Site icon Samastha News

Fruits: ಕೀಟನಾಶಕ ಬಳಸಿದ ಹಣ್ಣು ತಿನ್ನುವ ಮುಂಚೆ ಹೀಗೆ ಮಾಡಲೇ ಬೇಕು

Fruits

Fruits

ಯಾವುದೇ ಹಣ್ಣುಗಳಾಗಲಿ ಕೀಟನಾಶಕ ಬಳಸದೆ ಯಾವುದನ್ನೂ ಬೆಳೆಸಲಾಗುತ್ತಿಲ್ಲ. ಕೆಲ ಹಣ್ಣುಗಳಿಗಂತೂ ಅದೆಷ್ಟು ಕೀಟನಾಶಕ ಬಳಸಲಾಗುತ್ತಿದೆ ಎಂದರೆ ಅವುಗಳನ್ನು ತಿಂದರೆ ರೋಗ ಖಾಯಂ. ಹಣ್ಣು, ತರಕಾರಿಗಳು ದೇಹಕ್ಕೆ ಅಗತ್ಯವಾದ ನ್ಯೂಟ್ರೀಷಿಯನ್​ಗಳನ್ನು ಕೊಡುತ್ತವೆ ಎಂದೇ ವೈದ್ಯರು ಹೇಳುತ್ತಾರೆ. ಆದರೆ ಈ ಕೀಟನಾಶಗಳ ಬಳಕೆಯಿಂದಾಗಿ ಹಣ್ಣು-ತರಕಾರಿಗಳ ಆರೋಗ್ಯಕಾರಿ ಗುಣವೇ ಹೋಗಿ ಬಿಟ್ಟಿದೆ. ಹಾಗೆಂದು ಹಣ್ಣುಗಳನ್ನು ಸೇವಿಸುವುದು ಬಿಡುವಂತಿಲ್ಲ. ಅದರಲ್ಲೂ ಮಕ್ಕಳಿಗೆ ಹಣ್ಣುಗಳ ಸೇವನೆಯ ಅಭ್ಯಾಸ ಈಗಿನಿಂದಲೇ ಮಾಡಿಸಬೇಕು. ಆದರೆ ಕೀಟನಾಶಗಳ ಅಪಾಯಕಾರಿ ಅಂಶವನ್ನು ತೆಗೆದು ಹಣ್ಣುಗಳನ್ನು ಅಪಾಯಕಾರಿಯಿಂದ ಆರೋಗ್ಯಕಾರಿ ಆಗಿ ಮಾಡುವುದು ಹೇಗೆ?

ಸಾಮಾನ್ಯವಾಗಿ ಹಣ್ಣುಗಳನ್ನು, ತರಕಾರಿಗಳನ್ನು ಬಳಸುವ ಮುಂಚೆ ತೊಳೆಯಲಾಗುತ್ತದೆ. ಇದು ಒಳ್ಳೆಯ ಅಭ್ಯಾಸ. ಆದರೆ ಇದರಿಂದ ಹಣ್ಣು, ತರಕಾರಿಗಳ ಮೇಲಿನ ಕೀಟನಾಶಕದ ರಾಸಾಯನಿಕಗಳು ಹೋಗುವುದಿಲ್ಲ. ಹಾಗಾಗಿ ಹಣ್ಣುಗಳನ್ನು ಅದರಲ್ಲೂ ದ್ರಾಕ್ಷಿ, ಬ್ಯೂಬೆರ್ರಿ, ಸ್ಟಾಬೆರ್ರಿ ರೀತಿಯ ಸಿಪ್ಪೆ ಇಲ್ಲದ ಅಥವಾ ಸಿಪ್ಪೆ ಸಮೇತ ತಿನ್ನುವ ಹಣ್ಣು ಅಥವಾ ಯಾವುದೇ ತರಕಾರಿ ತಂದಾಗ ಅವುಗಳನ್ನು ಸ್ವಚ್ಛ ನೀರಿನಲ್ಲಿ ತೊಳೆಯುವ ಜೊತೆಗೆ, ಆ ಹಣ್ಣುಗಳನ್ನು ಬೇಕಿಂಗ್ ಸೋಡ ಬೆರೆತ ನೀರಿನಲ್ಲಿ ಬರೋಬ್ಬರಿ 12 ನಿಮಿಷಗಳ ಕಾಲ ನೆನೆಸಿ ಇಡಬೇಕು.

Food Recipes: ಬೇಸಿಗೆ ಬಂದಿದೆ, ಈ ಆಹಾರ ಪದಾರ್ಥ ಮಾಡಿ ತಿನ್ನಿ ಆರೋಗ್ಯ ಕಾಯ್ದುಕೊಳ್ಳಿ

ಹೀಗೆ ಹಣ್ಣುಗಳನ್ನು, ತರಕಾರಿಗಳನ್ನು 12 ನಿಮಿಷಗಳ ಕಾಲ ಬೇಕಿಂಗ್ ಸೋಡ ಬೆರೆಸಿದ ನೀರಿನಲ್ಲಿ ಇಡುವುದರಿಂದಾಗಿ ಹಣ್ಣಿನ ಮೇಲ್ಪದರದಲ್ಲಿರುವ ರಾಸಾಯನಿಕ ಪದರ ಹೊರಟು ಹೋಗುತ್ತದೆ. ಹಣ್ಣುಗಳು 96% ಶುದ್ಧ ಆಗುತ್ತವೆ. ಆ ಮೂಲಕ ಹಣ್ಣುಗಳು ಅಪಾಯಕಾರಿಯಿಂದ ಆರೋಗ್ಯಕಾರಿ ಆಗಿ ಬದಲಾಗುತ್ತವೆ. ತರಕಾರಿಗಳಿಗೂ ಇದೇ ವಿಧಾನ ಅನುಸರಿಸಬಹುದು. ಸಿಪ್ಪೆ ಸಮೇತ ತಿನ್ನುವ ಹಣ್ಣು ಅಥವಾ ತರಕಾರಿಗಳನ್ನು ಹೀಗೆ ಬೇಕಿಂಗ್ ಸೋಡನಲ್ಲಿ ಮುಳುಗಿಸುವುದು ಕಡ್ಡಾಯ. ಬಾಳೆಹಣ್ಣು, ದಾಳಿಂಬೆ ಇಂಥಹಾ ಹಣ್ಣುಗಳನ್ನು ಹೀಗೆ ಬೇಕಿಂಗ್ ಸೋಡಾನಲ್ಲಿ ಮುಳುಗಿಸುವ ಅವಶ್ಯಕತೆ ಇಲ್ಲ.

Exit mobile version