Bengaluru: ಬೆಂಗಳೂರಿನಲ್ಲಿ ಮಾರಾಟವಾಗುತ್ತಿದೆ ಗಾಳಿಯಿಂದ ತಯಾರಿಸಿದ ನೀರು, ಬಾಟಲಿಗೆ ಎಷ್ಟು ಬೆಲೆ?

0
193
Bengaluru

Bengaluru

ಬೆಂಗಳೂರು, ಭಾರತದ ಸ್ಟಾರ್ಟ್ ಅಪ್ ರಾಜಧಾನಿ. ಹೊಸ ತಲೆಮಾರಿನ ನವ್ಯೂದ್ಯಮಿಗಳು ಹಲವು ಹೊಸ ಐಡಿಯಾಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರಡ. ಹಲವು ಮಲ್ಟಿನ್ಯಾಷನಲ್ ಕಂಪೆನಿಗಳು ಬೆಂಗಳೂರಿನಲ್ಲಿ ಪ್ರಾರಂಭವಾಗಿವೆ‌. ಇದೀಗ ಉತ್ಸಾಹಿ ಯುವಕರ ತಂಡವೊಂದು ಗಾಳಿಯಿಂದ ಕುಡಿಯುವ ನೀರು ಉತ್ಪಾದಿಸಿ ಮಾರಾಟ ಮಾಡುತ್ತಿವೆ. ಅದೂ ಕಡಿಮೆ ಬೆಲೆಗೆ.

ಕೇರಳದ ಕೋಯಿಕೋಡ್ ನ ಐಐಪಿಯಲ್ಲಿ ವಿಧ್ಯಾಭ್ಯಾಸ ಮಾಡಿರುವ ಸ್ವಪ್ನಿಲ್ ಶ್ರೀವತ್ಸ ಹಾಗೂ ಆತನ ಕೆಲವು ಗೆಳೆಯರು ಗಾಳಿಯಿಂದ ನೀರು ಉತ್ಪಾದನೆ ಮಾಡಿ ಮಾರಾಟ ಮಾಡುತ್ತಿದ್ದಾರೆ. ಉರವು ಹೆಸರಿನ ಸಂಸ್ಥೆ ಕಟ್ಟಿರುವ ಈ ಯುವಕರು ಅದೇ ಹೆಸರಿನಲ್ಲಿ ನೀರು ಮಾರಾಟ ಮಾಡುತ್ತಿದ್ದಾರೆ.

ಸ್ವಪ್ನಿಲ್ ಹೇಳಿರುವಂತೆ 2016 ರಲ್ಲಿ ಒಮ್ಮೆ ಅವರ ಕಾಲೇಜಿನಲ್ಲಿ ಒಮ್ಮೆ ನೀರಿನ ಸಮಸ್ಯೆ ಎದುರಾಯ್ತಂತೆ ಆಗ ಸ್ವಪ್ನಿಲ್ ಹಾಗೂ ಆತನ ಕೆಲವು ಗೆಳೆಯರು ಒಟ್ಟಾಗಿ ವಾತಾವರಣದಲ್ಲಿರುವ ತೇವಾಂಶದಿಂದ ನೀರನ್ನು ಪ್ರತ್ಯೇಕಿಸಿ ಶೇಖರಿಸುವ ಐಡಿಯಾ ಮಾಡಿ ಅದನ್ನೇ ಕಾಲೇಜ್ ಪ್ರಾಜೆಕ್ಟ್ ಆಗಿ ಮಾಡಲು ಆರಂಭಿಸಿದ್ದಾರೆ. 2018 ರಲ್ಲಿ ಅವರ ಈ ತಂತ್ರಜ್ಞಾನಕ್ಕೆ 50 ಸಾವಿರ ಡಾಲರ್ ಬಹುಮಾನ (40 ಲಕ್ಷ) ಆಗ ಈ ಯುವಕರು ಈ ತಂತ್ರಜ್ಞಾನದ ಮೇಲೆ ಇನ್ನಷ್ಟು ಕೆಲಸ ಮಾಡಲು ಆರಂಭಿಸಿ, ಅದನ್ನು ಈಗ ಕಾರ್ಯರೂಪಕ್ಕೆ ತಂದಿದ್ದಾರೆ.

ವಿಶ್ವದಾದ್ಯಂತ 100 ಕ್ಕೂ ಹೆಚ್ಚು ಸಂಸ್ಥೆಗಳು ವಾತಾವರಣದ ತೇವಾಂಶದಿಂದ ನೀರು ಉತ್ಪಾದನೆ ಮಾಡುತ್ತಿವೆ ಆದರೆ ಉರವು ಬಳಸುವ ತಂತ್ರಜ್ಞಾನವನ್ನು ಬಳಸಿ ನೀರು ಉತ್ಪಾದನೆ ಮಾಡುತ್ತಿರುವುದು ಕೇವಲ 3 ಅಥವಾ 4 ಸಂಸ್ಥೆಗಳಷ್ಟೆ. ನಾವು ಬಳಸುವ ತಂತ್ರಜ್ಞಾನ ಭಿನ್ನ ಹಾಗೂ ಕಡಿಮೆ ಖರ್ಚಿನದ್ದು ಎನ್ನುತ್ತಾರೆ ಸ್ವಪ್ನಿಲ್.

‘ಗಾಳಿಯಲ್ಲಿ ನೈಟ್ರೋಜನ್, ಇಂಗಾಲ ಸೇರಿದಂತೆ ಹಲವು ಅಣುಗಳಿರುತ್ತವೆ ಆದರೆ ನೀರು ಆಗಲು ಆಮ್ಲಜನಕ, ಜಲಜನಕದ ಅಣುಗಳಷ್ಟೆ ಬೇಕಾಗುತ್ತದೆ. ಹಾಗಾಗಿ ಇವನ್ನು ಮಾತ್ರವೇ ಹೀರಿಕೊಂಡು ನೀರು ಉತ್ಪಾದನೆ ಮಾಡುವ ತಂತ್ರಜ್ಞಾನವನ್ನು ನಾವು ಬಳಸುತ್ತಿದ್ದೇವೆ. ಈಗ ದಿನಕ್ಕೆ 3000 ಲೀಟರ್ ನೊಇರು ಉತ್ಪಾದನೆ ಮಾಡುತ್ತಿದ್ದೇವೆ. ಅರ್ಧ ಲೀಟರ್ ನೀರನ್ನು ಕೇವಲ 10 ಅಥವಾ 15 ರೂಪಾಯಿಗೆ ಮಾರಾಟ ಮಾಡುತ್ತಿದ್ದೇವೆ. ಉತ್ಪಾದನೆ ಹೆಚ್ಚಾದರೆ ದರವನ್ನೂ ಇನ್ನೂ ಇಳಿಸಬಹುದು ಮದಿದ್ದಾರೆ ಸ್ವಪ್ನಿಲ್.

LEAVE A REPLY

Please enter your comment!
Please enter your name here