karnataka: ಕರ್ನಾಟಕದಲ್ಲಿ ಕೇವಲ 24 ಗಂಟೆಯಲ್ಲಿ 51 ಜನರ ಸಾವು

0
150
karnataka

karnataka

ಆತಂಕ ಮೂಡಿಸುವ ಅಂಕಿ-ಅಂಶವನ್ನು ಎಡಿಜಿಪಿ ಅಲೋಕ್‌ ಕುಮಾರ್‌ ಮುಂದಿಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ ಕರ್ನಾಟಕ ರಾಜ್ಯದಲ್ಲಿ 51 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲೂ ಕೇವಲ 6 ಗಂಟೆಯ ಅವಧಿಯಲ್ಲಿ 46 ಮಂದಿ ನಿಧನ ಹೊಂದಿದ್ದಾರೆ. ಇಷ್ಟು ಮಂದಿ ನಿಧನ ಹೊಂದಿರುವುದು ರಸ್ತೆ ಅಪಘಾತದಿಂದ. ರಾಜ್ಯದಲ್ಲಿ ದಿನೇ-ದಿನೇ ರಸ್ತೆ ಅಪಘಾತಗಳು ಹೆಚ್ಚಾಗುತ್ತಲೇ ಇವೆ. ರಸ್ತೆ ಸುರಕ್ಷೆ ಎಂಬುದು ಮರೀಚಿಕೆಯಾಗುತ್ತಿದೆ. ಕಳೆದ ಒಂದು ದಿನದಲ್ಲೇ 51 ಮಂದಿ ನಿಧನ ಹೊಂದಿರುವುದು ರಾಜ್ಯ ರಸ್ತೆ ಸುರಕ್ಷೆ ವಿಭಾಗಕ್ಕೆ ಆತಂಕ ಮೂಡಿಸಿದೆ.

ಹಾಸನದಲ್ಲಿ ನಡೆದ ಅಪಘಾತದಲ್ಲಿ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 6 ಮಂದಿ ಭಾನುವಾರ ನಿಧನ ಹೊಂದಿದ್ದಾರೆ. ಅದು ಮಾತ್ರವೇ ಅಲ್ಲದೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆದ ಹಲವು ಅಪಘಾತಗಳಲ್ಲಿ ಒಟ್ಟು 51 ಮಂದಿ ನಿಧನ ಹೊಂದಿದ್ದಾರೆ. ಬಹುತೇಕ ಅಪಘಾತಗಳಿಗೆ ಅಜಾಗರೂಕತೆ, ಅತಿಯಾದ ವೇಗವೇ ಕಾರಣ ಎಂದು ಸಂಚಾರಿ ಪೊಲೀಸ್‌ ಇಲಾಖೆ ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿದ್ದಾರೆ.

ಕರ್ನಾಟಕದಲ್ಲಿ ಪ್ರತಿದಿನವೂ 30 ಕ್ಕೂ ಹೆಚ್ಚು ಮಂದಿ ರಸ್ತೆ ಅಪಘಾತದಲ್ಲಿ ನಿಧನ ಹೊಂದುತ್ತಲೇ ಇರುತ್ತಾರೆ. 2023 ರಲ್ಲಿ ಪ್ರತಿದಿನ 34 ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 2024 ರಲ್ಲಿ ಈ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ. ಅದರಲ್ಲೂ ಹೈವೆಗಳಲ್ಲಿಯೇ ಈ ಅಪಘಾತಗಳು ಹೆಚ್ಚಾಗುತ್ತಿವೆ. ಹೈವೆಗಳಲ್ಲಿ ಹೆಚ್ಚು ಜಾಗರೂಕವಾಗಿ ವಾಹನ ಚಲಾಯಿಸುವಂತೆ ಸಂಚಾರಿ ಪೊಲೀಸರು ಎಚ್ಚರಿಕೆ ನೀಡುತ್ತಲೇ ಇದ್ದಾರೆ.

ಸೊಳ್ಳೆಗಳ ಬಗ್ಗೆ ಈ ಅಪರೂಪದ ಮಾಹಿತಿ ನಿಮಗೆ ಗೊತ್ತೆ?

ಬೆಂಗಳೂರು ಮೈಸೂರು, ಬೆಂಗಳೂರು ಚಿತ್ರದುರ್ಗ ಇಂಥಹಾ ಪ್ರಮುಖ ಹೈವೆಗಳಲ್ಲಿಯೇ ಅಪಘಾತಗಳು ಹೆಚ್ಚಾಗಿ ನಡೆಯುತ್ತಿವೆ. ಹೈವೇಗಳ ಅವೈಜ್ಙಾನಿಕ ನಿರ್ಮಾಣವೂ ಸಹ ಅಪಘಾತಕ್ಕೆ ಕಾರಣವಾಗಿದೆ. ಮೈಸೂರು-ಬೆಂಗಳೂರು ಹೈವೆ ಸಹ ಅವೈಜ್ಙಾನಿಕವಾಗಿದೆ ಎಂದು ವರದಿಯಾಗಿತ್ತು. ಹಾಗಾಗಿ ಅಲ್ಲಿ ವೇಗದ ಮಿತಿಯನ್ನು ವಿಧಿಸಲಾಗಿದೆ.

LEAVE A REPLY

Please enter your comment!
Please enter your name here