Bengaluru Airport
ಬೆಂಗಳೂರಿನಲ್ಲಿ ಈಗಾಗಲೇ ಒಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ದೇವನಹಳ್ಳಿ ಬಳಿ ಇರುವ ಈ ವಿಮಾನ ನಿಲ್ದಾಣ ಈಗಾಗಲೇ ತನ್ನ ಪೂರ್ಣ ಸಾಮರ್ಥ್ಯದಿಂದ ಕೆಲಸಮಾಡುತ್ತಿದೆ. ಆದರೆ ಗ್ರಾಹಕರಿಗೆ ಪರಿಪೂರ್ಣ ಸೇವೆ ಒದಗಿಸಲು ಈ ವಿಮಾನ ನಿಲ್ದಾಣ ಸಾಕಾಗುತ್ತಿಲ್ಲವೆಂದು ಈಗ ಬೆಂಗಳೂರಿನಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಎರಡನೇ ವಿಮಾನ ನಿಲ್ದಾಣದ ಅವಶ್ಯಕತೆ ಹೆಚ್ಚಾಗಿದೆ ಎಂದು ಕೈಗಾರಿಕಾ ಮಂತ್ರಿ ಎಂಬಿ ಪಾಟೀಲ್ ಹೇಳಿದ್ದು ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬೆಂಗಳೂರಿನ ಸುತ್ತ-ಮುತ್ತ ಆರು ಸ್ಥಳಗಳನ್ನು ಗುರುತಿಸಲಾಗಿದೆ.
ಬೆಂಗಳೂರಿಗೆ ಹತ್ತಿರದಲ್ಲಿಯೇ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಚಿಂತನೆಯಲ್ಲಿ ರಾಜ್ಯ ಸರ್ಕಾರ ಇದೆ. ಈಗ ಅಂತಿಮವಾಗಿ ಆರು ಸ್ಥಳಗಳನ್ನು ಗುರುತಿಸಿದ್ದು ಇವುಗಳಲ್ಲಿ ಒಂದು ಸ್ಥಳದಲ್ಲಿ ವಿಮಾನನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ. ತುನಕೂರು ರಸ್ತೆ, ಮೈಸೂರು ರಸ್ತೆ, ಕುಣಿಗಲ್ ರಸ್ತೆ, ಕನಕಪುರ ರಸ್ತೆ, ದೊಡ್ಡಬಳ್ಳಾಪುರ ಮತ್ತು ದಾಬಸ್ ಪೇಟೆ ಈ ಆರು ಸ್ಥಳಗಳನ್ನು ಗುರುತಿಸಲಾಗಿದ್ದು ಇವುಗಳಲ್ಲಿ ಯಾವುದಾದರೂ ಒಂದು ಸ್ಥಳದಲ್ಲಿ ವಿಮಾನ ನಿಲ್ದಾಣ ಮಾಡಲಾಗುತ್ತದೆಯಂತೆ.
ವಿಧಾನಸಭಾ ಕಲಾಪದಲ್ಲಿಯೂ ಈ ಬಗ್ಗೆ ಮಾತನಾಡಿರುವ ಎಂಬಿ ಪಾಟೀಲ್, ‘ಬೆಂಗಳೂರಿನ 60 ಕಿ.ಮೀ ವ್ಯಾಪ್ತಿಯಲ್ಲಿಯೇ ಎರಡನೇ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗುವುದು. 100 ಕಿ.ಮೀ ವ್ಯಾಪ್ತಿಯಲ್ಲಿ ನಿರ್ಮಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದಿದ್ದಾರೆ. BIAL ಹಾಗೂ ಸರ್ಕಾರದ ನಡುವೆ ಒಪ್ಪಂದ ಆಗಿದ್ದು, 2033 ಕ್ಕೆ ಮುಂಚೆ ಈಗಿರುವ ಏರ್ಪ್ ಪೋರ್ಟ್ ನಿಂದ 150 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ವಿಮಾನನಿಲ್ದಾಣ ನಿರ್ಮಾಣ ಮಡುವಂತಿಲ್ಲ. ಆದರೆ ನಾವು ಈಗಿನಿಂದಲೇ ಜಮೀನು ವಶ ಪಡಿಸಿಕೊಳ್ಳುವ ಕಾರ್ಯ ಪ್ರಾರಂಭ ಮಾಡಲಿದ್ದೇವೆ. ಈ ಬಗ್ಗೆ ಈಗಾಗಲೇ ತಜ್ಞರ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದಿದ್ದಾರೆ.