Site icon Samastha News

Infosys: 32 ಸಾವಿರ ಕೋಟಿ ತೆರಿಗೆ ಬಾಕಿ, ಸರ್ಕಾರದ ವಿರುದ್ಧ ಹೋರಾಡಲಿದೆಯೇ ಇನ್ಫೋಸಿಸ್?

Infosys

Infosys

‘ದೇಶದ ಪ್ರಗತಿಗಾಗಿ ಯುವಕರು ವಾರದ 80 ಗಂಟೆ ಕೆಲಸ ಮಾಡಬೇಕು’ ಎಂದಿದ್ದರು ಇನ್ಫೋಸಿಸ್ ಅಧ್ಯಕ್ಷ ನಾರಾಯಣ ಮೂರ್ತಿ. ಅವರ ಆ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈಗ ಅದೇ ಇನ್ಫೋಸಿಸ್ ಗೆ 32 ಸಾವಿರ ಕೋಟಿ ರೂಪಾಯಿ ಜಿಎಸ್ಟಿ ಬಾಕಿ ಉಳಿಸಿಕೊಂಡಿರುವುದಕ್ಕೆ ಸರ್ಕಾರ ನೊಟೀಸ್ ನೀಡಿದೆ. ದೇಶಕ್ಕಾಗೊ ದುಡಿಯಿರಿ ಎಂದಿದ್ದವರ ಸಂಸ್ಥೆಯೇ ದೇಶದ ಪ್ರಗತಿಗಾಗಿ ಕಟ್ಟಬೇಕಾಗಿರುವ ತೆರಿಗೆಯನ್ನು ಬಾಕಿ ಉಳಿಸಿಕೊಂಡಿರುವುದು ತೀವ್ರ ಟೀಕೆಗೆ ಗುರಿಯಾಗಿದೆ‌‌.

ಪ್ರಕರಣದ ಮತ್ತೊಂದು ವ್ಯಂಗ್ಯವೆಂದರೆ ಇನ್ಫೋಸಿಸ್ ಜಿಎಸ್ಟಿ ತೆರಿಗೆ ಬಾಕಿ ಉಳಿಸಿಕೊಂಡಿದೆ ಎಂಬ ಆರೋಪವಿದೆ, ಅಸಲಿಗೆ ಆ ಜಿಎಸ್ಟಿ ಪೋರ್ಟನ್ ಅನ್ನು ವಿನ್ಯಾಸ ಮಾಡಿ, ಟೆಕ್ ಸಪೋರ್ಟ್ ನೀಡುತ್ತಿರುವುದು ಅದೇ ಇನ್ಫೋಸಿಸ್ ಸಂಸ್ಥೆ. ನೊಟೀಸ್ ಅನ್ನು ಹಿಂಪಡೆಯಬೇಕೆಂದು ಇನ್ಫೋಸಿಸ್ ಸಲ್ಲಿಸಿರುವ ಅರ್ಜಿಗೆ ಜಿಎಸ್ಟಿ ಪ್ರಾಧಿಕಾರ ಸೊಪ್ಪು ಹಾಕಿಲ್ಲ. ಅಲ್ಲದೆ ತೆರಿಗೆ ಮೇಲೆ ಬಡ್ಡಿ ವಿಧಿಸುವ ಸಾಧ್ಯತೆಯೂ ಇದೆ. ಇದೀಗ ಇನ್ಫೊಸಿಸ್ ನ್ಯಾಯಾಲಯಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇನ್ಫೋಸಿಸ್ ಸಂಸ್ಥೆಯು ತನ್ನ ವಿದೇಶಿ ಘಟಕಗಳಿಂದ ದುಡಿಯುತ್ತಿರುವ ಸಾವಿರಾರು ಕೋಟಿ ಹಣಕ್ಕೆ ತೆರಿಗೆ ಪಾವತಿಸಿಲ್ಲವಂತೆ ಅದೂ 2017 ರಿಂದ. ಆದರೆ ಜಿಎಸ್ಟಿ ನಿಯಮಗಳ ಪ್ರಕಾರ ವಿದೇಶಿ ಸಂಸ್ಥೆಗಳಿಗೆ ನೀಡಿದ ಸೇವೆ/ ಉತ್ಪನ್ನಕ್ಕೂ ನಿಯಮಿತ ತೆರಿಗೆ ನೀಡಬೇಕಿದೆ. ಆ ಹಣವನ್ನು ಇನ್ಫೋಸಿಸ್ ಪಾವತಿ ಮಾಡಿಲ್ಲವಾದ್ದರಿಂದ ಈಗ ನೊಟೀಸ್ ನೀಡಲಾಗಿದೆ. ನೊಟೀಸ್ ಗೆ ಉತ್ತರಿಸಲು ಇನ್ಫೋಸಿಸ್ 10 ದಿನಗಳ ಕಾಲಾವಕಾಶವನ್ನು ಕೇಳಿದೆ.

Zepto: ಮುಂಬೈ ಬಿಟ್ಟು ಬೆಂಗಳೂರಿಗೆ ಬರುತ್ತಿದೆ 30 ಸಾವಿರ‌ ಕೋಟಿ‌ ಮೌಲ್ಯದ ಕಂಪೆನಿ

ಇದೇ ವರ್ಷ ಕೆನಡಾ ಸರ್ಕಾರ ಸಹ ಇನ್ಫೋಸಿಸ್ ಮೇಲೆ 84 ಲಕ್ಷ ರೂಪಾಯಿ ದಂಡ ವಿಧಿಸಿತ್ತು. ನೌಕರರ ವಿಮೆ ಹಣವನ್ನು ನಿಯಮದಂತೆ ನೀಡದ ಕಾರಣ ಈ ದಂಡವನ್ನು ವಿಧಿಸಲಾಗಿತ್ತು. ಈಗ ಭಾರತ ಸರ್ಕಾರಕ್ಕೆ 32 ಸಾವಿರ ಕೋಟಿ ತೆರಿಗೆ ಬಾಕಿ ನೀಡುವ ಇಕ್ಕಟ್ಟಿಗೆ ಸಿಲುಕಿರುವ ಸಂಸ್ಥೆ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡುವ ಸಾಧ್ಯತೆ ಇದೆ. 32 ಸಾವಿರ ಕೋಟಿ ಬಾಕಿ ಪಾವತಿ ನೊಟೀಸ್ ಸುದ್ದಿ ಹೊರ ಬೀಳುತ್ತಿದ್ದಂತೆ ಕಂಪೆನಿಯ ಷೇರು ಮೌಲ್ಯವೂ ಕುಸಿಯುತ್ತಿದೆ.

Exit mobile version