Road Reflector: ರೋಡ್ ರಿಫ್ಲೆಕ್ಟರ್ ಗಳು ಹೇಗೆ ಕೆಲಸ ಮಾಡುತ್ತವೆ, ಅವಕ್ಕೆ ವಿದ್ಯುತ್ ಹೇಗೆ ಸಿಗುತ್ತದೆ?

0
321
Road Reflector

Road Reflector

ರಸ್ತೆಗಳಿಗೆ ಅಳವಡಿಸಲಾಗಿರುವ ಸಣ್ಣ ಸಣ್ಣ ಚಪ್ಪಟೆ ವಸ್ತುಗಳನ್ನು ನೋಡಿಯೇ ಇರುತ್ತೀರಿ. ರಾತ್ರಿ ಗಾಡಿ ಓಡಿಸುವವರಿಗೆ ಈ ರಿಫ್ಲೆಕ್ಟರ್‍‍ಗಳಿಂದ ಬಹಳ ಅನುಕೂಲವಾಗುತ್ತದೆ. ರಾತ್ರಿ ಸಮಯ ಹೆಡ್ ಲೈಟ್ ನ ಬೆಳಕು ಇದ್ದರೂ ಸಹ ರಸ್ತೆಯ ತಿರುವುಗಲು, ರಸ್ತೆಯ ಡಿವೈಡರ್‍‍ಗಳು ಸರಿಯಾಗಿ ತಿಳಿಯುವುದಿಲ್ಲ. ಆದರೆ ಈ ರಸ್ತೆ ರಿಫ್ಲೆಕ್ಟರ್‍‍ಗಳು ಇರುವುದರಿಂದ ತಿರುವುಗಳು, ರಸ್ತೆಯ ಡಿವೈಡರ್‍‍ಗಳು ಸರಿಯಾಗಿ ಕಾಣುತ್ತವೆ. ಇವುಗಳಿಂದ ಇನ್ನೊಂದು ಅನುಕೂಲವೆಂದರೆ ಕಾರು, ಅಥವಾ ಬೈಕ್ ನ ಚಕ್ರಗಳು ರಿಫ್ಲೆಕ್ಟರ್‍‍ಗಳ ಮೇಲೆ ಹರಿದ ಕೂಡಲೇ ಜೋರು ಶಬ್ದ ಬಂದು, ಗಾಡಿ ಸಣ್ಣಗೆ ಅಲುಗಾಡಲು ಪ್ರಾರಂಭವಾಗುತ್ತದೆ, ಇದರಿಂದ ಚಾಲಕ ಹೆಚ್ಚು ಜಾಗರೂಕನಾಗಿ ಗಾಡಿ ಓಡಿಸುತ್ತಾನೆ. ಆದರೆ ಈ ರೋಡ್ ರಿಫ್ಲೆಕ್ಟರ್‍‍ಗಳು ಹೇಗೆ ಕೆಲಸ ಮಾಡುತ್ತವೆ? ರಾತ್ರಿ ಸಮಯ ಇವು ಹೇಗೆ ಆನ್ ಆಗುತ್ತವೆ? ಇವಕ್ಕೆ ವಿದ್ಯುತ್ ಎಲ್ಲಿಂದ ಸಿಗುತ್ತವೆ, ರೋಡ್ ರಿಫ್ಲೆಕ್ಟರ್‍‍ಗಳ ಬಣ್ಣಗಳ ವ್ಯತ್ಯಾಸಕ್ಕೆ ಕಾರಣವೇನು?

ಭಾರತದಲ್ಲಿ ಬಳಸಲಾಗುವ ರೋಡ್ ರಿಫ್ಲೆಕ್ಟರ್ ಗಳಿಗೆ ವಿದ್ಯುತ್ ಶಕ್ತಿಯ ಅವಶ್ಯಕತೆ ಇಲ್ಲ. ರೋಡ್ ರಿಫ್ಲೆಕ್ಟರ್ ಗಳ ಮೇಲೆ ಬೆಳಕಿಗೆ ಪ್ರತಿಫಲಿಸುವ ಭಿನ್ನ ಮಾದರಿಯ ಬಲ್ಬ್ ಗಳನ್ನು ಹಾಕಲಾಗಿರುತ್ತವೆ. ರಾತ್ರಿ ಸಮಯ ಗಾಡಿಗಳ ಹೆಡ್ ಲೈಟ್ ನ ಬೆಳಕು ಅದರ ಮೇಲೆ ಬಿದ್ದ ಕೂಡಲೇ ಅವು ಹೊಳೆಯಲು ಆರಂಭಿಸುತ್ತವೆ. ನೀವು ಸರಿಯಾಗಿ ಗಮನಿಸಿದರೆ ವಾಹನಕ್ಕೆ ಹತ್ತಿರದಲ್ಲಿರುವ ರಿಫ್ಲೆಕ್ಟರ್‍‍ಗಳು ಜೋರಾಗಿ ಹೊಳೆಯುತ್ತಿರುತ್ತವೆ, ದೂರದಲ್ಲಿರುವವವು ತುಸು ಮಂದವಾಗಿ ಹೊಳೆಯುತ್ತಿರುತ್ತವೆ. ಹಗಲಿನಲ್ಲಿ ಸಹ ಇವು ಹೊಳೆಯುತ್ತವೆಯಾದರೂ ಹೆಚ್ಚು ಪ್ರಕಾಶಮಾನವಾದ ಬೆಳಕಿರುವ ಕಾರಣ ರಿಫ್ಲೆಕ್ಟರ್ ಗಳ ಬೆಳಕುಗೋಚರಿಸುವುದಿಲ್ಲ.

ಕೆಲವೆಡೆ ಸೋಲಾರ್ ರಿಫ್ಲೆಕ್ಟರ್‍‍ಗಳನ್ನು ಸಹ ಬಳಲಾಗುತ್ತದೆ. ಸೋಲಾರ್ ರಿಫ್ಲೆಕ್ಟರ್‍‍ಗಳ ಮೇಲೆ ಸಣ್ಣ ಸೋಲಾರ್ ಪ್ಯಾನಲ್ ಇರುತ್ತದೆ. ಅದು ಹಗಲಿನಲ್ಲಿ ಸೂರ್ಯನ ಶಾಖ ಹೀರಿಕೊಂಡು ರಾತ್ರಿ ರಿಫ್ಲೆಕ್ಟರ್‍‍ಗಳ ಎಲ್ಇಡಿ ಬಲ್ಬ್ ಕೆಲಸ ಮಾಡಲು ಶಕ್ತಿ ಒದಗಿಸುತ್ತವೆ. ಇದರ ಬಳಕೆ ಭಾರತದಲ್ಲಿ ತುಸು ಕಡಿಮೆ. ಪ್ರಸ್ತುತ ಪ್ಲಾಸ್ಟಿಕ್‍‍ನ ರಿಫ್ಲೆಕ್ಟರ್‍‍ಗಳನ್ನೇ ಹೆಚ್ಚು ಬಳಸಲಾಗುತ್ತಿದೆ. ಕೆಲವೆಡೆ ಅಲ್ಯುಮೀನಿಯಮ್ ರಿಫ್ಲೆಕ್ಟರ್‍‍ಗಳ ಬಳಕೆಯೂ ಇದೆ. ಹೆಚ್ಚು ತೂಕದ ವಾಹನಗಳು ಓಡಾಡುವ ರಸ್ತೆಗಳಲ್ಲಿ ಅಲ್ಯುಮೀನಿಯಂ ಬಳಸಲಾಗುತ್ತದೆ.

Bengaluru Hotel: ಬೆಂಗಳೂರಿನ ಈ ಹೋಟೆಲ್ ನಲ್ಲಿ 12 ರೂಪಾಯಿಗೆ ಇಡ್ಲಿ, 15 ಕ್ಕೆ  ಕೇಸರಿಬಾತ್, ಮಸಾಲೆ ದೋಸೆ ಬೆಲೆ ಎಷ್ಟು ಗೊತ್ತೆ?

ಇನ್ನು ಭಾರತದಲ್ಲಿ ಕೆಂಪು, ಹಳದಿ ಹಾಗೂ ಬಿಳಿ ಬಣ್ಣದ ರಿಫ್ಲೆಕ್ಟರ್‍‍ಗಳನ್ನು ಬಳಸಲಾಗುತ್ತದೆ. ರಸ್ತೆ ಡಿವೈಡ್ ಅನ್ನು ಸೂಚಿಸಲು ಹಳದಿ ಬಣ್ಣದ ರಿಫ್ಲೆಕ್ಟರ್‍‍ಗಳನ್ನು ಬಳಸಲಾಗುತ್ತದೆ. ಒಂದೇ ರಸ್ತೆಯಲ್ಲಿ ದ್ವಿಮುಖ ಸಂಚಾರವಿದ್ದಾಗ ಮಧ್ಯದಲ್ಲಿ ಹಳದಿ ಬಣ್ಣದ ರಿಫ್ಲೆಕ್ಟರ್‍‍ಗಳನ್ನು ಅಳವಡಿಸಲಾಗಿರುತ್ತದೆ. ಇನ್ನು ಬಿಳಿ ಬಣ್ಣದ ರಿಫ್ಲೆಕ್ಟರ್ ಅನ್ನು ಲೇನ್ ಸೂಚನೆಗೆ ಬಳಸಲಾಗುತ್ತದೆ. ಒನ್ ವೇ ನಲ್ಲಿ ಸಾಮಾನ್ಯವಾಗಿ ಇದರ ಬಳಕೆ ಹೆಚ್ಚಿರುತ್ತದೆ. ಇನ್ನು ಕೆಂಪು ರಿಫ್ಲೆಕ್ಟರ್‍‍ಗಳನ್ನು ರಸ್ತೆಯ ಅಂಚಿನಲ್ಲಿ ಬಳಸಲಾಗಿರುತ್ತದೆ. ಕೆಂಪು ರಿಫ್ಲೆಕ್ಟರ್ ದಾಟಿದರೆ ಅಪಾಯವೆಂಬುದನ್ನು ಇದು ಸೂಚಿಸುತ್ತದೆ.

LEAVE A REPLY

Please enter your comment!
Please enter your name here