Mahindra Car
ಸ್ಟಾರ್ ನಟರ ಕಾರುಗಳು ಅವರಂತೆ ಬಲು ದುಬಾರಿ. ಲಕ್ಷಗಳಲ್ಲ ಕೋಟಿಗಳ ಬೆಲೆಯಲ್ಲೇ ಇರುತ್ತವೆ ಅವುಗಳ ಬೆಲೆ. ಕೋಟಿಗಳಿಗೆ ಕಡಿಮೆ ಇರುವ ಕಾರುಗಳನ್ನು ಸ್ಟಾರ್ ನಟ-ನಟಿಯರು ಕೊಳ್ಳುವುದೂ ಇಲ್ಲವೇನೋ. ಆದರೆ ಬಾಲಿವುಡ್ ನ ಸ್ಟಾರ್ ನಟ, ‘ಧೂಂ’ ಸಿನಿಮಾ ಖ್ಯಾತಿಯ ಜಾನ್ ಅಬ್ರಹಾಂ ತಮ್ಮ ವಾರಗೆಯ ಇತರೆ ನಟರಿಗಿಂತಲೂ ಬಹಳ ಭಿನ್ನ. ಸರಳತೆಯಿಂದ ಗಮನ ಸೆಳೆವ ಜಾನ್ ಅಬ್ರಹಾಂ ತಮಗಾಗಿ ಕಾರೊಂದನ್ನು ಇತ್ತೀಚೆಗೆ ಖರೀದಿ ಮಾಡಿದ್ದಾರೆ. ಮಧ್ಯಮ, ಬಡ ಮಧ್ಯಮ ವರ್ಗವದವರು ಸಹ ಈ ಕಾರು ಖರೀದಿ ಮಾಡಬಹುದು.
ಜಾನ್ ಅಬ್ರಹಾಂ ಖರೀದಿ ಮಾಡಿರುವುದು ಭಾರತದ ಹೆಮ್ಮೆಯ ಕಾರು ಕಂಪೆನಿ ಮಹಿಂದ್ರಾ ಸಂಸ್ಥೆಯ ಕಾರು. ಈ ಮಹಿಂದ್ರಾ ನಲ್ಲೂ ಸಹ ದುಬಾರಿಯಾದ XUV 700 ಅಥವಾ ಸ್ಕಾರ್ಪಿಯೋ ಖರೀದಿಸಿಲ್ಲ ಬದಲಾಗಿದೆ. ಇತ್ತೀಚೆಗೆ ಬಿಡುಗಡೆ ಆದ ಸಾಧಾರಣ ದರವುಳ್ಳಿ 3XO ಕಾರು ಖರೀದಿ ಮಾಡಿದ್ದಾರೆ ಕಾರಿನಲ್ಲಿರುವ ವಿಶೇಷತೆಯೇ ಜಾನ್ ಗೆ ಈ ಕಾರು ಖರೀದಿಗೆ ಪ್ರೇರಣೆ ಒದಗಿಸಿತಂತೆ.
ಅಂದಹಾಗೆ ಜಾನ್ ಅಬ್ರಹಾಂ ಈ ಕಾರು ಖರೀದಿ ಮಾಡಿರುವುದು ತಮಗಾಗಿ ಅಲ್ಲಬದಲಿಗೆ ತಮ್ಮ ತಂದೆಯವರಿಗಾಗಿ. ತಂದೆಯವರ ಹುಟ್ಟುಹಬ್ಬಕ್ಕೆಂದು ಜಾನ್, ಮಹೀಂದ್ರಾ 3ಎಕ್ಸ್ ಓ ಕಾರು ಖರೀದಿ ಮಾಡಿದ್ದಾರೆ. 1.2 ಲೀಟರ್ ಟರ್ಬೊ ಎಂಜಿನ್, ಟಾಪ್ ಎಂಡ್ ಮಾಡೆಲ್ ಕಾರನ್ನು ಜಾನ್ ಖರೀದಿ ಮಾಡಿದ್ದಾರೆ. ಅಂದಹಾಗೆ ಜಾನ್ ಖರೀದಿ ಮಾಡಿದ ನಗರದಲ್ಲಿ ಈ ಕಾರಿನ ಬೆಲೆ ಸುಮಾರು 15 ಲಕ್ಷ ರೂಪಾಯಿಗಳು.
Jawa Bikes: ರಾಯಲ್ ಎನ್’ಫೀಲ್ಡ್ ಗೆ ಠಕ್ಕರ್ ಕೊಟ್ಟ ಜಾವಾ, ಹೊಸ ಬೈಕ್ ಬಿಡುಗಡೆ
ಮಹೀಂದ್ರ 3XO ಕಾರು ಗುಣಮಟ್ಟದಿಂದ ಕೂಡಿದ್ದು ಕಡಿಮೆ ಬೆಲೆಗೆ ಹಲವು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸುರಕ್ಷತೆ ಆಯ್ಕೆಗಳನ್ನು ಸಹ ನೀಡುತ್ತದೆ. ಈ ಕಾರಿನ ಪ್ರಾರಂಭಿಕ ಬೆಲೆ ಕೆಲವು ನಗರಗಳಲ್ಲಿ ಕೇವಲ 7 ಲಕ್ಷ ರೂಪಾಯಿ ಇದ್ದು, ಟಾಪ್ ಎಂಡ್ ಬೆಲೆ 15 ಲಕ್ಷ ರೂಪಾಯಿಗಳಿದೆ. ಕರ್ನಾಟಕದಲ್ಲಿ ಈ ಕಾರಿನ ಪೆಟ್ರೋಲ್ ವೇರಿಯೆಂಟ್ ಟಾಪ್ ಮಾಡೆಲ್ 19.37 ಲಕ್ಷ ಇದ್ದರೆ, ಅದೇ ಪೆಟ್ರೋಲ್ ನ ಸ್ಟಾರ್ಟಿಂಗ್ ವೇರಿಯೆಂಟ್ 9 ಲಕ್ಷ ರೂಪಾಯಿಗಳಿಗೆ ಲಭ್ಯವಿದೆ.