Jio Finance
ರಿಲಯನ್ಸ್ ಜಿಯೋ ಮೊಬೈಲ್ ಮತ್ತು ಡಾಟಾ ಕ್ಷೇತ್ರದಲ್ಲಿ ಭಾರತದಲ್ಲಿ ಕ್ರಾಂತಿಯನ್ನೇ ಮಾಡಿದೆ. ಐಡಿಯಾ, ವೊಡಾಫೋನ್ ಇನ್ನಿತರೆ ನೆಟ್ ವರ್ಕಿಂಗ್ ಕಂಪೆನಿಗಳ ಬಾಗಿಲು ಹಾಕಿಸಿದ ಜಿಯೋ ಈಗ ಭಾರತದ ದೊಡ್ಡ ಮೊಬೈಲ್ ನೆಟ್ ವರ್ಕಿಂಗ್ ಸಂಸ್ಥೆಯಾಗಿದೆ. ಒಟಿಟಿಗೂ ಕಾಲಿಟ್ಟು ಅಲ್ಲಿಯೂ ಪ್ರಗತಿ ಸಾಧಿಸುತ್ತಿದೆ. ಇದರ ನಡುವೆ ಜಿಯೋ ಫೈನ್ಯಾನ್ಶಿಯಲ್ಸ್ ಪ್ರಾರಂಭವಾಗಿದ್ದು, ಇದು ಫೋನ್ ಪೆ, ಪೇಟಿಂಗಳಿಗೆ ಠಕ್ಕರ್ ಕೊಡಲಿದೆ. ಕೆಲವೇ ದಿನಗಳಲ್ಲಿ ಜಿಯೋ ಫೈನ್ಯಾನ್ಸ್ ನ ಅಪ್ಲಿಕೇಶನ್ ಗಳು ಲಾಂಚ್ ಆಗಿದ್ದು ಮತ್ತೊಂದು ಕ್ರಾಂತಿಗೆ ಸಜ್ಜಾಗಿವೆ.
ಜಿಯೋ ಫೈನ್ಯಾನ್ಶಿಯಲ್ ಸರ್ವೀಸಸ್ ಹೊಸ ಬ್ಯಾಂಕ್ ಸೇವೆಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಆದರೆ ಈ ಬ್ಯಾಂಕ್ ಗೆ ಯಾವುದೇ ಬ್ರ್ಯಾಂಚ್ ಇರುವುದಿಲ್ಲ, ಸಿಬ್ಬಂದಿಯೂ ಇರುವುದಿಲ್ಲ. ಒಂದು ಆಪ್ ಮೂಲಕ ಎಲ್ಲ ವ್ಯವಹಾರಗಳು ಸಹ ನಡೆಯಲಿವೆ. ಆಪ್ ಮೂಲಕವೇ ಹಣ ವರ್ಗಾವಣೆ, ಆಪ್ ಮೂಲಕವೇ ಸಾಲ ಸೌಲಭ್ಯ, ಆಪ್ ಮೂಲಕವೇ ಪೇಮೆಂಟ್ ಇನ್ನಿತರೆಗಳನ್ನು ಮಾಡಬಹುದಾಗಿದೆ.
ಜಿಯೋ ಫೈನ್ಯಾನ್ಸ್ ನ ಅಪ್ಲಿಕೇಶನ್ ಈಗಾಗಲೇ ಲಾಂಚ್ ಆಗಿದ್ದು 10 ಲಕ್ಷಕ್ಕೂ ಹೆಚ್ಚು ಡೌನ್ ಲೋಡ್ ಆಗಿದೆ. ಈ ಅಪ್ಲಿಕೇಶನ್ ನಲ್ಲಿ ಸಾಲ ಸೌಲಭ್ಯ, ಪೇಮೆಂಟ್ ಸೌಲಭ್ಯ, ಮ್ಯೂಚ್ಯುಲ್ ಫಂಡ್ ಹೂಡಿಕೆ ಇನ್ನೂ ಹಲವು ಸೌಲಭ್ಯಗಳು ಲಭ್ಯವಿವೆ. ಈ ಅಪ್ಲಿಕೇಶನ್ ಬಹಳ ಶಕ್ತಿಯುತವಾಗಿದ್ದು ಹಲವು ಆರ್ಥಿಕ ಸೇವೆಗಳನ್ನು ಒಳಗೊಂಡಿದೆ. ಈ ಹಿಂದೆ ರಿಲಯನ್ಸ್ ಜಿಯೋ ಹೇಗೆ ಟೆಲಿಕಾಂ ಸೇವೆಯಲ್ಲಿ ಕ್ರಾಂತಿ ಮಾಡಿ ದೊಡ್ಡ ಸಂಸ್ಥೆಗಳ ಬುಡ ಅಲ್ಲಾಡುವಂತೆ ಮಾಡಿತೋ ಹಾಗೆಯೇ ಈಗ ಈ ಅಪ್ಲಿಕೇಶನ್ ಚಾಲ್ತಿಯಲ್ಲಿರುವ ಫಿನ್ ಟೆಕ್ ಸಂಸ್ಥೆಗಳು ಬಾಗಿಲು ಹಾಕುವಂತೆ ಮಾಡುತ್ತದೆ ಎನ್ನಲಾಗುತ್ತಿದೆ.
DK Shivakumar: ಬೆಂಗಳೂರಿನ ರಸ್ತೆಗೆ ಸುರಿಯಲಿದ್ದಾರೆ 660 ಕೋಟಿ
ಕೆಲ ಸೇವೆಗಳನ್ನು ನೀಡಲು ಹಣಕಾಸು ಇಲಾಖೆಯ ಒಪ್ಪಿಗೆಗಾಗಿ ಕಾಯುತ್ತಿರುವ ಜಿಯೋ ಒಪ್ಪಿಗೆಗಳು ದೊರಕಿದ ಕೂಡಲೆ ಅಪ್ಲಿಕೇಶನ್ ನ ಪ್ರಚಾರ, ಪ್ರಸಾರವನ್ನು ತೀವ್ರ ಗತಿಯಲ್ಲಿ ಮಾಡಲಿದೆಯಂತೆ ಜಿಯೋ. ನೆಟ್ ವರ್ಕ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಮಾಡಿದ ಜಿಯೋ ಫೈನ್ಯಾನ್ಸ್ ಕ್ಷೇತ್ರದಲ್ಲಿ ಏನು ಕ್ರಾಂತಿ ಮಾಡಲಿದೆ ಕಾದು ನೋಡಬೇಕಿದೆ.