Indian Food
ಭಾರತದಲ್ಲಿ 50 ಕಿ.ಮೀಗೆ ಭಾಷೆಯ ಸ್ವರೂಪ ಬದಲಾದಂತೆ ಆಹಾರ ಪದ್ಧತಿಯೂ ಬದಲಾಗುತ್ತದೆ. ಕರ್ನಾಟಕವೊಂದರಲ್ಲೇ ಒಂದೊಂದು ಭಾಗದ, ಒಂದೊಂದು ಜಿಲ್ಲೆಗಳಲ್ಲಿಯೂ ಭಿನ್ನ ಆಹಾರ ಸಂಸ್ಕೃತಿ ಇದೆ. ಭಾರತ ತನ್ನ ಸಂಸ್ಕೃತಿ, ವಿಭಿನ್ನತೆಗಳ ಜೊತೆಗೆ ರುಚಿಕರವಾದ ಆಹಾರಕ್ಕೂ ಬಲು ಜನಪ್ರಿಯ. ಭಾರತದ ಹಲವು ಆಹಾರಗಳು ವಿಶ್ವದೆಲ್ಲೆಡೆ ಜನಪ್ರಿಯ. ಭಾರತೀಯ ಮೂಲದ ರೆಸ್ಟೊರೆಂಟ್ ಗಳು ಇಲ್ಲದ ದೇಶಗಳು ಅತ್ಯಂತ ಕಡಿಮೆ. ಇಷ್ಟೆಲ್ಲ ಪೀಠಿಕೆ ಏಕೆಂದರೆ ಭಾರತದ ಖಾದ್ಯವೊಂದು ವಿಶ್ವದ ಅತ್ಯುತ್ತಮ ಆಹಾರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
ಜನಪ್ರಿಯ ಆಹಾರ ಮತ್ತು ಪ್ರವಾಸಿ ಸಂಸ್ಥೆಯಾಗಿರುವ ಟೇಸ್ಟ್ ಅಟ್ಲಾಸ್, ವಿಶ್ವದ ಅತ್ಯುತ್ತಮ ನೂರು ಆಹಾರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆ ಪಟ್ಟಿಯ ಮೊದಲಿನ ಹತ್ತು ಆಹಾರಗಳಲ್ಲಿ ಭಾರತದ ಒಂದು ಖಾದ್ಯ ಸ್ಥಾನ ಪಡೆದುಕೊಂಡಿದೆ. ಅದುವೇ ಜನಪ್ರಿಯ ಬಟರ್ ಗಾರ್ಲಿಕ್ ನಾನ್. ಬಟರ್ ಚಿಕನ್ ಜೊತೆಗೆ ಇದನ್ನು ಹೆಚ್ಚಾಗಿ ಸೇವಿಸಲಾಗುತ್ತದೆ.
ವಿಶ್ವದಾದ್ಯಂತ ಜನಪ್ರಿಯವಾಗೊರುವ ಸುಮಾರು 11 ಸಾವಿರ ಖಾದ್ಯಗಳ ರಿವ್ಯೂ, ರೇಟಿಂಗ್ ಗಳನ್ನು ಪರಿಶೀಲಿಸಿ, ಒಟ್ಟು 3.95 ಲಕ್ಷ ಜನರ ಅಭಿಪ್ರಾಯವನ್ನು ಪರಿಗಣಿಸಿ ಟಾಪ್ 100 ಖಾದ್ಯಗಳ ಪಟ್ಟಿಯನ್ನು ಟೇಸ್ಟ್ ಅಟ್ಲಾಸ್ ತಯಾರು ಮಾಡಿದೆ. ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಬ್ರೆಜಿಲ್‌ನ ಪಿಚಾನಾ ಪಡೆದುಕೊಂಡಿದೆ. ಇದೊಂದು ದನದ ಮಾಂಸದಿಂದ ತಯಾರಿಸುವ ಖಾದ್ಯವಾಗಿದೆ. ಬ್ರೆಜಿಲ್ ನ ಬಹು ಮುಖ್ಯ ಆಹಾರ ಖಾದ್ಯ ಇದಾಗಿದೆ.
ಒಳ್ಳೆಯ ವೆದರ್ ಚಟ್‌ಪಟಾ ಬ್ರೆಡ್ ಆಮ್ಮೆಟ್ ಹೀಗೆ ಮಾಡಿ ಸವಿಯಿರಿ
ಬಟರ್ ಗಾರ್ಲಿಕ್ ನಾನ್ ಉತ್ತರ ಭಾರತದ ಖಾದ್ಯವಾಗಿದ್ದು, ಮೈದಾ ಹಿಟ್ಟಿನಿಂದ ಇದನ್ನು ತಯಾರಿಸಿ ತಂದೂರ್ ನ ಶಾಖದಲ್ಲಿ ಬೇಯಿಸಲಾಗುತ್ತದೆ. ಬಳಿಕ ಒದರ ಮೇಲೆ ಬೆಣ್ಣೆ ಬಳಿದು, ಬೆಳ್ಳುಳ್ಳಿಯ ಎಲೆಗಳನ್ನು ಕತ್ತರಿಸಿ ಉದುರಿಸಲಾಗುತ್ತದೆ. ಈ ಬಟರ್ ಗಾರ್ಲಿಕ್ ನಾನ್ ಅನ್ನು ಬಟರ್ ಚಿಕನ್, ಪನ್ನೀರ್ ಬಟರ್ ಮಸಾಲಾ ಇನ್ನಿತರೆ ಗ್ರೇವಿಗಳ ಜೊತೆಗೆ ಸೇವಿಸಲಾಗುತ್ತದೆ.
ಈ ಪಟ್ಟಿಯಲ್ಲಿ ಇಟಲಿಯ ಪಿಜ್ಜಾ 4ನೇ ಸ್ಥಾನದಲ್ಲಿದೆ. ಚೀನಾದ ಡಂಪ್ಲಿಂಗ್ಸ್ 5ನೇ ಸ್ಥಾನದಲ್ಲಿದೆ. ಥಾಯ್ಲೆಂಡ್ ನ ಮೂರು ಖಾದ್ಯಗಳು ಟಾಪ್ 10 ರಲ್ಲಿ ಸ್ಥಾನ ಪಡೆದುಕೊಂಡಿವೆ. ಚೀನಾದ ಎರಡು ಖಾದ್ಯಗಳಿವೆ. ಮಲೇಷಿಯಾ, ರಷಿಯಾ, ಬ್ರೆಜಿಲ್ ದೇಶಗಳ ತಲಾ ಒಂದು ಖಾದ್ಯಗಳು ಸ್ಥಾನ ಪಡೆದಿವೆ.
ವಿಶ್ವದ 100 ಅತ್ಯುತ್ತಮ ಆಹಾರ ಖಾದ್ಯಗಳ ಟಾಪ್ 10 ರ ಪಟ್ಟಿಯಲ್ಲಿ ಭಾರತದ ಜನಪ್ರಿಯ ಖಾದ್ಯವೊಂದು ಸ್ಥಾನ ಪಡೆದುಕೊಂಡಿದೆ. ಯಾವುದದು?