ISRO: ಅನ್ಯಗ್ರಹ ಜೀವಿಗಳು ಇವೆಯೇ? ಇಸ್ರೋ ಅಧ್ಯಕ್ಷ ಹೇಳುವುದೇನು?

0
111
ISRO

ISRO

ಮನುಷ್ಯನಿಗೆ ಕಾಡುತ್ತಿರುವ ದೊಡ್ಡ ಕುತೂಹಲಗಳಲ್ಲಿ ಒಂದು, ನಾವು ಒಂಟಿಯಾ? ನಮ್ಮಂತೆ ಜೀವಿಗಳು ಇದ್ದಾರೆಯೇ, ನಮ್ಮ ಭೂಮಿಯಂಥಹಾ ಭೂಮಿ ಇನ್ನೊಂದು ಇದೆಯೇ? ಎಂಬುದು. ದಶಕಗಳಿಂದಲೂ ಈ ಪ್ರಶ್ನೆಗೆ ಉತ್ತರ ಹುಡುಕುವ ಕಾರ್ಯಗಳು ನಡೆಯುತ್ತಲೆ ಇವೆ ಆದರೆ ನಿಖರ ಉತ್ತರ ದೊರೆತಿಲ್ಲ. ಆದರೆ ಹಲವು ವಿಜ್ಞಾನಿಗಳು ಈ ಬಗ್ಗೆ ಮಾತನಾಡಿದ್ದಾರೆ. ಇದೀಗ ಇಸ್ರೋ ಅಧ್ಯಕ್ಷ ಸೋಮನಾಥ್ ಅವರು ಈ ಬಗ್ಗೆ ಮಾತನಾಡಿದ್ದಾರೆ.

ಪಾಡ್’ಕಾಸ್ಟ್ ಒಂದಕ್ಕೆ ಅತಿಥಿಯಾಗಿ ಬಂದಿದ್ದ ಸೋಮನಾಥ್ ಅವರಿಗೆ ‘ಏಲಿಯನ್ ಗಳು ಇದ್ದಾರೆಯೇ’ ಎಂಬ ಪ್ರಶ್ನೆ ಎದುರಾಯ್ತು. ಅದಕ್ಕೆ ಉತ್ತರಿಸಿದ ಶ್ರೀಧರ್, ‘ಖಂಡಿತ ಇದ್ದಾರೆ, ಅದರ ಬಗ್ಗೆ ಅನುಮಾನವೇ ಬೇಡ’ ಎಂದಿದ್ದಾರೆ. ಮಾತ್ರವಲ್ಲ ಅವರು ನಮಗಿಂತಲೂ ಹೆಚ್ಚು ಅಡ್ವಾನ್ಸ್ ಆಗಿ ಇರಲಿಕ್ಕೂ ಸಾಧ್ಯವಿದೆ. ಭೂಮಿಯ ಮೇಲಿನ ಮನುಷ್ಯರಿಗೆ ಕೆಲವು ಲಿಮಿಟೇಷನ್’ಗಳಿವೆ ಆದರೆ ಆ ಲಿಮಿಟೇಷನ್ ಅವರಿಗೆ ಇಲ್ಲದಿರುವ ಸಾಧ್ಯತೆಯೂ ಇದೆ ಎಂದಿದ್ದಾರೆ.

ಏಲಿಯನ್ಸ್ ಇರುವುದು ಮಾತ್ರವಲ್ಲ, ಅವರು ಭೂಮಿಗೆ ಭೇಟಿ ನೀಡಿರುವ ಅಥವಾ ಭೂಮಿಯ ಬಗ್ಗೆ ಅವರಿಗೆ ಮಾಹಿತಿ ಇರುವ ಸಾಧ್ಯತೆಯೂ ಇದೆ. ಭೂಮಿಗೆ ಬಹಳ ವಯಸ್ಸಾಗಿಲ್ಲ, ಹಾಗಾಗಿ ಇಲ್ಲಿನ ತಂತ್ರಜ್ಞಾನಕ್ಕೆ ಲಿಮಿಟೇಶನ್ ಇದೆ, ಅದಿನ್ನೂ ಬೆಳವಣಿಗೆ ಹಂತದಲ್ಲಿದೆ. ಅನ್ಯಗ್ರಹ ಜೀವಿಗಳು ನಮ್ಮೊಟ್ಟಿಗೆ ಸಂಪರ್ಕ ಸಾಧಿಸಲು ಯತ್ನಿಸುವ ಸಾಧ್ಯತೆ ಇದೆ, ಆದರೆ ಅವರ ಸಂವಹನದ ಮಾದರಿಯನ್ನು ಗುರುತಿಸಿ, ಅರ್ಥ ಮಾಡಿಕೊಳ್ಳುವಷ್ಟು ನಾವು ತಾಂತ್ರಿಕವಾಗಿ ಮುಂದುವರೆದಿಲ್ಲ ಅನಿಸುತ್ತದೆ’ ಎಂದಿದ್ದಾರೆ.

ಭೂಮಿಯನ್ನು ಜೂ ಅಥವಾ ಪ್ರಾಣಿ ಸಂಗ್ರಹಾಲಯಕ್ಕೆ ಹೋಲಿಸಿರುವ ಸೋಮನಾಥ್, ಅನ್ಯಗ್ರಹಜೀವಿಗಳಿಗೆ ಭೂಮಿ ಜೂ ರೀತಿ ಇರಬಹುದು. ನಾವು ಜೂಗೆ ಹೋದಾಗ ಪ್ರಾಣಿಗಳನ್ನು ಕರೆಯುತ್ತೀವಿ, ಮಾತನಾಡಿಸಲು ಯತ್ನಿಸುತ್ತೇವೆ ಆದರೆ ಅವಕ್ಕೆ ಅದೇನೂ ಅರ್ಥ ಆಗುವುದಿಲ್ಲ. ಅನ್ಯಗ್ರಹ ಜೀವಿಗಳ ವಿಷಯದಲ್ಲೂ ಇದೆ ಆಗಿರಬಹುದು’ ಎಂದಿದ್ದಾರೆ.

US Election: ಅಮೆರಿಕ ಚುನಾವಣಾ ಮತಪತ್ರದಲ್ಲಿ ಭಾರತೀಯ ಭಾಷೆ, ಹಿಂದಿ ಅಲ್ಲ ಮತ್ಯಾವುದು?

ಒಂದೊಮ್ಮೆ ಅನ್ಯಗ್ರಹ ಜೀವಿಗಳನ್ನು ನಾವು ಸಂಪರ್ಕ ಮಾಡಲು ಸಾಧ್ಯ ಆದರೆ ಏನಾಗಬಹುದು ಎಂಬ ಪ್ರಶ್ನೆಗೆ ಉತ್ತರಿಸಿರುವ ಸೋಮನಾಥ್, ‘ಒಂದೊಮ್ಮೆ ಅನ್ಯಗ್ರಹ ಜೀವಿಗಳು ಹಾಗೂ ಮನುಷ್ಯರ ನಡುವೆ ಸಂಪರ್ಕ ಸಾಧ್ಯವಾದರೆ ಒಬ್ಬರನ್ನು ಇನ್ನೊಬ್ಬರು ಡಾಮಿನೇಟ್ ಪ್ರಯತ್ನ ಮಾಡುತ್ತಾರೆ, ಅದು ಪ್ರಕೃತಿ ಸಹಜ ಸಹ. ಯಾರು ತಂತ್ರಜ್ಞಾನದಲ್ಲಿ ಮುಂದೆ ಇರುತ್ತಾರೆಯೋ ಅವರದ್ದು ಮೇಲುಗೈ ಆಗುತ್ತದೆ’ ಎಂದಿದ್ದಾರೆ ಸೋಮನಾಥ್.

LEAVE A REPLY

Please enter your comment!
Please enter your name here