Site icon Samastha News

Jasmine Bhasin: ಕಾಂಟಾಕ್ಟ್ ಲೆನ್ಸ್ ನಿಂದ ಕಣ್ಣೇ ಕಳೆದುಕೊಂಡರೇ ನಟಿ?

Jasmin Bhasin

Jasmin Bhasin

Jasmine Bhasin

ಸಿನಿಮಾ ನಟ-ನಟಿಯರು ಕಾಂಟಾಕ್ಟ್ ಲೆನ್ಸ್​ಗಳನ್ನು ಬಳಸುವುದು ಸಹಜ. ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ ನಟಿಸುವಾಗ ಕಾಂಟಾಕ್ಟ್ ಲೆನ್ಸ್ ಬಳಸಲೇ ಬೇಕಾಗುತ್ತದೆ. ಆದರೆ ಕನ್ನಡದಲ್ಲಿಯೂ ನಟಿಸಿರುವ ನಟಿಯೊಬ್ಬರು ಕಾಂಟಾಕ್ಟ್ ಲೆನ್ಸ್​ನಿಂದ ಸಮಸ್ಯೆ ಎದುರಿಸಿದ್ದು ಕಣ್ಣನ್ನೇ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ಕನ್ನಡದ ‘ಕ್ರೋರ್​ಪತಿ’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಜಾಸ್ಮಿನ್ ಭಾಸಿನ್, ಕಾಂಟಾಕ್ಟ್​ ಲೆನ್ಸ್​ನಿಂದ ತಾವು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಮಾತ್ರವಲ್ಲದೆ ಜಾಸ್ಮಿನ್​ರ ಎರಡು ಕಣ್ಣಿಗೂ ಪಟ್ಟಿ ಹಾಕಿರುವ ಫೋಟೊವನ್ನು ಸಹ ಅವರೇ ಖುದ್ದು ಹಂಚಿಕೊಂಡಿದ್ದಾರೆ. ಚಿತ್ರ ನೋಡಿದ ಅವರ ಅಭಿಮಾನಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಜಾಸ್ಮಿನ್ ಹೇಳಿರುವಂತೆ ಕೆಲ ದಿನದ ಹಿಂದೆ ಅವರು ದೆಹಲಿಯಲ್ಲಿದ್ದರಂತೆ. ಅಲ್ಲಿ ಒಂದು ಕಾರ್ಯಕ್ರಮಕ್ಕೆ ತೆರಳಬೇಕಾಗಿದ್ದರಿಂದ ಅವರು ಅದಕ್ಕಾಗಿ ಸಿದ್ಧರಾಗುತ್ತಿದ್ದರಂತೆ. ಕಾರ್ಯಕ್ರಮದಲ್ಲಿ ಭಾಗವಹಿಸುವಾಗ ಕಾಂಟಾಕ್ಟ್ ಲೆನ್ಸ್ ಧರಿಸುವುದು ಸಹಜ ಅಂತೆಯೇ ಅವರು ಅಂದು ಕಾಂಟಾಕ್ಟ್ ಲೆನ್ಸ್ ಧರಿಸಿದ್ದಾರೆ. ಸ್ವಲ್ಪ ಹೊತ್ತಿನಲ್ಲಿಯೇ ಕಣ್ಣಿನಲ್ಲಿ ಉರಿ ಕಾಣಿಸಿಕೊಂಡಿದೆ. ಅದಾದ ಬಳಿಕ ಉರಿ ಇನ್ನಷ್ಟು ಹೆಚ್ಚಾಗಿದೆ. ಕೂಡಲೇ ಅವರು ಕಾಂಟಾಕ್ಟ್ ಲೆನ್ಸ್ ತೆಗೆದು ಕೂಲಿಂಗ್ ಗ್ಲಾಸ್ ಹಾಕಿಕೊಂಡು ಹೇಗೋ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

CM Siddaramaiah: ನೆರೆ ಹಾವಳಿ ವೀಕ್ಷಣೆಗೆ ಸಿದ್ದರಾಮಯ್ಯ, ರಕ್ಷಣಾ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ

ಕಾರ್ಯಕ್ರಮ ಮುಗಿದ ಬಳಿಕ ವೈದ್ಯರನ್ನು ಸಂಪರ್ಕಿಸಿ ಸಮಸ್ಯೆ ಹೇಳಿಕೊಂಡಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು, ಕಾರ್ನಿಯಾ ಡ್ಯಾಮೇಜ್ ಆಗಿದೆ ಎಂದಿದ್ದಾರೆ. ಅದಕ್ಕೆ ಸೂಕ್ತ ಚಿಕಿತ್ಸೆ ಅಗತ್ಯವಿದೆಯೆಂದು ಎರಡೂ ಕಣ್ಣಿಗೆ ಪಟ್ಟಿ ಹಾಕಿದ್ದಾರೆ. ನನಗೆ ಈಗ ಕಾಣುವುದು ಬಹಳ ಕಡಿಮೆ ಆಗಿ ಹೋಗಿದೆ ಎಂದು ನಟಿ ಅಳಲು ತೋಡಿಕೊಂಡಿದ್ದಾರೆ. ಆದರೆ ವೈದ್ಯರು ಭರವಸೆ ನೀಡಿದ್ದು, ಇನ್ನು ನಾಲ್ಕು ದಿನಗಳಲ್ಲಿ ಕಣ್ಣು ಸರಿಹೋಗುತ್ತದೆ ಎಂದಿದ್ದಾರಂತೆ. ಆದರೆ ಕಾರ್ನಿಯಲ್ ಡ್ಯಾಮೇಜ್​ನ ಬಳಿಕ ಕಣ್ಣು ಮೊದಲಿನಿಂತೆಯೇ ಇರುತ್ತದೆಯೇ ಎಂಬುದು ಪ್ರಶ್ನೆ.

ಜಾಸ್ಮಿನ್, ಕನ್ನಡ, ತೆಲುಗು, ತಮಿಳು, ಮಲಯಾಳಂ, ಪಂಜಾಬಿ, ಹಿಂದಿ ಸಿನಿಮಾ ಹಾಗೂ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಜಾಸ್ಮಿನ್ ಅವರು ಕನ್ನಡದ ‘ಕ್ರೋರ್​ಪತಿ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ನಟ ಕೋಮಲ್ ನಾಯಕ. ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್​ನಲ್ಲೂ ಸಹ ಜಾಸ್ಮಿನ್ ಭಾಗವಹಿಸಿದ್ದರು. ಇನ್ನೂ ಕೆಲವು ರಿಯಾಲಿಟಿ ಶೋ, ಧಾರಾವಾಹಿಗಳಲ್ಲಿ ಜಾಸ್ಮಿನ್ ನಟಿಸಿದ್ದಾರೆ.

Exit mobile version