Personal Finance: 25 ಸಾವಿರ ಸಂಬಳದವರು ಕೋಟ್ಯಧೀಶರಾಗಬಹುದು, ಹೇಗೆ?

0
119
Personal Finance
Personal Finance

Personal Finance

ಕೋಟ್ಯಧಿಪತಿ ಆಗುವುದು ಪ್ರತಿಯೊಬ್ಬ ಮಧ್ಯಮ ವರ್ಗದವನ ಕನಸು. ಆದರೆ ಭಾರತದ ಬಹುತೇಕ ಉದ್ಯೋಗಗಳು ಕೊಡುವ ಸಂಬಳದಲ್ಲಿ ದಿನ ನಿತ್ಯದ ಖರ್ಚು ಕುಟುಂಬದ ಖರ್ಚು ತೆಗೆದರೆ ಕೊನೆಗೆ ಉಳಿಯುವುದು ಕೆಲವು ಸಾವಿರ ಮಾತ್ರ. ಆದರೆ ನಿಮ್ಮ ಸಂಬಳವನ್ನು ಸರಿಯಾಗಿ ಪ್ಲ್ಯಾನ್ ಮಾಡಿ ಹೂಡಿಕೆ ಮಾಡಿದರೆ ನೀವೂ ಸಹ ಕೋಟ್ಯಧೀಶರಾಗಬಹುದು. ವಿವರ ಇಲ್ಲಿದೆ.

25 ಸಾವಿರ ಸಂಬಳದವರು, ಹಣ ಉಳಿತಾಯ ಮಾಡಿ ಕೋಟ್ಯಧೀಶರಾಗಲು ಇರುವ ಏಕೈಕ ದಾರಿಯೆಂದರೆ ಅದು ಎಸ್ ಐಪಿ (SIP). ಸಿಸ್ಟಮ್ಯಾಟಿಕ್ ಇನ್ ವೆಸ್ಟ್ ಪ್ಲ್ಯಾನ್ ಮಾಡಿದರೆ ಖಂಡಿತ 25 ಸಾವಿರ ಸಂಬಳ ಪಡೆಯುವ ವ್ಯಕ್ತಿಯೂ 1 ಕೋಟಿ ಹಣ ಗಳಿಸಬಹುದು. ಆದರೆ ಇದಕ್ಕೆ ಆರ್ಥಿಕ ಶಿಸ್ತು ಮತ್ತು ನಂಬಿಕೆ ಅತ್ಯಂತ ಮುಖ್ಯ.

SIP ಗಳಲ್ಲಿ ಹಲವು ವಿಧಗಳಿವೆ ಅದರಲ್ಲಿ ಉತ್ತಮ ಲಾಭ ಕೊಡುವ ಎರಡು ಪ್ರಮುಖ SIP ಗಳೆಂದರೆ ಮ್ಯೂಚುಲ್ ಫಂಡ್ ಮತ್ತು ಚಿನ್ನದ ಮೇಲಿನ ಹೂಡಿಕೆ. 25 ಸಾವಿರದ ಸಂಬಳದಲ್ಲಿ ಖರ್ಚನ್ನೆಲ್ಲ ತೆಗೆದು ಕೊನೆಗೆ 5000 ಸಾವಿರ ರೂಪಾಯಿ ಹಣ ಉಳಿಸಿದರೂ ಸಾಕು ಕೋಟ್ಯಧೀಶರಾಗಬಹುದು. ಯಾವುದಾದರೂ ಉತ್ತಮವಾದ ವಾರ್ಷಿಕ 12% ಲಾಭ ನೀಡುವ ಮ್ಯೂಚುವಲ್ ಫಂಡ್ ನಲ್ಲಿ ಪ್ರತಿ ತಿಂಗಳು ಹೂಡಿಕೆ ಮಾಡುತ್ತಾ ಸಾಗಿದರೆ 26 ವರ್ಷಕ್ಕೆ ನಿಮ್ಮ ಖಾತೆಯಲ್ಲಿ 1 ಕೋಟಿ ರೂಪಾಯಿ ಹಣ ಸೇರಿರುತ್ತದೆ. ಆದರೆ ನೀವು ಪ್ರತಿ ತಿಂಗಳು ಕಟ್ಟುವ ಹಣ ಕೇವಲ 15.60 ಲಕ್ಷ ರೂಪಾಯಿ ಮಾತ್ರ! ಕೇವಲ 15.60 ಲಕ್ಷ ರೂಪಾಯಿ ಹೂಡಿಕೆ ಮಾಡಿ ನೀವು ಕೋಟಿ ಗಳಿಸುತ್ತೀರ. ಇದು SIP ಯ ಮ್ಯಾಜಿಕ್.

Success story: ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಈತನ ತಿಂಗಳ ಆದಾಯ 50 ಲಕ್ಷ ರೂಪಾಯಿ!

ಒಂದೊಮ್ಮೆ ನೀವು ತಿಂಗಳಿಗೆ 7,500 ರೂಪಾಯಿ ಉಳಿಸಿ ಹೂಡಿಕೆ ಮಾಡಿದಿರಿ ಅಂದುಕೊಳ್ಳೋಣ ಆಗ ನೀವು ಕೋಟ್ಯಧೀಶರಾಗಲು 23 ವರ್ಷ ಸಾಕು. ಒಂದೊಮ್ಮೆ ನೀವು 10 ಸಾವಿರ ರೂಪಾಯಿ ಪ್ರತಿ ತಿಂಗಳು ಹೂಡಿಕೆ ಮಾಡಿದ್ದೇ ಆದಲ್ಲಿ 1 ಕೋಟಿ ರೂಪಾಯಿ ಗಳಿಸಲು ಕೇವಲ 20 ವರ್ಷ ಸಾಕು. ಅತ್ಯಂತ ಕಡಿಮೆ ಹಣ ಹೂಡಿಕೆ ಮಾಡಿ ಹೆಚ್ಚು ಲಾಭ ಪಡೆಯುವ ಸರಳ ಹಾಗೂ ನಿಉಮ ಬದ್ಧ ದಾರಿಯೆಂದರೆ ಅದು SIP.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ. ಈಗ 25 ಸಾವಿರ ಸಂಬಳ ಪಡೆಯುತ್ತಿರುವ ವ್ಯಕ್ತಿ ಪ್ರತಿ ವರ್ಷವೂ ಅಷ್ಟೆ ಸಂಬಳ ಪಡೆಯುವುದಿಲ್ಲ. ಬದಲಿಗೆ ಆತನ ಸಂಬಳ ಪ್ರತಿ ವರ್ಷ ಏರಿಕೆ ಆಗುತ್ತಲೇ ಇರುತ್ತದೆ. ಆಗೆಲ್ಲ SIP ಮಾಡುವ ಮೊತ್ತವನ್ನು ಏರಿಸಿಕೊಂಡು ಹೋದರೆ 20 ವರ್ಷಕ್ಕಿಂತಲೂ ಕಡಿಮೆ ಸಮಯದಲ್ಲಿಯೇ ಕೋಟಿ ಹಣ ಪಡೆಯಬಹುದು.

LEAVE A REPLY

Please enter your comment!
Please enter your name here