Richest Begger
ಭಿಕ್ಷುಕ ಎಂದರೆ ಬೇಡಿ ತಿನ್ನುವವ, ತನ್ನದು ಎಂದು ಏನೂ ಇರದವ, ಹಣ, ಆಸ್ತಿ ನಿರ್ಗತಿಕ ಎಂದು ಅರ್ಥ ಆದರೆ ಮುಂಬೈಲ್ಲಿ ನೆಲೆಸಿರುವ ಭಿಕ್ಷುಕನೊಬ್ಬ ವಿಶ್ವದ ಶ್ರೀಮಂತ ಭಿಕ್ಷುಕ. ಈತನ ತಿಂಗಳ ಆದಾಯ, ಒಟ್ಟು ಆಸ್ತಿಯ ಮೊತ್ತ ಕೇಳಿದರೆ ತಲೆ ತಿರುಗುವುದು ಗ್ಯಾರೆಂಟಿ. ಕಷ್ಟು ಪಟ್ಟು ದುಡಿಯುತ್ತಿರುವ ಸಾಮಾನ್ಯರು ಗಳಿಸುವ ಮೂರು ಪಟ್ಟು ಹಣ ಈತ ಭಿಕ್ಷೆ ಬೇಡಿ ಗಳಿಸುತ್ತಾನೆ!
ಮುಂಬೈನಲ್ಲಿ ನೆಲೆಸಿರುವ ಭರತ್ ಜೈನ್, ಭಾರತ ಮಾತ್ರವಲ್ಲ ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ ಈತ. ಯಾವುದೇ ಕಾರ್ಪೊರೇಟ್ ಉದ್ಯೋಗಿ, ಸ್ಟಾರ್ಟ್ ಅಪ್‌ನ ಮಾಲೀಕ ದುಡಿಯುವುದಕ್ಕಿಂತಲೂ ಹೆಚ್ಚಿನ ಹಣವನ್ನು ಈ ಮನುಷ್ಯ ದುಡಿಯುತ್ತಾನೆ. ಮಾತ್ರವಲ್ಲದೆ ಮುಂಬೈನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾನೆ. ಎಲ್ಲವನ್ನೂ ಭಿಕ್ಷೆ ಬೇಡಿಯೇ ಸಂಪಾದಿಸಿದ್ದಾನೆ.
ತೀರ ಬಡತನದ ಕುಟುಂಬದ ಭರತ್ ಜೈನ್, ಇದೇ ಕಾರಣಕ್ಕೆ ವಿದ್ಯಾಭ್ಯಾಸ ಬಿಡಬೇಕಾಯ್ತು. ಬಳಿಕ ಭಿಕ್ಷಾಟನೆಯಲ್ಲಿ ತೊಡಗಿದ ಭರತ್ ಬಳಿಕ ಮದುವೆಯಾಗಿ ಇಬ್ಬರು ಮಕ್ಕಳನ್ನು ಪಡೆದರು. ಭಿಕ್ಷಾಟನೆಯಲ್ಲಿ ಇರುವ ಲಾಭದ ಅರಿವಿದ್ದ ಭರತ್, ಏನೇ ಆದರೂ ಭಿಕ್ಷಾಟನೆ ಬಿಡಲಿಲ್ಲ. ಮಕ್ಕಳನ್ನು ಕಾನ್ವೆಂಟ್ ಶಾಲೆಗೆ ಕಳಿಸಿದ ಭರತ್, ಮಕ್ಕಳ ವಿಧ್ಯಾಭ್ಯಾಸ, ಮನೆ ನಡೆಸಲು, ಹೂಡಿಕೆ ಎಲ್ಲದಕ್ಕೂ ಭಿಕ್ಷಾಟನೆಯನ್ನೇ ನಂಬಿದ್ದ. ವರ್ಷಗಳ ಕಾಲ ಮುಂಬೈನ ಬೀದಿಗಳಲ್ಲಿ ಭಿಕ್ಷಾಟನೆ ಮಾಡಿ ಮುಂಬೈನಲ್ಲೇ 1.40 ಕೋಟಿ ಬೆಲೆಯ ಫ್ಲ್ಯಾಟ್ ಖರೀದಿ ಮಾಡಿದ್ದಾರೆ. ಈಗ ಈ ಫ್ಲ್ಯಾಟ್ ನ ಬೆಲೆ ಸುಮಾರು 5 ಕೋಟಿ ಇರಬಹುದು.
ಮನೆ ಮಾತ್ರವೇ ಅಲ್ಲದೆ ಥಾಣೆಯಲ್ಲಿ ಎರಡು ಅಂಗಡಿ ಕಟ್ಟಿಸಿ ಬಾಡಿಗೆಗೆ ಬಿಟ್ಟಿದ್ದಾರೆ ಇದರಿಂದ ಪ್ರತಿ ತಿಂಗಳೂ ಒಂದು ಲಕ್ಷ ರೂಪಾಯಿ ದುಡಿಯುತ್ತಿದ್ದಾರೆ. ಇದೆಲ್ಲದಕ್ಕಿಂತಲೂ ಮುಂಚೆ ಪತ್ನಿಗಾಗಿ ಒಂದು ಕಿರಾಣಿ ಸ್ಟೋರ್ ಹಾಕಿ ಕೊಟ್ಟಿದ್ದ ಅದರಿಂದಲೂ ಆದಾಯ ಬರುತ್ತಲೇ ಇತ್ತು. ಯಾವುದು ಏನೇ ಆದರೂ ಭರತ್ ಜೈನ್, ಭಿಕ್ಷಾಟನೆ ಬಿಟ್ಟಿಲ್ಲ. ಈಗಲೂ ತಿಂಗಳಿಗೆ ಸುಮಾರು 80 ರಿಂದ ಒಂದು ಲಕ್ಷ ರೂಪಾಯಿ ಹಣವನ್ನು ಭಿಕ್ಷಾಟನೆಯಿಂದಲೇ ಗಳಿಸುತ್ತಾರಂತೆ ಭರತ್ ಜೈನ್.
Swiggy: ಸಸ್ಯಹಾರಿಗಳಾಗಿಬಿಟ್ಟರೆ ಬೆಂಗಳೂರಿಗರು, ಜೊಮ್ಯಾಟೊ ಹೇಳುತ್ತಿರುವುದೇನು?
ಭರತ್ ಜೈನ್ ಮಕ್ಕಳೀಗ ಕೆಲಸಕ್ಕೆ ಹೋಗುತ್ತಿದ್ದಾರೆ. ಬಾಡಿಗೆ ಮನೆಗಳಿಂದ ಆದಾಯ ಬರುತ್ತಿದೆ. ಏನೇ ಆದರು ಇಂದಿಗೂ ಭರತ್ ಜೈನ್ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್ ಬಳಿ ಹಾಗೂ ಆಜಾದ್ ಮೈದಾನ್ ಬಳಿ ನಿಂತು ಭಿಕ್ಷೆ ಬೇಡುತ್ತಾರೆ. ಭಿಕ್ಷೆ ಬೇಡುವ ಸಮಯ ಮುಗಿದ ಬಳಿಕ ಒಳ್ಳೆ ಕಾರಿನಲ್ಲಿ ಮನೆಗೆ ಹೋಗುತ್ತಾರಂತೆ. ಸಾಯುವ ವರೆಗೆ ಭಿಕ್ಷೆ ಬೇಡುವುದು ಬಿಡುವುದಿಲ್ಲ ಭಿಕ್ಷೆ ಬೇಡುವುದೇ ನನ್ನ ಕಾಯಕ ಎನ್ನುವ ಭರತ್ ಜೈನ್ ರ ಒಟ್ಟು ಆಸ್ತಿ ಮೌಲ್ಯ 7.50 ಕೋಟಿ ರೂಪಾಯಿಗಳು!