Online Sale
ಸರಣಿ ಹಬ್ಬದ ಸೀಸನ್ ಪ್ರಾರಂಭವಾಗಿದೆ. ಆನ್ ಲೈನ್ ಸ್ಟೋರ್’ಗಳು ಗರಿಗೆದರಿ ನಿಂತಿವೆ. ಹಬ್ಬಗಳು ಶುರುವಾಗುವ ಮುನ್ನವೇ ಆನ್’ಲೈನ್ ರಿಯಾಯಿತಿ ಘೋಷಣೆ ಮಾಡಿವೆ. ಫ್ಲಿಪ್’ಕಾರ್ಟ್ ಬಿಗ್ ಬಿಲಿಯನ್ ಡೇ ಘೋಷಿಸಿದೆ, ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಘೋಷಣೆ ಮಾಡಿದೆ. ಮೊಬೈಲ್, ಲ್ಯಾಪ್’ಟಾಪ್ ಇನ್ನಿತರೆಗಳ ಮೇಲೆ ಭಾರಿ ರಿಯಾಯಿತಿ ಘೋಷಣೆ ಮಾಡಿದೆ. ಆದರೆ ಇದು ಈ ಆನ್’ಲೈನ್ ಕಂಪೆನಿಗಳು ಎರಚುತ್ತಿರುವ ಮಂಕುಬೂದಿ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಅದು ಮಾತ್ರವೇ ಅಲ್ಲದೆ, ರೀಟೆಲ್ ಮಾರಾಟಗಾರರಿಗೆ ಮತ್ತು ಖರೀದಿದಾರರಿಗೆ ಎಸಗುತ್ತಿರುವ ಅನ್ಯಾಯ ಈ ಸೇಲ್ ಮತ್ತು ಡಿಸ್ಕೌಂಟ್ ಗಳು.
ಕೆಲವು ಮೂಲಗಳ ಪ್ರಕಾರ ಈ ಸೀಸನ್ ಸೇಲ್ ಗಳ ಮೂಲ ಉದ್ದೇಶವೇ ಬಿಕರಿ ಅಂದರೆ ಮಾರಾಟ ಆಗದೆ ಉಳಿದ ವಸ್ತುಗಳನ್ನು ಮಾರಾಟ ಮಾಡುವುದು. ಅಥವಾ ಭವಿಷ್ಯದಲ್ಲಿ ಬೇಡಿಕೆ ಕಳೆದುಕೊಂಡು ಆ ಮೂಲಕ ಬೆಲೆ ಕಳೆದುಕೊಳ್ಳಲಿರುವ ವಸ್ತುಗಳನ್ನು ಈಗಲೇ ಡಿಸ್ಕೌಂಟ್ ಹೆಸರಲ್ಲಿ ಮಾರಾಟ ಮಾಡಿವಿಡುವುದು.
ಯೋಚಿಸಿ, ಬಿಗ್ ಬಿಲಿಯನ್ ಡೇ ಅಥವಾ ಗ್ರೇಟ್ ಇಂಡಿಯನ್ ಸೇಲ್ ನಲ್ಲಿ ಯಾವ ಮಾದರಿಯ ಐಫೋನ್’ಗೆ ರಿಯಾಯಿತಿ ಹೆಚ್ಚಿದೆ. ಐಫೊನ್ 13, 12, X ಇವಕ್ಕೆ. ಆದರೆ ಈಗ ಬಿಡುಗಡೆ ಆಗಿರುವ ಐಫೋನ್ 16 ಮೇಲೆ ಎಷ್ಟು ಆಫರ್ ಇದೆ? ಇದರ ಅಂತರದಲ್ಲಿಯೇ ಗೊತ್ತಾಗುತ್ತದೆ ಯಾವ ಐಫೋನ್ ಔಟ್ ಡೇಟೆಡ್ ಆಗುತ್ತಿದೆಯೋ ಅದರ ಮೇಲೆ ರಿಯಾಯಿತಿ ಹೆಚ್ಚಾಗಿದೆ. ಇನ್ನು ಬಟ್ಟೆ, ಶೂ ಇನ್ನಿತರೆ ವಿಷಯಗಳಿಗೂ ಇದೇ ನಿಯಮ ಅನ್ವಯಿಸುತ್ತದೆ. ಯಾವ ಮಾದರಿಯ ಶೂ ಕಡಿಮೆ ಸೇಲ್ ಆಗಿದೆಯೋ ಅದರ ಮೇಲೆ ಹೆಚ್ಚಿನ ರಿಯಾಯಿತಿ ನೀಡಲಾಗುತ್ತದೆ. ಕೆಲವು ತಜ್ಞರ ಪ್ರಕಾರ ಹೆಚ್ಚು ಮಾರಾಟವಾಗುವ ಅಥವಾ ಬೇಡಿಕೆಯಲ್ಲಿರುವ ವಸ್ತುಗಳನ್ನು ಸೇಲ್ಸ್ ಅವಧಿಯಲ್ಲಿ ಸೇಲ್’ಗೆ ಲಿಸ್ಟ್ ಸಹ ಮಾಡುವುದಿಲ್ಲವಂತೆ!
ಇನ್ನು ರಿಟೇಲ್ ವಿಷಯಕ್ಕೆ ಬರೋಣ. ಭಾರತದಲ್ಲಿ ಸ್ಪರ್ಧಾತ್ಮಕ ಬೆಲೆ ಅಥವಾ ಮಾರುಕಟ್ಟೆ ಎಂಬ ಕಾನೂನೇ ಇದೆ. ಆದರೆ ಈ ಆನ್’ಲೈನ್ ಡಿಸ್ಕೌಂಟ್ ನಿಂದಾಗಿ ರೀಟೆಲ್ ಮಾರಾಟಗಾರರಿಗೆ, ರೀಟೇಲ್ ನಲ್ಲಿ ಖರೀದಿ ಮಾಡುವ ಗ್ರಾಹಕರಿಗೆ ಅನ್ಯಾಯವೇ ಆಗುತ್ತಿದೆ. ಫಿಸಿಕಲ್ ಸ್ಟೋರ್, ಅದರ ಬಾಡಿಗೆ ಇನ್ನಿತರೆಗಳು ಇಲ್ಲದೇ ಇರುವ ಕಾರಣ ಈಗಾಗಲೇ ಆನ್’ಲೈನ್ ಸ್ಟೋರ್ ಗಳು ರೀಟೆಲ್ ಶಾಪ್’ಗಳಿಗಿಂತಲೂ ಕಡಿಮೆ ದರಕ್ಕೆ ವಸ್ತುಗಳನ್ನು ವಿಶೇಷವಾಗಿ ಎಲೆಕ್ಟ್ರಾನಿಕ್ ಗೂಡ್ಸ್ ಗಳನ್ನು ಮಾರಾಟ ಮಾಡುತ್ತಿವೆ. ಇದರ ನಡುವೆ ಈ ಸೀಸನ್ ಸೇಲ್ ನೆಪದಲ್ಲಿ ಹಳೆಯ ಗೂಡ್ಸ್ ಗಳಿಗೆ ಇನ್ನಷ್ಟು ಬೆಲೆ ಇಳಿಸಿ ಮಾರಾಟ ಮಾಡುವುದು ರೀಟೆಲ್ ಮಾರಾಟಗಾರರಿಗೆ ಭಾರಿ ಹೊಡೆತ ನೀಡುತ್ತಿದೆ.
Tirupati Laddu: ದನದ ಕೊಬ್ಬು ಪತ್ತೆಯಾದ ಬಳಿಕ ಮಾರಾಟವಾದ ತಿರುಪತಿ ಲಡ್ಡುಗಳ ಸಂಖ್ಯೆ ಎಷ್ಟು ಗೊತ್ತೆ?
ರೀಟೆಲ್ ಮಾರಾಟಗಾರರು ಕಾಲ ಕಾಲಕ್ಕೆ ಈ ಆನ್’ಲೈನ್ ಸೇಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ, ದೂರುಗಳು ಸಹ ದಾಖಲಾಗಿವೆ ಆದರೂ ಸಹ ಈ ಆನ್’ಲೈನ್ ಮಳಿಗೆಗಳ ಸೀಸನಲ್ ಸೇಲ್ ಜುಮ್ಲಾ ಸಾಗುತ್ತಲೇ ಇದೆ.