Site icon Samastha News

Indian Foods: ವಿದೇಶಗಳಲ್ಲಿ ನಿಷೇಧವಾಗಿದೆ ಭಾರತದ ಈ ಜನಪ್ರಿಯ ಆಹಾರಗಳು

Indian Food

Indian Food

Indian Foods:

ಭಾರತದ ಆಹಾರ ಖಾದ್ಯಗಳಿಗೆ ವಿಶ್ವದಾದ್ಯಂತ ಬೇಡಿಕೆ ಇದೆ. ಭಾರತದ ಹೋಟೆಲ್​ಗಳು ಇರದ ದೇಶಗಳು ವಿಶ್ವದಲ್ಲಿ ಬಹಳ ಕಡಿಮೆ. ಒಂದಲ್ಲ ಒಂದು ಭಾರತದ ರೆಸ್ಟೊರೆಂಟ್​ಗಳು, ಹೋಟೆಲ್​ಗಳು ವಿದೇಶಗಳಲ್ಲಿ ಸಿಕ್ಕೇ ಸಿಗುತ್ತವೆ. ಆದರೆ ಭಾರತದಲ್ಲಿ ಜನಪ್ರಿಯವಾಗಿರುವ ಕೆಲವು ಆಹಾರ ಖಾದ್ಯಗಳು ಕೆಲವು ದೇಶಗಳಲ್ಲಿ ನಿಷೇಧವಾಗಿದೆ. ಇದಕ್ಕೆ ಅದರದ್ದೇ ಆದ ಕಾರಣಗಳೂ ಸಹ ಇವೆ. ಈ ಪಟ್ಟಿಯಲ್ಲಿ ನಿಮಗೆ ಆಶ್ಚರ್ಯವಾಗುವ ಕೆಲವು ಖಾದ್ಯಗಳ ಹೆಸರುಗಳಿವೆ.

 

ಸಮೋಸ

ಸಮೋಸ ಭಾರತದ ಅತ್ಯಂತ ಜನಪ್ರಿಯ ಖಾದ್ಯಗಳಲ್ಲಿ ಒಂದು. ವಿದೇಶಗಳಲ್ಲಿಯೂ ಈ ಖಾದ್ಯ ಜನಪ್ರಿಯತೆ ಗಳಿಸಿದೆ. ಆದರೆ ಸೊಮಾಲಿಯಾ ದೇಶದಲ್ಲಿ ಮಾತ್ರ ಸೊಮೊಸಾಗೆ ನಿಷೇಧ ಹೇರಲಾಗಿದೆ. ಇದಕ್ಕೆ ಕಾರಣ ವಿಚಿತ್ರ. ಸೊಮಾಲಿಯಾದ ಅಲ್ ಸಹಬಾಬ್ ಗುಂಪಿನ ವಾದವೆಂದರೆ ಸಮೋಸಾದ ತ್ರಿಕೋನ ಆಕಾರವು ಕ್ರಿಶ್ಚಿಯಾನಿಟಿಯನ್ನು ನೆನಪಿಸುತ್ತದೆಯಂತೆ ಹಾಗಾಗಿ ಸಮೋಸಾಗೆ ನಿಷೇಧ ಹೇರಲಾಗಿದೆ.

ಚವನ್​ಪ್ರಾಶ್

ಭಾರತದಲ್ಲಿ ಚವನ್​ಪ್ರಾಶ್ ಬಳಕೆ ತೀರ ಸಾಮಾನ್ಯ. ಇದರಿಂದ ಮಕ್ಕಳಲ್ಲಿ ಶಕ್ತಿ ಹೆಚ್ಚುತ್ತದೆ, ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ಈಗಲೂ ಸಹ ಪ್ರತಿದಿನ ಒಂದು ಚಮಚ ಚವನ್ ಪ್ರಾಶ್ ಅನ್ನು ಮಕ್ಕಳಿಗೆ ತಿನ್ನಿಸಲಾಗುತ್ತದೆ. ಆದರೆ ಈ ಚವಬ್​ಪ್ರಾಶ್ ಹಲವು ದೇಶಗಳಲ್ಲಿ ನಿಷೇಧವಾಗಿದೆ. ಇದರಲ್ಲಿ ಪತ್ತೆಯಾಗಿರುವ ಸೀಸ ಮತ್ತು ಪಾದರಸದಿಂದಾಗಿ ಇದನ್ನು ನಿಷೇಧಿಸಲಾಗಿದೆ.

ಕಬಾಬ್

ಜಗತ್ತಿನ ಸುಂದರ ನಗರಗಳಲ್ಲಿ ಒಂದಾದ ವೆನ್ನಿಸ್​ನಲ್ಲಿ ಕಬಾಬ್​ಗಳಿಗೆ ನಿಷೇಧವಿದೆ. ನಗರದ ಸುಂದರತೆ ಕಾಪಾಡಲು ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆಯಂತೆ. ಇಟಲಿಯಲ್ಲಿಯೂ ಸಹ ಕೆಲವು ರೀತಿಯ ಕಬಾಬ್​ಗಳಿಗೆ ನಿಷೇಧವಿದೆ.

ಕೆಚಪ್

ಕೆಚಪ್ ಬಳಕೆ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ತೀರಾ ಸಾಮಾನ್ಯ. ಆದರೆ ಕೆಚಪ್ ಅನ್ನು ಫ್ರ್ಯಾನ್ಸ್​ನಲ್ಲಿ ಬ್ಯಾನ್ ಮಾಡಲಾಗಿದೆ. ಕೆಚಪ್ ಅನ್ನು ಫ್ರ್ಯಾನ್ಸ್​ನಲ್ಲಿ ಬಳಸಲಾಗುತ್ತಿತ್ತು. ಇದನ್ನು ಯುವಕರು ಹೆಚ್ಚಾಗಿ ಬಳಸುತ್ತಿದ್ದರು. ಆದರೆ ಕೆಚಪ್​ಗಳಲ್ಲಿ ಸಕ್ಕರೆ ಅಂಶ ಹೆಚ್ಚಾಗಿದ್ದು, ಇದರ ಅತಿಯಾದ ಸೇವನೆ ಆರೋಗ್ಯಕ್ಕೆ ಸೂಕ್ತವಲ್ಲವೆಂದು ಕೆಚಪ್ ಅನ್ನು ಬ್ಯಾನ್ ಮಾಡಲಾಗಿದೆ.

ತುಪ್ಪ

Karnataka Government: ಕರ್ನಾಟಕದಲ್ಲಿ ಹೆಣ ಹೂಳಲು ಜಾಗವಿಲ್ಲ!

ತುಪ್ಪ ಹಾಗೂ ತುಪ್ಪ ಹಾಕಿದ ಪದಾರ್ಥಗಳಿಗೆ ಅಮೆರಿದಲ್ಲಿ ನಿಷೇಧವಿದೆ. ತುಪ್ಪವು ಮನುಷ್ಯನಲ್ಲಿ ರಕ್ತ ದೊತ್ತಡ ಹೆಚ್ಚು ಮಾಡುತ್ತದೆ. ಹೃದಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಮತ್ತು ದೇಹದ ತೂಕ ಹೆಚ್ಚು ಮಾಡುತ್ತದೆ ಎಂಬ ಕಾರಣಕ್ಕೆ ಅಮೆರಿಕದ ಆಹಾರ ಸುರಕ್ಷತಾ ಇಲಾಖೆ ತುಪ್ಪದ ಬಳಕೆಗೆ ನಿಷೇಧ ಹೇರಿದೆ.

ಜೆಲ್ಲಿ ಕಪ್

ಕಪ್ ಜೆಲ್ಲಿ ಅಥವಾ ಜೆಲ್ಲಿ ಕಪ್ ಭಾರತದ ಬಹುತೇಕ ನಗರಗಳಲ್ಲಿ ಸಿಗುತ್ತದೆ. ಮಕ್ಕಳು ಇದನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಸಣ್ಣ ಪ್ಲಾಸ್ಟಿಕ್ ಕಪ್​ನಲ್ಲಿ ಸಿಹಿಯಾದ ಜೆಲ್ಲಿ ತುಂಬಿಸಿರಲಾಗಿರುತ್ತದೆ. ಆದರೆ ಇದು ಆಸ್ಟ್ರೇಲಿಯಾನಲ್ಲಿ ಬ್ಯಾನ್ ಆಗಿದೆ.

ಗಸಗಸೆಯಿಂದ ಮಾಡಿದ ಪದಾರ್ಥ

ಗಸ-ಗಸೆ ಮತ್ತು ಗಸಗಸೆಯಿಂದ ಮಾಡಿದ ಪದಾರ್ಥಗಳಿಗೆ ಕೆಲವು ದೇಶದಲ್ಲಿ ನಿಷೇಧವಿದೆ. ಗಸಗಸೆಯನ್ನು ಅಫೀಮು ಗಿಡದಿಂದ ಪಡೆಯಲಾಗುತ್ತದೆ ಎಂಬ ಕಾರಣಕ್ಕೆ ಸಿಂಗಪುರ, ಅರಬ್ ದೇಶಗಳು ಗಸಗಸೆ ಮತ್ತು ಗಸಗಸೆಯಿಂದ ಮಾಡಿದ ತಿನಿಸುಗಳ ಮೇಲೆ ನಿಷೇಧ ಹೇರಿದೆ.

Exit mobile version