Site icon Samastha News

IIT: ಕಾಲೇಜು ಮುಗಿಯುವ ಮುನ್ನವೇ ಸಿಕ್ತು‌ 4.3 ಕೋಟಿ ರೂಪಾಯಿ ಸಂಬಳದ ಉದ್ಯೋಗ

IIT

IIT

ಕಾಲೇಜು ಪ್ಲೇಸ್ ಮೆಂಟ್’ಗಳ ಮೇಲೆ ಕಂಪೆನಿಗಳು ಹೆಚ್ಚು ಪ್ರಾಧಾನ್ಯತೆ ಬೀಡಲು ಕಾರಣ ಕಡಿಮೆ ಸಂಬಳಕ್ಕೆ ಪ್ರತಿಭಾವಂತರು ಸಿಗುತ್ತಾರೆ ಎಂಬ ಕಾರಣಕ್ಕೆ. ಬಹುತೇಕ ಕಾಲೇಜು ಪ್ಲೇಸ್’ಮೆಂಟ್ ಗಳು ವಿದ್ಯಾರ್ಥಿಗಳಿಗೆ ಮಾಡುವ ದೋಖಾ ಆಗಿರುತ್ತವೆ. ಆದರೆ ಐಐಟಿ, ಐಐಎಂ ಇನ್ನಿತರೆ ಭಾರತದ ಅತ್ಯುನ್ನತ ವಿದ್ಯಾಸಸ್ಥೆಗಳ ವಿದ್ಯಾರ್ಥಿಗಳಿಗೆ ಹೀಗೆ ಆಗುವುದಿಲ್ಲ. ಇದೀಗ ಒಬ್ಬ ಐಐಟಿ ವಿದ್ಯಾರ್ಥಿಗೆ ಶಿಕ್ಷಣ ಮುಗಿಯುವ ಮುನ್ನವೇ 4.3 ಕೋಟಿ ಸಂಬಳದ ಕೆಲಸ ಸಿಕ್ಕಿದೆ.

ಐಐಟಿ ಮದ್ರಾಸ್’ನ ಕಂಪ್ಯೂಟರ್ ಎಂಜಿನಿಯರ್ ವಿದ್ಯಾರ್ಥಿಯೊಬ್ಬನಿಗೆ ವಿಶ್ವದ ಟಾಪ್ ಟ್ರೇಡಿಂಗ್ ಸಂಸ್ಥೆ ಜೇನ್ ಸ್ಟ್ರೀಟ್ ಕ್ಯಾಪಿಟಲ್ಸ್ ನವರು ಬರೋಬ್ಬರಿ ವಾರ್ಷಿಕ 4.3 ಕೋಟಿ ಸಂಬಳದ ಪ್ಯಾಕೇಜ್ ನೀಡಿದ್ದಾರೆ. ಇಷ್ಟು ದೊಡ್ಡ ಪ್ಯಾಕೇಜ್ ಪಡೆದ ವಿದ್ಯಾರ್ಥಿಯ ಅಂತಿಮ ವರ್ಷದ ಪದವಿ ಸಹ ಇನ್ನೂ ಪೂರ್ತಿಯಾಗಿಲ್ಲ. ಅಷ್ಟರಲ್ಲೇ ಇಷ್ಟು ದೊಡ್ಡ ಮೊತ್ತದ ಸಂಬಳ‌ಪಡೆಯಲಿದ್ದಾರೆ ಈ ವಿದ್ಯಾರ್ಥಿ.

ಒಬ್ಬ ವಿದ್ಯಾರ್ಥಿಗೆ ಮಾತ್ರವೇ ಅಲ್ಲದೆ ಹಲವು ವಿದ್ಯಾರ್ಥಿಗಳಿಗೆ ಹಲವು‌ ದೊಡ್ಡ ಸಂಸ್ಥೆಗಳು ಕೋಟ್ಯಂತರ ರೂಪಾಯಿ ಪ್ಯಾಕೇಜ್ ನೀಡಿ ಕೆಲಸಕ್ಕೆ ತೆಗೆದುಕೊಂಡಿವೆ. ವಿಶ್ವದ ಅತಿ ದೊಡ್ಡ ಮತ್ತು ಪ್ರಭಾವಿ ಸಂಸ್ಥೆ ಆಗಿರುವ ಬ್ಲಾಕ್’ರಾಕ್, ಮೈಕ್ರೋಸಾಫ್ಟ್, ಕ್ವಾಲ್ಕಮ್, ರೂಬ್ರಿಕ್, ಗ್ಲೆನ್ ಆಂಡ್ ಡಾ ವಿಂಚಿ, ಡಿಇ ಶೋ ಇನ್ನೂ ಕೆಲವು ಕಂಪೆನಿಗಳು ಭಾರತದ ಐಐಟಿ ವಿದ್ಯಾರ್ಥಿಗಳಿಗೆ ದೊಡ್ಡ ಮೊತ್ತದ ಸಂಬಳ ನೀಡಿ ಉದ್ಯೋಗಕ್ಕೆ ಸೇರಿಸಿಕೊಂಡಿವೆ. ಕೆಲವು ಭಾರತೀಯ ಸಂಸ್ಥೆಗಳಯ ಸಹ ಐಐಟಿ‌ ವಿದ್ಯಾರ್ಥಿಗಳನ್ನು ದೊಡ್ಡ ಮೊತ್ತದ ಸಂಬಳ ನೀಡಿ ಕೆಲಸಕ್ಕೆ ತೆಗೆದುಕೊಂಡಿದೆ.

China: ಅಂತರೀಕ್ಷ ಮಹಾ ಸಾಧನೆಗೆ ಮುಂದಾದ ಚೀನಾ

ಐಐಟಿ, ಐಐಎಂಗಳು ದೇಶದ ಅತ್ಯುನ್ನತ ವಿದ್ಯಾ ಸಂಸ್ಥೆಗಳು ಎನಿಸಿಕೊಂಡಿವೆ‌. ಭಾರತದಲ್ಲಿ ಒಟ್ಟು 23 ಐಐಟಿಗಳಿವೆ. ಅವುಗಳಲ್ಲಿ ಐಐಟಿ ಮದ್ರಾಸ್, ಖರಗ್ ಪುರ್, ಐಐಟಿ ಬಾಂಬೆ, ಐಐಟಿ ಡೆಲ್ಲಿ ಇನ್ನೂ ಕೆಲವು ಬಹಳ ಜನಪ್ರಿಯ. ಕರ್ನಾಟಕದಲ್ಲಿ ಐಐಟಿ ಇಲ್ಲ, ಆದರೆ ಐಐಎಂ ಇದೆ. ಬೆಂಗಳೂರಿನ ಐಐಎಂ ವಿಶ್ವದ ಅತ್ಯುತ್ತಮ ಬ್ಯುಸಿನೆಸ್ ಸ್ಕೂಲ್’ಗಳಲ್ಲಿ ಒಂದಾಗಿದೆ. ಬೆಂಗಳೂರು ಐಐಎಂನಲ್ಲಿ ಓದಲು ವಿಶ್ವದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಬರುತ್ತಾರೆ.

Exit mobile version