Dr. Bro: ತಮ್ಮ ತಿಂಗಳ ಆದಾಯ ಬಹಿರಂಗಪಡಿಸಿದ ಖ್ಯಾತ ಯೂಟ್ಯೂಬರ್ ‘ಡಾ ಬ್ರೋ’

0
156
Dr. Bro

Dr. Bro

ಕನ್ನಡದಲ್ಲಿ ಹಲವಾರು ಮಂದಿ ಯೂಟ್ಯೂಬರ್ ಗಳಿದ್ದಾರೆ. ಆದರೆ ಅವರೆಲೆಲ್ಲರಲ್ಲಿ ಬಹಳ ಜನಪ್ರಿಯ ಮತ್ತು ಸಾಹಸಮಯಿ ಯೂಟ್ಯೂಬರ್ ಎಂದರೆ ಅದು ‘ಡಾ ಬ್ರೋ’ ಮಾತ್ರವೆ. ಬಹುತೇಕ ಯೂಟ್ಯೂಬರ್​ಗಳು ಸಬ್​ಸ್ಕ್ರೈಬರ್ ಗಳನ್ನು ಹೆಚ್ಚು ಮಾಡಿಕೊಳ್ಳಲು, ಲೈಕ್ಸ್, ವೀವ್ಸ್ ಹೆಚ್ಚು ಮಾಡಿಕೊಳ್ಳಲು ಸೆಲೆಬ್ರಿಟಿ ಸಂದರ್ಶನ, ಪೇಯ್ಡ್ ಪ್ರೊಮೋಷನ್ಸ್ ಇನ್ನಿತರೆಗಳನ್ನು ಮಾಡುತ್ತಾರೆ. ಆದರೆ ‘ಡಾ ಬ್ರೋ’ ರೀತಿಯೇ ಭಿನ್ನ. ಬ್ರೋಗೆ ಇರುವ ಏಕೈಕ ಗುರಿಯೆಂದರೆ ತನ್ನ ವೀಕ್ಷಕರಿಗೆ ಹೊಸದನ್ನು ತೋರಿಸುವ ತುಡಿತವಷ್ಟೆ. ಇದೇ ಕಾರಣಕ್ಕೆ ಈತನನ್ನು ಕರ್ನಾಟಕದ ಅತ್ಯಂತ ಜನಪ್ರಿಯ ಯೂಟ್ಯೂಬರ್ ಅನ್ನಾಗಿಸಿದೆ. ಡಾ ಬ್ರೋರ ಯೂಟ್ಯೂಬ್ ಕಂಟೆಂಟ್ ನೋಡುವ ಜೊತೆಗೆ ಈ ಯೂಟ್ಯೂಬರ್ ತಿಂಗಳಿಗೆ ಎಷ್ಟು ಆದಾಯ ಗಳಿಸುತ್ತಾರೆ ಎಂಬ ಕುತೂಹಲವೂ ಹಲವರಿಗಿತ್ತು. ಇದೀಗ ಸ್ವತಃ ಡಾ ಬ್ರೋ ಇದಕ್ಕೆ ಉತ್ತರ ಕೊಟ್ಟಿದ್ದಾರೆ.

‘ಡಾ ಬ್ರೋ’, ನಿನ್ನೆಯಷ್ಟೆ ಯೂಟ್ಯೂಬ್​ನಲ್ಲಿ ಲೈವ್ ಸ್ಟ್ರೀಂ ಒಂದನ್ನು ಮಾಡಿದ್ದರು. ಈ ವೇಳೆ ತಮ್ಮ ಸಬ್​ಸ್ಕ್ರೈಬರ್ ಗಳು, ವೀಕ್ಷಕರು ಕೇಳುವ ಪ್ರಶ್ನೆಗೆ ಸಹ ಉತ್ತರ ನೀಡಿದರು. ಈ ವೇಳೆ ಒಬ್ಬಾತ ನಿಮ್ಮ ತಿಂಗಳ ಆದಾಯ ಎಷ್ಟು? ಯೂಟ್ಯೂಬ್​ನಿಂದ ಎಷ್ಟು ಗಳಿಕೆ ಮಾಡುತ್ತೀರಿ? ಎಂದು ಪ್ರಶ್ನಿಸಿದ. ‘ನಾನು ಸಂಪಾದಿಸುತ್ತಿರುವುದೇ ಜನರಿಂದ, ಹಾಗಿದ್ದ ಮೇಲೆ ಅವರಿಂದ ಹೇಗೆ ನನ್ನ ಆದಾಯ ಮುಚ್ಚಿಡಲಿ’ ಎಂದು ಹೇಳಿ ತಮ್ಮ ತಿಂಗಳ ಆದಾಯ ಎಷ್ಟೆಂಬುದನ್ನು ಲೈವ್​ನಲ್ಲಿ ಸಾಕ್ಷಿ ಸಮೇತ ತೋರಿಸಿದರು.

ಯೂಟ್ಯೂಬ್ ವಿಡಿಯೋಗಳ ಮೂಲಕ ‘ಡಾ ಬ್ರೋ’ ತಿಂಗಳಿಗೆ 2100 ಕ್ಕೂ ಹೆಚ್ಚು ಡಾಲರ್ ಗಳಿಸಿದ್ದಾರೆ ಕಳೆದ ತಿಂಗಳು (ಕಳೆದ 28 ದಿನದಲ್ಲಿ) 2100 ಡಾಲರ್ ಎಂದರೆ ಈಗಿನ ಮೌಲ್ಯದ ಪ್ರಕಾರ ಭಾರತದಲ್ಲಿ 1.76 ಲಕ್ಷ ರೂಪಾಯಿಗಳು. ಇದು ಬಹಳ ಒಳ್ಳೆಯ ಮೊತ್ತ. ಅಸಲಿಗೆ ‘ಡಾ ಬ್ರೋ’ ಅವರ ಇತ್ತೀಚೆಗಿನ ಕೆಲ ವಿಡಿಯೋಗಳು ಅಷ್ಟಾಗಿ ವೈರಲ್ ಆಗಿಲ್ಲ. ಹೆಚ್ಚು ವೈರಲ್ ಆಗದೆ 1.76 ಲಕ್ಷ ರೂಪಾಯಿ ಕಮಾಯಿ ಮಾಡಿದ್ದಾರೆ. ಅದೇ ಒಂದೊಮ್ಮೆ ತಿಂಗಳಿಗೆ ಒಂದು ವಿಡಿಯೋ ವೈರಲ್ ಆದರೂ ಸಹ ತಿಂಗಳಿಗೆ 4-5 ಲಕ್ಷ ಆದಾಯವೂ ಬರುವುದು ಖಾತ್ರಿ.

Quick Delivery: 12 ನಿಮಿಷದಲ್ಲಿ ಲ್ಯಾಪ್ ಟಾಪ್ ಡೆಲಿವರಿ, ಆಂಬುಲೆನ್ಸ್ ಬರಲು ತೆಗೆದುಕೊಳ್ಳುವ ಸಮಯವೆಷ್ಟು?

ಟ್ರಾವೆಲ್ ವ್ಲಾಗ್​ಗಳನ್ನು ಮಾಡುವ ‘ಡಾ ಬ್ರೋ’ ಈವರೆಗೆ ಹಲವಾರು ದೇಶಗಳನ್ನು ಸುತ್ತಿ ಬಂದಿದ್ದಾರೆ. ಅತ್ಯಂತ ಅಪಾಯಕಾರಿಯಾದ ಅಪ್ಘನಿಸ್ತಾನ, ಸೊಮಾಲಿಯಾ ಸೇರಿದಂತೆ ಹಲವು ರಿಮೋಟ್ ದ್ವೀಪಗಳು, ಅಪರಾಧ ಪ್ರಕ್ರಿಯೆ ಹೆಚ್ಚಿರುವ ದೇಶಗಳಿಗೂ ಸಹ ‘ಡಾ ಬ್ರೋ’ ಹೋಗಿ ಬಂದಿದ್ದಾರೆ. ಚೀನಾಕ್ಕೂ ಸಹ ‘ಡಾ ಬ್ರೋ’ ಹೋಗಿ ಬಂದಿದ್ದಾರೆ. ಇದೀಗ ‘ಡಾ ಬ್ರೋ’ ‘ಗೋ ಪ್ರವಾಸ’ ಹೆಸರಿನ ಟೂರಿಸ್ಟ್ ಸಂಸ್ಥೆಯೊಂದಿಗೆ ಕೈಜೋಡಿಸಿದ್ದು, ಉದ್ಯಮಿ ಸಹ ಆಗಿದ್ದಾರೆ. ಅತ್ಯಂತ ಕಡಿಮೆ ಬೆಲೆಗೆ ಜನರನ್ನು ವಿದೇಶ ಪ್ರವಾಸ ಮಾಡಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here