Kashaya: ಚಳಿಗಾಲಕ್ಕೆ ಈ ಕಷಾಯ ಮಾಡಿ ಸೇವಿಸಿ, ನೆಗಡಿ, ಕೆಮ್ಮು ದೂರ ಮಾಡಿ

0
79
Kashaya

Kashaya

ಚಳಿಗಾಲ ಆರಂಭವಾಗಿ ತಿಂಗಳಾಗುತ್ತಾ ಬಂದಿದೆ. ಚುಮು-ಚುಮು ಚಳಿ ದಿನವೆಲ್ಲ ಇರುತ್ತಿದೆ. ಹಿಂದೆಂದಿಗಿಂತಲೂ ಈಗ ಚಳಿಯ ಪ್ರಮಾಣ ಹೆಚ್ಚಿದ್ದಂತೆ ತೋರುತ್ತಿದೆ. ಚಳಿಗಾಲ ಅನುಭವಿಸಲು ಖುಷಿಯ ಕಾಲವೇ ಆದರೂ ಹಲವು ರೀತಿಯ ಅನಾರೋಗ್ಯವನ್ನು ತರುವ ಸಮಯವೂ ಹೌದು.

ಸತತ ಚಳಿಗೆ ನೆಗಡಿ, ಕೆಮ್ಮು, ಜ್ವರಗಳು ಬಹು ಬೇಗನೆ ಬರುತ್ತವೆ. ಬಂದರೆ ಬೇಗನೆ ವಾಸಿಯೂ ಆಗುವುದಿಲ್ಲ. ಹಾಗಾಗಿ ಇಂಥಹಾ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಕೆಲವು ಮನೆಯಲ್ಲೇ ಮಾಡುವ ಆಹಾರ, ಪೇಯಗಳಿಂದ ಚಳಿಯಿಂದ ದೇಹವನ್ನು ರಕ್ಷಿಸಿಕೊಳ್ಳಬಹುದು. ಚಳಿಯಿಂದ ದೇಹವನ್ನು ರಕ್ಷಿಸಿಕೊಳ್ಳಲು ಕಷಾಯ ಒಂದೊಳ್ಳೆ ಆಹಾರ. ಹಲವು ರೀತಿಯ ಕಷಾಯಗಳನ್ನು ಮಾಡಿಕೊಳ್ಳಬಹುದಾಗಿದೆ. ಅದರಲ್ಲಿ ಒಂದು ಉತ್ತಮವಾದ ಕಷಾಯದ ರೆಸಿಪಿ ಇಲ್ಲಿದೆ.

ಕಷಾಯ ಮಾಡಲು ಬೇಕಾಗುವ ಸಾಮಗ್ರಿಗಳು

ಒಣ ಶುಂಠಿ (ಒಂದು ಇಂಚು), ಕಲ್ಲು ಸಕ್ಕರೆ ತುಣುಕು, ಸಂಬರ ಬಳ್ಳಿ ಅಥವಾ ದೊಡ್ಡಪತ್ರೆ 3-4 ಎಲೆ, ತುಳಸಿ ಎಲೆ ಐದಾರು, ಕರಿಮೆಣಸು ಟೀ ಸ್ಪೂನ್, ನೀರು ಎರಡು ಗ್ಲಾಸ್.

Sadhguru: ಮಲಗುವ ಮುಂಚೆ ಸದ್ಗುರು ಹೇಳಿದ ಈ ಕಾರ್ಯ ಮಾಡಿ

ಮಾಡುವ ವಿಧಾನ

ಪಾತ್ರೆಯಲ್ಲಿ ಎರಡು ಲೋಟ ನೀರು ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. ಶುಂಠಿಯನ್ನು ಜಜ್ಜಿಕೊಳ್ಳಿ. ಆ ನಂತರ ಶುಂಠಿ ಪುಡಿ, ಕಲ್ಲು ಸಕ್ಕರೆ, ಕರಿಮೆಣಸಿನ ಪುಡಿ, ದೊಡ್ಡಪತ್ರೆ, ತುಳಸಿ ಎಲೆಗಳನ್ನು ಬಿಸಿನೀರಿಗೆ ಹಾಕಿ ಚೆನ್ನಾಗಿ ಕುದಿಸಿ. 15 ನಿಮಿಷ ಕುದಿಸಿದ ಬಳಿಕ ಅದನ್ನು ಸೋಸಿಕೊಂಡು ನಿಧಾನಕ್ಕೆ ಸೇವಿಸಿ, ದೇಹವೆಲ್ಲ ಬಿಸಿಯಾಗಿ, ಚಳಿಯಿಂದ ರಕ್ಷಣೆ ನೀಡುತ್ತದೆ.

LEAVE A REPLY

Please enter your comment!
Please enter your name here