China: ಭಾರತದ ಮೇಲೆ ಮ್ಯಾಂಗೊ ಮಹಾಯುದ್ಧಕ್ಕೆ ನಿಂತ ಚೀನಾ: ಉಡುಗೊರೆ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಭಾರತೀಯರು

0
149
China

China

1955 ರಲ್ಲಿ ಮೊದಲ ಭಾರಿಗೆ ಭಾರತದ ಆಗಿನ ಪ್ರಧಾನಿ ಜವಾಹರ್ ಲಾಲ್ ನೆಹರು ಚೀನಾ ದೇಶಕ್ಕೆ ಭೇಟಿ‌ ನೀಡಿದ್ದರು. ಚೀನಾದ ಆಗಿನ ಅಧ್ಯಕ್ಷ ನೆಹರು ಅವರಿಗೆ ಎರಡು ಅಪರೂಪದ ಜಿಂಕೆ‌, ನೂರು ಗೋಲ್ಡನ್ ಫಿಶ್, ಕೆಂಪು ತಲೆಯ ಬಾತುಕೋಳಿಗಳನ್ನು ನೀಡಿದ್ದರು.

ಇದಕ್ಕೆ ಪ್ರತಿಯಾಗಿ ನೆಹರು ಅವರು ಚೀನಾಕ್ಕೆ ಎಂಟು ಮಾವಿನ ಗಿಡಗಳನ್ನು ಅಲ್ಲಿನ ಜನರಿಗೆ ನೀಡಿದರು‌. ಆ ಚಾಲಾಕಿ ಚೀನಿಗಳಿಗೆ ಅಷ್ಟೆ ಸಾಕಾಗಿತ್ತು. ಈಗ ಅದ್ಯಾವ ಪರಿ ಮಾವನ್ನು ಚೀನಾದವರು ಬೆಳೆಯುತ್ತಿದ್ದಾರೆಂದರೆ. ಭಾರತದೊಂದಿಗೆ ಮಹಾ ಮಾವು ಸಮರವನ್ನೇ ಪ್ರಾರಂಭ ಮಾಡಿಬಿಟ್ಟಿದ್ದಾರೆ.

1960 ರ ವರೆಗೆ ಮಾವಿನ ಕೃಷಿಯ ಬಗ್ಗೆ ಶೂನ್ಯ ಜ್ಞಾನವಿದ್ದ ಚೀನಿಯರು ನೆಹರು ಇಂದ ಪಡೆದುಕೊಂಡಿದ್ದ ಮಾವಿನ ಸಸಿಗಳನ್ನು ನೆಟ್ಟು, ಅದನ್ನು ತಮ್ಮ ದೇಶದಲ್ಲಿ ಲಾಭದಾಯಕ ಕೃಷಿಯಾಗಿ ಬದಲಿಸುವ ನಿರ್ಣಯ ಮಾಡಿದರು‌. ನಂತರ ವರ್ಷದಲ್ಲೊ ಪಾಕಿಸ್ತಾನದ ನೆರವು ಪಡೆದು, ಪಾಕಿಸ್ತಾನದ ವಿದೇಶಿ ಮಂತ್ರಿಯಿಂದ ಉಡುಗೊರೆಯಾಗಿ ಸುಮಾರು 1000 ಮಾವಿನ ಸಸಿಗಳನ್ನು‌ 1968 ರಲ್ಲಿ ಪಡೆದುಕೊಂಡರು. ಅದಾದ ಬಳಿಕ ಅವರು ನಿಂತದ್ದೆ ಇಲ್ಲ. ಇಒಗ ಜಗತ್ತಿನಲ್ಲೇ ಅತಿ ಹೆಚ್ಚು ಮಾವು ಬೆಳೆವ ಮತ್ತು ರಫ್ತು ಮಾಡುವ ದೇಶಗಳಲ್ಲಿ ಚೀನಾ ದೇಶವೂ ಒಂದು.

ಶತಮಾನಗಳಿಂದಲೂ ನಾವು ಕೃಷಿ ಭಾರತದಲ್ಲಿದೆ. ಆದರೆ ಕೇವಲ ಸುಮಾರು 50 ವರ್ಷಗಳಲ್ಲಿ ಚೀನೀಯರು ಮಾವು ಕೃಷಿಯನ್ನು ಬೆಳೆಸಿದ ರೀತಿ, ಅದನ್ನು ವಾಣಿಜ್ಯೀಕರಣಗೊಳಿಸಿದ ರೀತಿ ಯಾವುದೇ ದೇಶಕ್ಕಾದರೂ ಮಾದರಿಯೇ. ಈಗಂತೂ ಚೀನಾದ ಮಾವಿಗೆ ಅದೆಷ್ಟು ಬೇಡಿಕೆ ಇದೆಯೆಂದರೆ ಚೀನಾದಿಂದ ಭಾರತಕ್ಕೆ ಮಾವು ಆಮದಾಗುತ್ತಿದೆ ಮಾತ್ರವಲ್ಲದೆ ಸ್ಥಳೀಯ ಮಾವಿಗಿಂತಲೂ ಹೆಚ್ಚಿನ ಬೆಲೆಗೆ ಮಾರಾಟ ಆಗುತ್ತಿವೆ‌.

ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಸಹ, ಅತಿ ಹೆಚ್ಚು ಮಾವಿನ ಹಣ್ಣು ಉತ್ಪಾದಿಸುವ ದೇಶಗಳ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲೇನೋ ಇದೆ. ಆದರೆ ರಫ್ತು ವಿಚಾರಸಲ್ಲಿ ಚೀನಾ ಹಾಗೂ ಇತರೆ ಕೆಲವು ದೇಶಗಳು ಭಾರತಕ್ಕಿಂತಲೂ ಬಹಳ ಮುಂದಿವೆ. ಮಾವಿನ ರಫ್ತಿನಿಂದ ಭಾರತಕ್ಕಿಂತಲೂ ಚೀನಾ ಹಾಗೂ ಇತರೆ ಕೆಲ ದೇಶಗಳು ಹೆಚ್ಚು ಹಣ ಸಂಪಾದನೆ ಮಾಡಿವೆ‌. ಇದಕ್ಕೆ ಕಾರಣ ಮಾವಿನ ಗುಣಮಟ್ಟ.

Dosa: ದಾರಿ ತಪ್ಪಿದ ದೋಸೆ, 15 ಸಾವಿರ ರೂಪಾಯಿ ನಷ್ಟ!

ಮಾವಿನ ಕೃಷಿ ಭಾರತಕ್ಕೆ ಹಳೆಯದ್ದಾರೂ ಭಾರತದಲ್ಲಿ ಮಾವಿನ ಕೃಷಿಯನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿಲ್ಲ. ಆದರೆ ಚೀನಾ, ಇಂಡೊನೆಷ್ಯಾಗಳಲ್ಲಿ ಮಾವಿನ ಕೃಷಿಯನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಹಾಗಾಗಿ ಅಲ್ಲಿ ಇಳುವರಿ, ರುಚಿ‌, ಗುಣಮಟ್ಟ ಎಲ್ಲವೂ ಹೆಚ್ಚು. ಹಾಗಾಗಿಯೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ‌ ಮಾವಿಗಿಂತಲೂ ಚೀನಾ ಹಾಗೂ ಇತರೆ ದೇಶಗಳ ಮಾವಿಗೆ ಹೆಚ್ಚು ಬೆಲೆ.

LEAVE A REPLY

Please enter your comment!
Please enter your name here