Toll Plaza
ದೇವನಹಳ್ಳಿ ಟೋಲ್ ಅಥವಾ ಏರ್ಪೋರ್ಟ್ ಟೋಲ್ ಎಂದೇ ಖ್ಯಾತವಾಗಿರುವ ನವಯುಗ ಟೋಲ್, ಇಡೀ ಕರ್ನಾಟಕದಲ್ಲಿ ಅತ್ಯಂತ ದುಬಾರಿ ಟೋಲ್. ಪ್ರತಿದಿನ ಏರ್’ಪೋರ್ಟ್ ಗೆ ಹೋಗುವ ವಾಹನಗಳು, ಹೈದರಾಬಾದ್ ಕಡೆಗೆ ಹೋಗುವ, ಹೈದರಾಬಾದ್ ಕಡೆಯಿಂದ ಬೆಂಗಳೂರಿಗೆ ಬರುವ ಸಾವಿರಾರು ವಾಹನಗಳು ಈ ಟೋಲ್ ಮೂಲಕ ಸಂಚರಿಸುತ್ತವೆ. ಅತ್ಯಂತ ದುಬಾರಿ ಟೋಲ್ ಆಗಿರುವ ಜೊತೆಗೆ ಅತ್ಯಂಯ ಬ್ಯುಸಿ ಟೋಲ್ ಸಹ ಆಗಿದೆ ಇದು. ಅಂದಹಾಗೆ ಈ ಟೋಲ್ ಗೇಟ್ ನಲ್ಲಿ ಒಂದು ವರ್ಷಕ್ಕೆ ಸಂಗ್ರಹ ಆಗುವ ಹಣ ಎಷ್ಟು ಗೊತ್ತೆ?
2023-24 ರ ಆರ್ಥಿಕ ವರ್ಷದಲ್ಲಿ ದೇವನಹಳ್ಳಿ ನವಯುಗ ಟೋಲ್’ನಲ್ಲಿ ಬರೋಬ್ಬರಿ 308 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ. ಆ ಮೂಲಕ ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಹಣ ಸಂಗ್ರಹಿಸಿದ ಟೋಲ್ ಎನಿಸಿಕೊಂಡಿದೆ ಈ ಟೋಲ್. ರಾಜ್ಯಸಭೆಯಲ್ಲಿ ನ್ಯಾಷನಲ್ ಹೈವೆ ಟೋಲ್’ಗಳಿಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರ ಒದಗಿಸಿದಾಗ ಈ ಅಂಶ ಬಹಿರಂಗವಾಗಿದೆ.
ಕಳೆದ ಹತ್ತು ವರ್ಷದಲ್ಲಿ ಈ ಟೋಲ್ ಪ್ಲಾಜಾ ಸಂಗ್ರಹ ಮಾಡಿರುವ ಮೊತ್ತ 1600 ಕೋಟಿಗೂ ಹೆಚ್ಚು. 2018-19 ರಲ್ಲಿ ಈ ಟೋಲ್ ಪ್ಲಾಜಾದಿಂದ ವರ್ಷಕ್ಕೆ 180 ಕೋಟಿ ಸಂಗ್ರಹ ಆಗಿತ್ತು. ಕಳೆದ ಆರ್ಥಿಕ ವರ್ಷದಲ್ಲಿ ಸಂಗ್ರಹ ಆಗಿರುವ 308 ಕೋಟಿ ಹಣ, ಈ ಟೋಲ್ ಬೂತ್ ನಲ್ಲಿ ಈ ವರೆಗೆ ಸಂಗ್ರಹ ಆಗಿರುವ ಅತಿ ದೊಡ್ಡ ಮೊತ್ತವಾಗಿದೆ.
ವರ್ಷಕ್ಕೆ 308 ಕೋಟಿ ಸಂಗ್ರಹ ಆಗಿದೆ ಎಂದರೆ ಈ ಟೋಲ್’ನಲ್ಲಿ ಪ್ರತಿದಿನ ಸುಮಾರು 85 ಲಕ್ಷ ರೂಪಾಯಿ ಹಣ ಸಂಗ್ರಹ ಆಗುತ್ತಿದೆ. ವರ್ಷದಿಂದ ವರ್ಷಕ್ಕೆ ಕಲೆಕ್ಷನ್ ಹೆಚ್ಚಾಗುತ್ತಿದ್ದು, ಮುಂದಿನ ಆರ್ಥಕ ವರ್ಷದಲ್ಲಿ ಸುಮಾರು 500 ಕೋಟಿಗೂ ಹೆಚ್ಚು ಹಣ ಗಳಿಕೆ ಆಗಲಿದೆ.
Bengaluru: ಬೆಂಗಳೂರಿನಲ್ಲಿ ಶುರುವಾಗಿದ ಹೊಸ ರೀತಿಯ ಕಳ್ಳತನ, ಇರಲಿ ಜಾಗೃತೆ
ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಕಣಿಮಿಣಿಕೆ ಟೋಲ್ 2023-24 ರಲ್ಲಿ 91 ಕೋಟಿ ಹಣ ಸಂಗ್ರಹಿಸಿದೆ. ಅದೇ ಸೀಗೇಹಳ್ಳಿ ಟೋಲ್ ಇದೇ ಅವಧಿಯಲ್ಲಿ 77 ಕೋಟಿ ಹಣ ಸಂಗ್ರಹ ಮಾಡಿದೆ. ಮುಂದಿನ ದಿನಗಳಲ್ಲಿ ಸ್ಯಾಟಲೈಟ್ ಆಧರಿತ ಟೋಲ್ ಸಂಗ್ರಹ ಮಾದರಿ ಪರಿಚಯಗೊಳ್ಳುತ್ತಿದ್ದು, ಆಗ ಇನ್ನೂ ಹೆಚ್ಚು ಟೋಲ್ ಸಂಗ್ರಹ ಆಗಯವ ಸಾಧ್ಯತೆ ಇದೆ.