Site icon Samastha News

Jeff Bezos: ವಿಶ್ವದ ಶ್ರೀಮಂತ ವ್ಯಕ್ತಿಯಿಂದ ಅತ್ಯಂತ ವೇಗದ ವಿಮಾನ ಖರೀದಿ ಇತರೆ ವಿಶೇಷತೆಗಳೇನು?

Jeff Bezos

Jeff Bezos

ಅಮೆಜಾನ್ ಯಾರಿಗೆ ಗೊತ್ತಿಲ್ಲ? ವಿಶ್ವದಾದ್ಯಂತ ಬ್ಯುಸಿನೆಸ್ ಹೊಂದಿರುವ ಅಮೆಜಾನ್ ನ ಮಾಲೀಕ ಜೆಫ್ ಬೆಜೋಜ್ ವಿಶ್ವದ ಶ್ರೀಮಂತ ವ್ಯಕ್ತಿ. ಇದೀಗ ಜೆಫ್ ಬೆಜೊಜ್ ಹೊಸ ವಿಮಾನವೊಂದನ್ನು ಖರೀದಿಸಿದ್ದು, ಪ್ರಯಾಣಕ್ಕೆ ಬಳಸುವ ವಿಮಾನಗಳಲ್ಲಿ ಅತ್ಯಂತ ವೇಗವಾಗಿ ಹಾರುವ ವಿಮಾನ ಇದಾಗಿದೆ. ಮಾತ್ರವಲ್ಲದೆ ಹಲವು ವಿಶೇಷತೆಗಳು ಇದರಲ್ಲಿವೆ.

ಜೆಫ್ ಬೆಜೊಜ್, ಗಲ್ಫ್ ಸ್ಟ್ರೀಂ ಜಿ700 ವಿಮಾನ ಖರೀದಿ ಮಾಡಿದ್ದಾರೆ. ಸುಮಾರು 700 ಕೋಟಿ ಬೆಲೆಯ ಈ ವಿಮಾನ ಶಬ್ದದ ವೇಗದಷ್ಟೆ, ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿದೆ. ಅಂದರೆ ಒಂದು ಸೆಕೆಂಡ್ ಗೆ 1000 ಅಡಿಗಳನ್ನು ಕ್ರಮಿಸಲಿದೆ‌. ಕಿ.ಮೀ ಲೆಕ್ಕದಲ್ಲಿ ಹೇಳುವುದಾದರೆ ಒಂದು ಗಂಟೆಗೆ 1235 ಕಿ.ಮೀ ಚಲಿಸಲಿದೆ.

ವೇಗವೊಂದೆ ಇದರ ವಿಶೇಷತೆಯಲ್ಲ ಇನ್ನೂ ಕೆಲವು ವಿಶೇಷತೆಗಳು ಈ ಐಶಾರಾಮಿ ವಿಮಾನದಲ್ಲಿದೆ‌. ವಿಮಾನದ ಒಳಗೆ ಒಂದು ಫೈವ್ ಸ್ಟಾರ್ ಹೋಟೆಲ್ ನಲ್ಲಿ ಇರಬಹುದಾದ ಎಲ್ಲ ಸೌಲಭ್ಯಗಳು ಇವೆ. ಖಾಸಗಿ ಮಲಗುವ ಕೋಣೆ, ಹೈ ಸ್ಪೀಡ್ ಇಂಟರ್ನೆಟ್, ಸಿಬ್ಬಂದಿಗೆ ವಿಶ್ರಾಂತಿ ಕೋಣೆ, ಪ್ರೈವೇಟ್ ಕಿಚನ್, ಡೈನಿಂಗ್ ಏರಿಯಾ, ಮೀಟಿಂಗ್ ರೂಂ, ಡೆಕ್ ಏರಿಯಾ, ಖಾಸಗಿ ಬಾರ್ ಗಳು ಇವೆ. ಇದೆಲ್ಲದರ ಜೊತೆಗೆ ಸುರಕ್ಷತೆಗೂ ಸಹ ಗಮನ ನೀಡಲಾಗಿದೆ. ಮಿಸೈಲ್ ಡಿಟೆಕ್ಟರ್ ಸೇರಿದಂತೆ ರಾಕೆಟ್ ಬಾಂಬ್ ದಾಳಿಯಿಂದ ತಪ್ಪಿಸಿಕೊಳ್ಳಲು ಬೇಕಾದ ಮೆಕಾನಿಸಂ ಈ ವಿಮಾನದಲ್ಲಿ ಇದೆ‌.

Richest cat: ಪ್ರಪಂಚದ ಅತ್ಯಂತ ಶ್ರೀಮಂತ ಬೆಕ್ಕಿದು, ನೂರಾರು ಕೋಟಿ ಆಸ್ತಿಯ ಒಡೆತಿಯಿದು

ಅಂದಹಾಗೆ ಜೆಫ್ ಬಳಿ ಇನ್ನೂ ಎರಡು ಖಾಸಗಿ ವಿಮಾನಗಳಿವೆ. ಈ ಹಿಂದೆ ಜೆಫ್ ಬೆಜೋಜ್ ಈಗ ಖರೀದಿಸಿರುವ ಗಲ್ಪ್ ಸ್ಟ್ರೀಂ ಬ್ರ್ಯಾಂಡ್ ನ ಜಿ650 ವಿಮಾನ ಖರೀದಿ ಮಾಡಿದ್ದರು. ಈಗ ಕೇವಲ ಒಂದು ತಿಂಗಳ ಹಿಂದಷ್ಟೆ ಈ ಅತ್ಯಾಧುನಿಕ ವಿಮಾನ ಖರೀದಿ ಮಾಡಿದ್ದಾರೆ. ಜಿ 650 ವಿಮಾನವನ್ನು ಜೆಫ್ ಬೆಜೋಜ್ ರ ಸಿಬ್ಬಂದಿ ಬಳಸುತ್ತಿದ್ದಾರೆ. ಜೆಫ್ ಬೆಜೋಜ್ ಸಂದರ್ಶನವೊಂದರಲ್ಲಿ ಹೇಳಿದ್ದಂತೆ ಅವರು ಸಮಯಕ್ಕೆ ಅತಿಹೆಚ್ಚು ಮೌಲ್ಯ ಕೊಡುತ್ತಾರಂತೆ ಹಾಗಾಗಿ ಸಮಯ ಉಳಿಸುವ ಯಾವುದೇ ವಸ್ತುಗಳ ಮೇಲಾಗಲಿ ಹೆಚ್ಚು ಖರ್ಚು ಮಾಡುತ್ತಾರಂತೆ.

Exit mobile version