲೂ ಪರಿಣಾಮ ಬೀರಲಿದೆ. ಈ ಸೋಮವಾರದಿಂದ ಶನಿವಾರದವರೆಗೆ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ? ಇಲ್ಲಿ ತಿಳಿಯಿರಿ…

ಮೇಷ ರಾಶಿ

ಈ ವಾರ ಮೇಷ ರಾಶಿಗೆ ಶುಭಫಲ. ದ್ವಿತೀಯದಲ್ಲಿ ಶುಕ್ರ, ಬುಧ, ಸೂರ್ಯ, ಗುರುವಿರುವುದು ಸಕಾರಾತ್ಮಕವಾಗಿರುವಿರಿ.‌ ಸೋಲನ್ನೂ ಸಹ ಒಳ್ಳೆಯ ರೀತಿಯಲ್ಲಿ ಸ್ವೀಕರಿಸಲಿದ್ದೀರಿ. ಸಂಪತ್ತು ಗಳಿಕೆ ಮಾಡುವಿರಿ. ಸಂಗಾತಿಯ ಬಗ್ಗೆ ಕಾಳಜಿ ಹೆಚ್ಚಾಗುವುದು. ನಿಮ್ಮ ಮಾತಿಗೆ ಗೌರವ ಸಿಗಲಿದೆ. ಕಾರ್ತಿಕೇಯನ ಸ್ಮರಣೆಯು ನಿಮಗೆ ಒಳ್ಳೆಯ ದಾರಿಯಲ್ಲಿ ನಡೆಸಲಿದೆ.

ವೃಷಭ ರಾಶಿ

ವೃಷಭ ರಾಶಿಗೆ ಮಿಶ್ರಫಲ ಇರಲಿದೆ.‌ ಮಾನಸಿಕವಾಗಿ ಗಟ್ಟಿಯಾಗಿದ್ದರೂ ಸಹ ದೈಹಿಕವಾಗಿ ದುರ್ಬಲರಾಗುವಿರಿ. ಕೆಮ್ಮು ಕಫದಿಂದ ನೀವು ಬಳಲುತ್ತೀರಿ. ಅಲಂಕಾರಕ್ಕೆ ಹೆಚ್ಚು ಮಹತ್ತ್ವ ಕೊಡುವಿರಿ. ಆರೋಗ್ಯವನ್ನು ಕಾಪಾಡಿಕೊಳ್ಳಲು ಸಮಯ ಮೀಸಲಿಡಿ. ನಿಮ್ಮ ಕೆಲಸಕ್ಕೆ ಸಂಗಾತಿಯ ಸಹಕಾರ ಸಿಗಲಿದೆ. ಮಹಾಲಕ್ಷ್ಮಿ ಉಪಾಸನೆಯನ್ನು ಭಕ್ತಿಯಿಂದ ಮಾಡಿ.

ಮಿಥುನ ರಾಶಿ

ಮಿಥುನ ರಾಶಿಯವರು ಈ ವಾರ ಜಾಗೃತೆಯಿಂದಿರಬೇಕು. ದ್ವಾದಶದಲ್ಲಿ ಇರುವ ಸೂರ್ಯ, ಬುಧ, ಗುರು, ಶುಕ್ರರು ಪ್ರತಿಕೂಲವನ್ನೇ ಸೃಷ್ಟಿಸುವರು. ಯಾವುದೇ ಸಂದರ್ಭದಲ್ಲಿಯೂ ದೈವವನ್ನು ಮರೆಯದೇ ಹೆಜ್ಜೆ ಇಡುವುದು ಬೇಡವೇ ಬೇಡ. ದೈವ ಕಾರ್ಯವನ್ನು ಹೆಚ್ಚು ಮಾಡುವುದು ಅಗತ್ಯ. ಗುರುವಿನ ದರ್ಶನವನ್ನು ಮಾಡಿ, ಆಶೀರ್ವಾದ ಪಡೆಯುವುದು ನಿಮ್ಮ ಆತಂಕವನ್ನು ದೂರಮಾಡುವುದು.

ಕರ್ಕ ರಾಶಿ

ಕರ್ಕ ರಾಶಿಗೆ ಈ ವಾರ ಶುಭವಿದೆ. ಶುಕ್ರನಿಂದಾಗಿ ಹೆಚ್ಚಿನ ಆದಾಯ ದೊರೆಯಲಿದೆ. ಒಳ್ಳೆಯ ಭೋಗ, ಸಿರಿವಂತಿಕೆ ಅನುಭವಿಸುವಂತೆ ಮಾಡುವನು. ದೈವ ನಿಮ್ಮನ್ನು ಸತ್ಕಾರ್ಯಕ್ಕೆ ಪ್ರೇರಿಸುವುದು. ಸಕಾರಾತ್ಮಕವಾಗಿ ಆಲೋಚನೆ ಮಾಡಿ ಒಳ್ಳೆಯ ಕೆಲಸಗಳನ್ನು ಮಾಡಿ.

ಸಿಂಹ ರಾಶಿ

ಸಿಂಹ ರಾಶಿಗೆ ಈ ವಾರ ಮಿಶ್ರಫಲ ಸಿಗಲಿದೆ. ಸರ್ಕಾರಿ ಉದ್ಯೋಗದ ಸಾಧ್ಯತೆ ಇದೆ. ಸ್ತ್ರೀಯರಿಂದ ಅನುಕೂಲತೆಗಳು ದೊರೆಯಬಹುದು. ವಿನ್ಯಾಸಕಾರರು, ಕಲಾವಿದರು ಹೆಚ್ಚಿನ ಜನಪ್ರಿಯತೆ, ಸಂಪತ್ತು ಗಳಿಸುವರು. ಸ್ವಂತ ಉದ್ಯಮ ಊರ್ಜಿತವಾಗಲು ಇದು ಒಳ್ಳೆಯ ಕಾಲ.

ಕನ್ಯಾ ರಾಶಿ

ಕನ್ಯಾ ರಾಶಿಗೆ ಈ ವಾರ ಶುಭ ಆಗಲಿದೆ. ಶುಕ್ರನ ಸ್ಥಾನ ಬದಲಾವಣೆಯಿಂದ ಜೀವನದಲ್ಲಿ ಅನೇಕ ಬದಲಾವಣೆ ಆಗುವ ಸಾಧ್ಯತೆ ಇದೆ. ಬಹಳ ಸಮಯದಿಂದ ಬಾರದೇ ಇದ್ದ ಸಂಪತ್ತು ಈಗ ನಿಮ್ಮ ಕೈ ಸೇರುತ್ತದೆ.‌ ನಿಮ್ಮ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಸಿಕ್ಕಿ. ಪ್ರತಿಭೆಗೆ  ಸೂಕ್ತಸ್ಥಾನಮಾನವನ್ನು ಸಹ ದೊರಕುತ್ತದೆ. ತಂದೆಯ ಕಡೆಯಿಂದ ಸಿಗಬೇಕಾಗಿದ್ದ ಆಸ್ತಿ ಸಿಗಲಿದೆ. ಈ ವಾರ ಅತ್ಯುತ್ಸಾಹದ ವಾರ ಆಗಲಿದೆ.

ತುಲಾ ರಾಶಿ

ತುಲಾ ರಾಶಿಗೆ ಈ ವಾರ ಅಷ್ಟು ಒಳ್ಳೆಯದಲ್ಲ. ಶುಕ್ರನು ಅಷ್ಟಮಸ್ಥಾನಕ್ಕೆ ಬರುವುದರಿಂದ ವಾಹನ ಅಪಘಾತ, ಆರ್ಥಿಕ ನಷ್ಟವು ಆಗುವ ಸಂಭವ ಇದೆ. ಸೃಜನಾತ್ಮಕ ಕೆಲಸಕ್ಕೆ ಆದ್ಯತೆ ಕಡಿಮೆ ಆಗುತ್ತದೆ. ಒತ್ತಡದಿಂದಾಗಿ ನಿಮ್ಮ ಪ್ರತಿಭೆ ತೋರಿಸಲು ಸಾಧ್ಯ ಆಗದು. ಸ್ತ್ರೀಯರು ನಿಮ್ಮ ಬಗ್ಗೆ ಅಪಪ್ರಚಾರ ಮಾಡಲಿದ್ದು, ಅದನ್ನು ನಿವಾರಿಸಲು ಸಾಧ್ಯ ಆಗದು. ಕಲೆಯಲ್ಲಿಯೂ ಆಸಕ್ತಿ ಕಡಿಮೆ ಆಗುವುದು. ಏನೂ ಬೇಡ ಎನಿಸುವುದು. ಆದರೆ ಧೈರ್ಯಗೆಡಬೇಡಿ.

ವೃಶ್ಚಿಕ ರಾಶಿ

ವಿವಾಹಕ್ಕೆ ಯೋಗ್ಯವಾದ ಸ್ಥಾನ ಪ್ರಾಪ್ತಿಯಾಗಿದೆ. ಎಲ್ಲ ಕಾರ್ಯಗಳು ಚೆನ್ನಾಗಿ ಆಗಲಿದೆ. ವ್ಯಾಪಾರ ವರ್ಗದವರು ತಮ್ಮ ದಾಖಲೆಗಳನ್ನು ಎಚ್ಚರಿಕೆಯಿಂದ ಇಟ್ಟುಕೊಳ್ಳಬೇಕು. ಹಣದ ವ್ಯವಹಾರದಲ್ಲಿ ಎಲ್ಲ ದಾಖಲೆಗಳು ಸೂಕ್ತವಾಗಿರಬೇಕು. ಇದರಿಂದ ಅನವಶ್ಯಕ ಸಮಸ್ಯೆ ತಪ್ಪುತ್ತದೆ. ಕುಟುಂಬ ಸುಖದಿಂದ‌ ಇರಲಿದೆ. ಸಂಗಾತಿಯ ಜೊತೆ ಇದ್ದ ಮನಸ್ತಾಪ ದೂರವಾಗಲಿದೆ. ಅನಾರೋಗ್ಯ ಕಡಿಮೆ ಆಗುವುದು.

ಧನು ರಾಶಿ

ಸ್ತ್ರೀಯರಿಂದ ಸಿಗಬೇಕಾದ ಸಹಾಯ ಸಿಗದೇ ಅವರು ನಿಮ್ಮನ್ನು ದ್ವೇಷಿಸಲು ತೊಡಗುವರು. ಆರ್ಥಿಕತೆಯ ಅಸಮತೋಲನ ಎದ್ದು ತೋರುವುದು. ಏನೂ ಮಾಡಲಾಗದ ಸ್ಥಿತಿ ನಿಮ್ಮದಾಗಬಹುದು. ಏಕೆಂದರೆ ಅದು ವಿವಾದವನ್ನು ಹೆಚ್ಚಿಸಬಹುದು. ಯುವಕರ ಒಡನಾಟದ ಪರಿಣಾಮ ಅವರ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಕಣ್ಣಿನ ಬಗ್ಗೆ ಜಾಗೃತೆವಹಿಸಿ. ವಾಹನದಿಂದ ತೊಂದರೆ ಆಗಬಹುದು.

ಮಕರ ರಾಶಿ

ಹೆಣ್ಣು ಮಕ್ಕಳಿರುವವರ ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಹೆಣ್ಣು ಮಕ್ಕಳಿಗೆ ಅವರಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ. ಈ ವಾರ ಸಾಕಷ್ಟು ಶ್ರಮ ಪಟ್ಟು ಗುರಿ ತಲುಪಲಿದ್ದೀರಿ. ದೂರಸಂಪರ್ಕ ವ್ಯವಹಾರ ಮಾಡುವ ಉದ್ಯಮಿಗ ನಿರಾಸೆ ಕಾದಿದೆ. ಸ್ವಲ್ಪ ಯೋಚಿಸಿ ವ್ಯಾಪಾರ ಮಾಡಿ. ವಿದ್ಯಾಭ್ಯಾಸದಲ್ಲಿ ಅತಿಯಾದ ಆತ್ಮವಿಶ್ವಾಸ ಬೇಡ. ನಿಮ್ಮ ಓದು ಸಹಜವಾಗಿ ಇರಲಿ. ನಿಮಗೆ ತೊಂದರೆಯಾಗುವ ಅಂಶಗಳಿಂದ ದೂರ ಇರಿ.

ಕುಂಭ ರಾಶಿ

ಈ ವಾರ ಕೆಲ ಬದಲಾವಣೆ ಆಗಲಿವೆ. ನಿಮ್ಮ ಮೇಲೆ ಉನ್ನತ ಅಧಿಕಾರಿಗಳ ಕಣ್ಗಾವಲು ಇರಲಿದೆ. ದೋಷ ಬಾರದಂತೆ ಎಲ್ಲಾ ಕೆಲಸಗಳನ್ನು ಜಾಗರೂಕತೆಯಿಂದ ಮಾಡಿ. ತಂತ್ರಾಂಶಗಳ ವ್ಯಾಪಾರದಲ್ಲಿ ಲಾಭ ಸಿಗಲಿದೆ. ವಾಹನ ಸವಾರಿಯೀಂದ ಖುಷಿ ಸಿಗಲಿದೆ. ಈ ವಾರ ನೀವು ತುಲನಾತ್ಮಕವಾಗಿ ಒಳ್ಳೆಯದನ್ನು ಅನುಭವಿಸುವಿರಿ. ನಿಮ್ಮ ಗಂಭೀರ ಮಾತು ಜನರಿಗೆ ಇಷ್ಟವಾಗುತ್ತದೆ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಸಣ್ಣಪುಟ್ಟ ಖಾಯಿಲೆ ಬರಬಹುದು ಆದರೆ ನಿರ್ಲಕ್ಷ್ಯ ಬೇಡ.

ಮೀನ ರಾಶಿ

ಶುಕ್ರನ ಸ್ಥಾನಪಲ್ಲಟದಿಂದ ಕೆಲವು ಬದಲಾವಣೆಗಳು ಈ ರಾಶಿಯವರಿಗೆ ಆಗಲಿದೆ. ಶುಕ್ರನ ಸ್ವಕ್ಷೇತ್ರವಾದುದರಿಂದ ಹೆಚ್ಚು ಬಲವುಳ್ಳವನಾಗಿದ್ದಾನೆ. ಬಲದಿಂದ ಏನನ್ನಾದರೂ ಸಾಧಿಸಿಕೊಂಡು ಅನುಭವಿಸುವ ಸಾಧ್ಯತೆ ಇದೆ. ಸೂರ್ಯ ಹಾಗು ಗುರು, ಬುಧರ ಸಮಾಗಮವಾಗಲಿದ್ದು ಜಾಣ್ಮೆಯಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಸೋಮಾರಿತನವು ನಿಮಗೆ ಕೆಲಸವನ್ನು ಮಾಡಲು ಬಿಡುವುದಿಲ್ಲ. ಆಲಸ್ಯ ಬಿಟ್ಟು ಯೋಜನೆ ಹಾಕಿಕೊಂಡು ಮುಂದೆ ಹೋಗಿ.

Exit mobile version