Bread Omelette
ಹೊರಗೆ ಒಳ್ಳೆಯ ವಾತಾವರಣವಿದೆ. ಮಳೆ ಬರುವಂತಿದೆ. ತಣ್ಣನೆಯ ವಾತಾವರಣದಿಂದಾಗಿ ಹೊರಗೆ ಹೋಗುವ ಮನಸ್ಸಾಗುತ್ತಿಲ್ಲ. ಬೆಚ್ಚಗೆ ಮನೆಯಲ್ಲಿ ಕುಳಿತಿರೋಣ ಎನಿಸುತ್ತಿದೆ. ಇದರ ಜೊತೆಗೆ ಖಾರವಾಗಿ, ಮಸಾಲೆಯುಕ್ತವಾಗಿ ತುಸು ಕ್ರಿಸ್ಪಿಯಾಗಿ ಏನನ್ನಾದರೂ ತಿನ್ನುವ ಮನಸ್ಸಾಗುತ್ತಿದೆ ಅಲ್ಲವೆ? ಹಾಗಿದ್ದರೆ ಈ ವೆದರ್ಗೆ ಒಗ್ಗುವಂತೆ ಬಹು ಬೇಗನೆ, ಕ್ರಿಸ್ಪಿಯಾಗಿ ‘ಚಟ್ ಪಟಾ ಬ್ರೆಡ್ ಆಮ್ಲೇಟ್’ ಮಾಡುವುದು ಹೇಗೆಂದು ಇಲ್ಲಿ ತಿಳಿಯೋಣ
ಚಟ್‌ಪಟಾ ಬ್ರೆಡ್ ಆಮ್ಮೆಟ್ ಮಾಡಲು ಬೇಕಾಗುವ ಸಾಮಗ್ರಿಗಳು
ಬ್ರೆಡ್ ತುಂಡುಗಳು 2, ಎಣ್ಣೆ 2 ಚಮಚ, ತುರಿದ ಶುಂಠಿ ಮುಕ್ಕಾಲು ಚಮಚ, ಹೆಚ್ಚಿದ ಹಸಿರು ಮೆಣಸಿನಕಾಯಿ 1, ಹೆಚ್ಚಿದ ನೀರುಳ್ಳಿ ಮುಕ್ಕಾಲು ಕಪ್, ಅರಣಿನ ಪುಡಿ ಮುಕ್ಕಾಲು ಚಿಕ್ಕ ಚಮಚ, ಕೊತ್ತಂಬರಿಪುಡಿ ಅರ್ಧ ಚಿಕ್ಕ ಚಮಚ, ಜೀರಿಗೆಪುಡಿ ಒಂದು ಚಿಕ್ಕ ಚಮಚ, ಕೆಂಪುಮೆಣಸಿನಪುಡಿ ಮುಕ್ಕಾಲು ಚಿಕ್ಕ ಚಮಚ, ಹೆಚ್ಚಿದ ಟೊಮೇಟೋ ಮುಕ್ಕಾಲು ಕಪ್, ಮೊಟ್ಟೆ 3, ಚಾಟ್ ಮಸಾಲಾಪುಡಿ ಎರಡು ಚಿಕ್ಕ ಚಮಚ, ಹೆಚ್ಚಿದ ಬೆಳ್ಳುಳ್ಳಿ ಅರ್ಧ ಚಿಕ್ಕ ಚಮಚ, ಉಪ್ಪು ರುಚಿಗೆ ತಕ್ಕಷ್ಟು.
Darshan: ದರ್ಶನ್ ಒಳ್ಳೆಯತನವನ್ನು ಉದಾಹರಣೆ ಸಹಿತ ವಿವರಿಸಿದ ಹಿರಿಯ ನಿರ್ಮಾಪಕ
ಚಟ್‌ಪಟಾ ಬ್ರೆಡ್ ಆಮ್ಮೆಟ್ ಮಾಡುವ ವಿಧಾನ
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಹೆಚ್ಚಿದ ಬೆಳ್ಳುಳ್ಳಿ ಮತ್ತು ಶುಂಠಿ ತುರಿ ಸೇರಿಸಿ ಚೆನ್ನಾಗಿ ಹುರಿಯಿರಿ. ಹಸಿರು ಮೆಣಸಿನಕಾಯಿ ಮತ್ತು ನೀರುಳ್ಳಿ ಸೇರಿಸಿ ನಸುಕೆಂಪು ಬಣ್ಣ ಬರುವವರೆಗೆ ಚಮಚದಿಂದ ಆಡಿಸಿ.
‘ಅರಶಿಣ, ಕೊತ್ತಂಬರಿ, ಜೀರಿಗೆ ಮತ್ತು ಕೆಂಪುಮೆಣಸಿನಪುಡಿ ಸೇರಿಸಿ ಒಂದು ನಿಮಿಷ ಹುರಿಯಿರಿ. ಟೊಮೇಟೋ ಸೇರಿಸಿ ಒಂದು ನಿಮಿಷ ಕೈಯಾಡಿಸಿ, ಇಳಿಸಿಬಿಡಿ.
ಮೊಟ್ಟೆ ಒಡೆದು ಚೆನ್ನಾಗಿ ಗೊಟಾಯಿಸಿ ಅಥವಾ ಚಮಚದಿಂದ ಅಲ್ಲಾಡಿಸಿ. ಇದಕ್ಕೆ ಸಿದ್ದಪಡಿಸಿದ ಮಸಾಲೆ ಸೇರಿಸಿ ಮತ್ತೆ ಅಲ್ಲಾಡಿಸಿ.
ಆಮ್ಮೆಟ್ ತಯಾರಿಸುವ ಬಾಣಲೆಗೆ ಎಣ್ಣೆ ಸವರಿ ತಯಾರಿಸಿದ ಮೊಟ್ಟೆ ಮಿಶ್ರಣವನ್ನು ಸಣ್ಣ ಉರಿಯಲ್ಲಿ ಹರಡಿರಿ.
ಆಮ್ಲೆಟ್ ಅರ್ಧ ಬೇಯುತ್ತಲೇ ಆಮ್ಲೆಟ್ನ ಮಧ್ಯಭಾಗಕ್ಕೆ ಒಂದರ ಮುಂದೊಂದು ಬ್ರೆಡ್ ತುಂಡನ್ನು ಇಡಿ. ಬದಿಗೆ ಉಳಿದ ಆಮ್ಲೆಟ್ ಅನ್ನು ಬ್ರೆಡ್ಡಿನ ಮೇಲೆ ಮಡಚಿರಿ.
ನಾಜೂಕಾಗಿ ಆಮ್ಮೆಟನ್ನು ಮಗುಚಿ ಇನ್ನೊಂದು ಬದಿಯನ್ನು ಬೇಯಿಸಿ. ಕೆಂಪಾಗಿ ಹುರಿದು ಒಂದು ಪ್ಲೇಟಿನ ಮೇಲೆ ತೆಗೆಯಿರಿ.
ತಯಾರಿಸಿದ ಆಮ್ಲೆಟನ್ನು ಒಂದು ಇಂಚಿನ ಚೌಕಾಕಾರದ ತುಂಡುಗಳನ್ನಾಗಿ ಕತ್ತರಿಸಿ ಪುನಃ ಆಮ್ಮೆಟ್ ಪ್ಯಾನಿಗೆ ವರ್ಗಾಯಿಸಿ.
ಮೇಲಿನಿಂದ ಚಾಟ್ ಮಸಾಲಾಪುಡಿ ಉದುರಿಸಿ, ಎರಡು ನಿಮಿಷ ಹುರಿಯಿರಿ. ಬಿಸಿಬಿಸಿ ಚಹಾದೊಂದಿಗೆ ಸವಿಯಿರಿ.