Jawa Bikes
ರಾಯಲ್ ಎನ್’ಫೀಲ್ಡ್ ಭಾರತ ಬೈಕ್ ಮಾರುಕಟ್ಟೆಯ ರಾಜನಾಗಿ ಮೆರೆಯುತ್ತಿದೆ. 350 ಸಿಸಿ ಮತ್ತು ಅದಕ್ಕೂ ಹೆಚ್ಚಿನ ಸಿಸಿ ಸೆಗ್ಮೆಂಟ್ ನಲ್ಲಿ ರಾಯಲ್ ಎನ್’ಫೀಲ್ಡ್ ಅನ್ನು ಹಿಂದಿಕ್ಕುವ ಇನ್ಯಾವುದೇ ಇತರ ಕಂಪೆನಿ ಇಲ್ಲ. ಆದರೆ ಇತ್ತೀಚೆಗೆ ಬಜಾಜ್ ಸಹ ಮಾಲೀಕತ್ವದ ಟ್ರಯಂಫ್ ಮತ್ತು ಡ್ಯೂಕ್ 350 ಸಿಸಿ ಸೆಗ್ಮೆಂಟ್ ನಲ್ಲಿ ರಾಯಲ್ ಎನ್’ಫೀಲ್ಡ್ ಗೆ ಸ್ಪರ್ಧೆ ಒಡ್ಡುತ್ತಿವೆಯಾದರೂ ‘ಬುಲೆಟ್’ ಸೆಗ್ಮೆಂಟ್ ನಲ್ಲಿ ರಾಯಲ್ ಎನ್’ಫೀಲ್ಡ್ ರಾಜನೇ ಆಗಿದೆ. ಆದರೆ ಈಗ ಮತ್ತೊಂದು ಬುಲೆಟ್ ಬೈಕ್ ಸಂಸ್ಥೆ ಜಾವಾ, ರಾಯಲ್ ಎನ್’ಫೀಲ್ಡ್ ಗೆ ಠಕ್ಕರ್ ಕೊಡಲು ಮುಂದಾಗಿದೆ.
ಮಹೀಂದ್ರಾ ಒಡೆತನದ ಕ್ಲಾಸಿಕ್ ಲೆಜೆಂಡ್ಸ್, ಜಾವಾ ಬೈಕುಗಳನ್ನು ನಿರ್ಮಿಸಿ ಮಾರಾಟ ಮಾಡುತ್ತಿದ್ದು, ಈಗಾಗಲೆ ಜಾವಾದ ಹಲವು ಮಾದರಿಯ ಬೈಕುಗಳನ್ನು ಮಾರುಕಟ್ಟೆಗೆ ತಂದಿದೆ. ಆದರೆ ರಾಯಲ್ ಎನ್’ಫೀಲ್ಡ್ ನ ಬುಲೆಟ್ ಬೈಕುಗಳಿಗೆ ಸ್ಪರ್ಧೆ ಒಡ್ಡಲು ಇವು ವಿಫಲವಾಗಿದ್ದವು. ಈಗ ಜಾವಾದ ಹೊಸ ಬೈಕ್ ಅನ್ನು ಹಲವು ಬದಲಾವಣೆಗಳೊಂದಿಗೆ ಹೊರತಂದಿದ್ದು ಈ ಬೈಕು, ರಾಯಲ್ ಎನ್’ಫೀಲ್ಡ್ ನ ಕ್ಲಾಸಿಕ್ 350 ಹಾಗೂ ಹಂಟರ್ 350 ಎರಡಕ್ಕೂ ಠಕ್ಕರ್ ಕೊಡಲಿದೆ ಎನ್ನಲಾಗುತ್ತಿದೆ.
ಜಾವಾ 42 ಎಫ್ ಜೆ ಹೆಸರಿನ ಹೊಸ ಬೈಕನ್ನು ಬಿಡುಗಡೆ ಮಾಡಲಾಗಿದ್ದು, ಈ ಬೈಕು ತುಸು ರಾಯಲ್ ಎನ್’ಫೀಲ್ಡ್ ಹಂಟರ್ ಅನ್ನು ಹೋಲುತ್ತಿದೆ. ಹಂಟರ್ ಮಾದರಿಯಲ್ಲಿಯೇ ಸ್ಪೋರ್ಟಿ ಲುಕ್ ಹಾಗೂ ವಿವಿಧ ಬಣ್ಣಗಳಲ್ಲಿ ಈ ಬೈಕನ್ನು ಬಿಡುಗಡೆ ಮಾಡಲಾಗಿದೆ. 350 ಸಿಸಿ ಎಂಜಿನ್ ಹೊಂದಿರುವ ಈ ಬೈಕು 6 ಗೇರ್ ಅನ್ನು ಹೊಂದಿದ್ದು, ಹಂಟರ್ ಅಥವಾ ಕ್ಲಾಸಿಕ್ ಗಿಂತಲೂ ಹೆಚ್ಚಿನ ಶಕ್ತಿಯನ್ನು ಹೊಮ್ಮಿಸುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.
Royal Enfield: ರಾಯಲ್ ಎನ್ಫೀಲ್ಡ್ ಬಿಡುಗಡೆ ಮಾಡುತ್ತಿದೆ ಎಂಟು ಹೊಸ ಬೈಕು
ಬೈಕ್ ನಲ್ಲಿ ಕೆಲ ಸುರಕ್ಷತಾ ತಂತ್ರಜ್ಞಾನವನ್ನೂ ಸಹ ಸೇರಿಸಲಾಗಿದೆ. ಡ್ಯುಯೆಲ್ ಚಾನೆಲ್ ಎಬಿಎಸ್, ದೊಡ್ಡ ಟಯರ್ ಗಳು ಸಹ ಇವೆ, ಟಾಪೆಂಡ್ ವೇರಿಯೆಂಟ್ ನಲ್ಲಿ ಟ್ರ್ಯಾಕ್ಷನ್ ಕಂಟ್ರೋಲ್ ತಂತ್ರಜ್ಞಾನವೂ ಇದೆ ಎನ್ನಲಾಗುತ್ತಿದೆ. ಇನ್ನುಳಿದಂತೆ ಈ ಬೈಕುಗಳ ಬೆಲೆ ಬಹುತೇಕ ರಾಯಲ್ ಎನ್’ಫೀಲ್ಡ್ ನ 350 ಬೈಕುಗಳಷ್ಟೆ ಇದೆ. ಬೆಂಗಳೂರಿನಲ್ಲಿ ಜಾವಾ 42 JF ಬೈಕಿನ ಆನ್ ರೋಡ್ ದರ 2.53 ಲಕ್ಷ ರೂಪಾಯಿಂದ ಪ್ರಾರಂಭವಾಗುತ್ತದೆ. ಇದರ ಟಾಪ್ ವೇರಿಯೆಂಟ್ ನ ಬೆಲೆ ಬೆಂಗಳೂರಿನಲ್ಲಿ 2.82 ಲಕ್ಷ ರೂಪಾಯಿಗಳಾಗಿದೆ.