Site icon Samastha News

Jangamakote Farmers: ಭೂಸ್ವಾಧೀನಕ್ಕೆ ವಿರೋಧ, ಜಂಗಮಕೋಟೆಯಲ್ಲಿ ಬೀದಿಗಿಳಿದ ರೈತರು

Jangamakote

Jangamakote Farmers

ಶಿಢ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಸುತ್ತಮುತ್ತಲ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಗೆ ಸರ್ಕಾರವು ಭೂಸ್ವಾಧೀನಕ್ಕೆ ಮುಂದಾಗಿದ್ದು, ಇದಕ್ಕೆ ಸ್ಥಳೀಯ ರೈತರಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ‌. ಕೃಷಿ ಭೂಮಿಯ ಸ್ವಾಧೀನ ವಿರೋಧಿಸಿ ಜಂಗಮಕೋಟೆ ಹಾಗೂ ಸುತ್ತ-ಮುತ್ತಲ ಹಳ್ಳಿಗಳ ನೂರಾರು ರೈತರು ಜಂಗಮಕೋಟೆಯಲ್ಲಿ ಇಂದು (ಆಗಸ್ಟ್ 13) ಬೃಹತ್ ಪ್ರತಿಭಟನೆ ನಡೆಸಿದರು. ಸರ್ಕಾರದ ರೈತ ವಿರೋಧಿ ನಡೆಯನ್ನು ತೀವ್ರವಾಗಿ ಖಂಡಿಸಿದರು.

ಜಂಗಮಕೋಟೆ ಹಾಗೂ ಸುತ್ತಮುತ್ತಲಿನ ಸುಮಾರು 2283 ಎಕರೆ ಜಾಗವನ್ನು ಕೈಗಾರಿಕೆಗಾಗಿ ಒತ್ತುವರಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ದಶಕಗಳಿಂದಲೂ ಇದೇ ಭೂಮಿಯನ್ನು ನಂಬಿ ಕೃಷಿ ನಡೆಸಿಕೊಂಡು ಬಂದಿರುವ ರೈತರು,‌ ಜೀವ ಬಿಟ್ಟರು ಭೂಮಿ ಕೊಡೆವು ಎಂದು ಹಠ ತೊಟ್ಟಿದ್ದು, ಸರ್ಕಾರಕ್ಕೆ ಸೆಡ್ಡು ಹೊಡೆದು ಇಂದು ಪ್ರತಿಭಟನೆ ನಡೆಸಿದ್ದಾರೆ.

ಜಂಗಮಕೋಟೆ ವೃತ್ತದಲ್ಲಿ ಇಂದು ನಡೆದ ಪ್ರತಿಭಟನೆಯಲ್ಲಿ ನೂರಾರು ರೈತರು ಭಾಗವಹಿಸಿದ್ದರು. ರಸ್ತೆಯಲ್ಲಿಯೇ ಕೂತು  ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ರೈತರ ಪ್ರತಿಭಟನೆಯಿಂದ ಕೋಲಾರ ಚಿಕ್ಕಬಳ್ಳಾಪುರ ರಸ್ತೆ ಸಂಚಾರ ಅಸ್ತವ್ಯಸ್ಥವಾಯ್ತು. ಪೊಲೀಸರು ರೈತರ ಮನವೊಲಿಸುವ ಪ್ರಯತ್ನವೂ ಫಲ ನೀಡಲಿಲ್ಲ.

ಉದ್ದೇಶಿತ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿರುವ ಪ್ರದೇಶ ಫಲವತ್ತಾದ ಕೃಷಿ ಭೂಮಿ ಆಗಿದ್ದು, ಒಂದೊಮ್ಮೆ ಭೂಸ್ವಾಧೀನ ನಡೆದರೆ ಸಾವಿರಾರು ರೈತ ಕುಟುಂಬಗಳು, ಜೀವನಕ್ಕೆ ಆಧಾರವಾಗಿರುವ ಕೃಷಿ ಭೂಮಿ ಕಳೆದುಕೊಳ್ಳಲಿವೆ. ಸರ್ಕಾರವು ಪ್ರಯೋಗಿಕವಲ್ಲದ ಮೊತ್ತವನ್ನು ಕೃಷಿ ಜಮೀನಿಗೆ ನಿಗದಿಪಡಿಸಿದ್ದು, ಆ ಅತ್ಯಲ್ಪ ಮೊತ್ತದಲ್ಲಿ ರೈತ ತನ್ನ ಹಾಗೂ ಕುಟುಂಬದ ಭವಿಷ್ಯವನ್ನು ಸಂರಕ್ಷಣೆ ಮಾಡುವುದು ಅಸಾಧ್ಯವಾಗಿದೆ, ಹಾಗಾಗಿ ಏನೇ ಆದರು ಕೃಷಿ ಭೂಮಿಯನ್ನು ಸರ್ಕಾರಕ್ಕೆ ನೀಡುವುದಿಲ್ಲ ಎಂಬುದು ರೈತರ ನಿರ್ಣಯ.

Refex Eveelz: ಸ್ವಾತಂತ್ರ್ಯೋತ್ಸವದ ಆಫರ್: ಕೇವಲ 78 ರೂಪಾಯಿಗಳಿಗೆ ವಿಮಾನ ನಿಲ್ದಾಣ‌ ತಲುಪಿ

ಸರ್ಕಾರ, ಈ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ಉಗ್ರವಾಗಿ ಮಾಡಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

Exit mobile version