Bengaluru Traffic
ವಿಶ್ವದಲ್ಲಿಯೇ ಹೆಚ್ಚು ಟ್ರಾಫಿಕ್ ಹೊಂದಿರುವ ಟಾಪ್ 10 ನಗರಗಳಲ್ಲಿ ಒಂದು ಬೆಂಗಳೂರು. ನಗರದ ಟ್ರಾಫಿಕ್ ನಿಯಂತ್ರಣಕ್ಕೆ ಈಗಾಗಲೇ ಲಕ್ಷಾಂತರ ಕೋಟಿ ಖರ್ಚು ಮಾಡಲಾಗಿದೆ. ಈ ಆರ್ಥಿಕ ವರ್ಷದಲ್ಲಿಯೂ ಸಹ ಸಾವಿರಾರು ಕೋಟಿ ಹಣ ಖರ್ಚು ಮಾಡಲಾಗುತ್ತಿದೆ. ಆದರೆ ಈ ಡಿಸೆಂಬರ್ ವೇಳೆಗೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ 30% ನಷ್ಟು ಕಡಿಮೆ ಆಗಲಿದೆ ಎಂದಿದ್ದಾರೆ ಕೇಂದ್ರ ಸಚಿವ. ನಗರದ ಯಾವ- ಯಾವ ಪ್ರದೇಶಕ್ಕೆ ಇದರಿಂದ ಅನುಕೂಲ ಆಗಲಿದೆ?
ಕರ್ನಾಟಕ ಬಿಜೆಪಿ ಎಕ್ಸಿಕ್ಯೂಟಿವ್ ಸಮಿತಿ ಸಭೆಯಲ್ಲಿ ಮಾತನಾಡಿದ ಗಡ್ಕರಿ ಅವರು ಸ್ಯಾಟಲೈಟ್ ಟೌನ್ ಶಿಪ್ ರಿಂಗ್ ರೋಡ್ ಯೋಜನೆಯು ಇದೇ ವರ್ಷ ಡಿಸೆಂಬರ್ ತಿಂಗಳಲ್ಲಿ ಅಂತ್ಯವಾಗಲಿದ್ದು, ಇದು ಬೆಂಗಳೂರಿನ 30% ಟ್ರಾಫಿಕ್ ಸಮಸ್ಯೆಯನ್ನು ನಿವಾರಣೆ ಮಾಡಲಿದೆ ಎಂದಿದ್ದಾರೆ. ಈ ಯೋಜನೆಗೆ 17 ಸಾವಿರ ಕೋಟಿ ಖರ್ಚು ಮಾಡಲಾಗಿದ್ದು ಈ ರಸ್ತೆಯು ದಾಬಸ್ ಪೇಟೆ, ಮಾಗಡಿ, ರಾಮನಗರ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಸರ್ಜಾಪುರ ಮತ್ತು ಹೊಸೂರುಗಳನ್ನು ಬೆಂಗಳೂರಿನೊಂದಿಗೆ ಸಂಪರ್ಕಿಸುತ್ತದೆ. ಈ ಹಿಂದಿನ ಸಂಪರ್ಕ ರಸ್ತೆಗಿಂತಲೂ ವಿಶಾಲವಾಗಿ, ಟ್ರಾಫಿಕ್ ಕಿರಿ ಕಿರಿ ಇಲ್ಲದೆ ಬೆಂಗಳೂರಿಗೆ ಆಗಮನ-ನಿರ್ಗಮನ ಮಾಡಬಹುದಾಗಿರುತ್ತದೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ತಂತ್ರಜ್ಞಾನ ಬಳಕೆ
2022 ರಲ್ಲಿ ಈ ಯೋಜನೆಗೆ ಅಡಿಗಲ್ಲು ಹಾಕಲಾಗಿತ್ತು. ಈ ವರೆಗೆ 17900 ಕೋಟಿಗೂ ಹೆಚ್ಚು ಹಣ ಖರ್ಚಾಗಿದೆ ಎನ್ನಲಾಗುತ್ತಿದೆ. ಡಿಸೆಂಬರ್ ನಲ್ಲಿ ಈ ಪ್ರಾಜೆಕ್ಟ್ ಉದ್ಘಾಟನೆಗೊಳ್ಳಲಿದ್ದು ಸಾರ್ವಜನಿಕರ ಅನುಕೂಲಕ್ಕೆ ಲಭ್ಯವಾಗಲಿದೆ. ಈ ರಸ್ತೆ ಉದ್ಘಾಟನೆ ಬಳಿಮ ಬೆಂಗಳೂರು ಹಾಗೂ ಚೆನ್ನೈ ನಡುವಿನ ದೂರವನ್ನು ಕೇವಲ ಎರಡು ಗಂಟೆಯಲ್ಲಿ ಕ್ರಮಿಸಬಹುದು ಎನ್ನಲಾಗುತ್ತಿದೆ.
ಬಿಜೆಪಿ ಸಭೆಯಲ್ಲಿ ಮಾತನಾಡಿದ ಗಡ್ಕರಿ ಕಳೆದ ಒಂದು ದಶಕದಲ್ಲಿ ಕೇವಲ ಕರ್ನಾಟದ ಹೆದ್ದಾರಿಗಳಿಗಾಗಿ ಕೇಂದ್ರ ಸರ್ಕಾರವು 3.50 ಲಕ್ಷ ಕೋಟಿ ಹಣವನ್ನು ಖರ್ಚು ಮಾಡಿದೆ ಎಂದಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಈ ಖರ್ಚು ಕಡಿಮೆ ಆಗಲಿದೆ ಬೇರೆ ಅಗತ್ಯವುಳ್ಳ ರಾಜ್ಯಗಳಿಗೆ ಖರ್ಚು ಮಾಡಲಾಗುವುದು ಎಂದಿದ್ದಾರೆ.