Site icon Samastha News

BCCI ವಾರ್ಷಿಕ ಆದಾಯವೆಷ್ಟು? ಐಪಿಎಲ್​ನಿಂದ ಗಳಿಸಿದ ಹಣವೆಷ್ಟು?

BCCI

BCCI

ಭಾರತದ ಕ್ರಿಕೆಟ್​ ಅನ್ನು ನಿಯಂತ್ರಿಸುತ್ತಿರುವ ಬಿಸಿಸಿಐ (ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ) ಭಾರತದ ಅತ್ಯಂತ ಶ್ರೀಮಂತ ಸರ್ಕಾರಿ ಅಂಗ ಸಂಸ್ಥೆಗಳಲ್ಲಿ ಒಂದು. ಮಾತ್ರವಲ್ಲದೆ ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ಕ್ರಿಕೆಟ್ ಬೋರ್ಡ್ ಸಹ ಹೌದು. ಇಂಗ್ಲೆಂಡ್, ಆಸ್ಟ್ರೇಲಿಯಾದ ಕ್ರಿಕೆಟ್ ಬೋರ್ಡ್​ಗಳು ಭಾರತದ ಬಿಸಿಸಿಐನ ಅರ್ಧದಷ್ಟು ಶ್ರೀಮಂತಿಕೆಯನ್ನು ಸಹ ಹೊಂದಿಲ್ಲ. ಅಂದಹಾಗೆ ಬಿಸಿಸಿಐನ 2023ರ ವಾರ್ಷಿಕ ಆದಾಯ ಎಷ್ಟು? ಐಪಿಎಲ್ ಮಾತ್ರದಿಂದಲೇ ಪ್ರತಿ ವರ್ಷ ಬಿಸಿಸಿಐ ಗಳಿಸುತ್ತಿರುವ ಹಣವೆಷ್ಟು? ಇಲ್ಲಿದೆ ಮಾಹಿತಿ.

2023ರ ಐಪಿಎಲ್​ ಇಂದ ಬಿಸಿಸಿಐ ಗಳಿಸಿರುವ ಮೊತ್ತ ಬರೋಬ್ಬರಿ 5120 ಕೋಟಿ ರೂಪಾಯಿ. ತಮ್ಮ ಗಳಿಕೆಯನ್ನು ಸ್ವತಃ ಬಿಸಿಸಿಐ ಹೇಳಿಕೊಂಡಿದೆ. ಅಂದಹಾಗೆ 2022 ರಲ್ಲಿ ಬಿಸಿಸಿಐ, ಐಪಿಎಲ್​ ಟೂರ್ನಿಯಿಂದ ಗಳಿಸಿರುವ ಮೊತ್ತದ ದುಪ್ಪಟ್ಟು ಹಣವನ್ನು 2023 ರಲ್ಲಿ ಗಳಿಸಿದೆ. 2022 ರಲ್ಲಿ 2367 ಕೋಟಿ ರೂಪಾಯಿ ಹಣವನ್ನು ಬಿಸಿಸಿಐ, ಐಪಿಎಲ್​ನಿಂದ ಗಳಿಸಿತ್ತು. ಒಂದೇ ವರ್ಷದಲ್ಲಿ ಆ ಮೊತ್ತ ದುಪ್ಪಟ್ಟಾಗಿದೆ.

ಇನ್ನು ಬಿಸಿಸಿಐ 2023ರಲ್ಲಿ ಗಳಿಕೆ ಮಾಡಿರುವ ವಾರ್ಷಿಕ ಆದಾಯ ಬರೋಬ್ಬರಿ 11,769 ಕೋಟಿ ರೂಪಾಯಿ. 2022ರ ಆದಾಯದ ಸುಮಾರು 70% ಹೆಚ್ಚುವರಿ ಆದಾಯವನ್ನು 2023 ರಲ್ಲಿ ಬಿಸಿಸಿಐ ಗಳಿಸಿಕೊಂಡಿದೆ. ಮಾತ್ರವಲ್ಲದೆ ಕೋವಿಡ್ ವರ್ಷ ಹೊರತುಪಡಿಸಿದರೆ ವರ್ಷದಿಂದ ವರ್ಷಕ್ಕೆ ಬಿಸಿಸಿಐ ಆದಾಯದಲ್ಲಿ 50% ಗಿಂತಲೂ ಹೆಚ್ಚಳ ಆಗುತ್ತಲೇ ಹೋಗುತ್ತಿದೆ.

2023 ರಿಂದ 27ಕ್ಕೆ ಬಿಸಿಸಿಐ ಹೊಸ ಮೀಡಿಯಾ ಒಪ್ಪಂದವನ್ನು ಐಪಿಎಲ್ ಜೊತೆಗೆ ಮಾಡಿಕೊಂಡಿದೆ. ಈ ನಾಲ್ಕು ವರ್ಷದ ಮೀಡಿಯಾ ಒಪ್ಪಂದದ ಒಟ್ಟು ಮೌಲ್ಯ 49,390 ಕೋಟಿ ರೂಪಾಯಿಗಳು. ದರ ಹೊರತಾಗಿ ಸ್ಪಾನ್ಸರ್​ಶಿಪ್ ಡೀಲ್, ಮೀಡಿಯಾ ರೈಟ್ಸ್ ಆದಾಯದಲ್ಲಿ ಆಗಿರುವ ಹೆಚ್ಚಳ, ಫ್ಯಾಂಚೈಸ್​ಗಳು ಬಿಸಿಸಿಐಗೆ ಕಟ್ಟಬೇಕಾಗಿರುವ ಮೊತ್ತದಲ್ಲಿ ಹೆಚ್ಚಳ, ಸ್ಪಾನ್ಸರ್​ಶಿಪ್ ರೆವಿನ್ಯೂ ಹೆಚ್ಚಳ ಇದೆಲ್ಲದರಿಂದ ಬಿಸಿಸಿಐನ ಆದಾಯ ದೊಡ್ಡ ಮಟ್ಟದಲ್ಲಿ ಏರಿಕೆ ಆಗಿದೆ.

Sachin Tendulkar: ಕೆಲವೇ ಗಂಟೆಗಳಲ್ಲಿ ಕೋಟ್ಯಂತರ ಹಣ ಗಳಿಸಿದ ಸಚಿನ್ ತೆಂಡೂಲ್ಕರ್

ಐಪಿಎಲ್​ ಇಂದ ಮಾತ್ರವೇ ಅಲ್ಲದೆ ಡಬ್ಲುಪಿಎಲ್ (ವಿಮೆನ್ ಪ್ರೀಮಿಯರ್ ಲೀಗ್) ಇಂದ ಬಿಸಿಸಿಐ ಸುಮಾರು 1300 ಕೋಟಿ ರೂಪಾಯಿ ಆದಾಯ ಗಳಿಸಿದೆ. ಒಟ್ಟಾರೆಯಾಗಿ ಬಿಸಿಸಿಐ ಪ್ರಸ್ತುತ ಇಡೀ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಬೋರ್ಡ್ ಆಗಿದೆ.

Exit mobile version