Site icon Samastha News

Karnataka High Court: ಪವರ್ ಟಿವಿ ಪ್ರಸಾರ ಸ್ಥಗಿತಕ್ಕೆ ಹೈಕೋರ್ಟ್ ಆದೇಶ, ಕಾರಣವೇನು?

Karnataka High Court

Karnataka High Court

ರಾಜ್ಯದ ಜನಪ್ರಿಯ ಸುದ್ದಿ ವಾಹಿನಿಗಳಲ್ಲಿ ಒಂದಾದ ಪವರ್ ಟಿವಿ ಪ್ರಸಾರವನ್ನು ಕೂಡಲೇ ಸ್ಥಗಿತಗೊಳಿಸುವಂತೆ ಕರ್ನಾಟಕ ರಾಜ್ಯ ಹೈಕೋರ್ಟ್ ಆದೇಶ ಮಾಡಿದೆ. ಕೇಂದ್ರ ವಲಯದ ಐಜಿ ರವಿಕಾಂತೇಗೌಡ ಮತ್ತು ವಿಧಾನಪರಿಷತ್ ಮಾಜಿ ಸದಸ್ಯ ಎಚ್ ಎಂ ರಮೇಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಸದರಿ ಆದೇಶ ಪ್ರಕಟಿಸಿದೆ.

ಪವರ್ ಟಿವಿಯು 1995ರ ಕೇಬಲ್ ನೆಟ್ ವರ್ಕ್ಸ್ ಮತ್ತು ಟೆಲಿವಿಷನ್ ಕಾಯ್ದೆಯನ್ನು ಉಲ್ಲಂಘಿಸಿದೆ ಎನ್ನಲಾಗಿದ್ದು, ಕಳೆದ ಮೂರು ವರ್ಷಗಳಿಂದಲೂ ತನ್ನ ಪರವಾನಗಿಯನ್ನೂ ನವೀಕರಿಸದ ಕಾರಣ ಜುಲೈ 8 ರವರೆಗೆ ಪವರ್ ಟಿವಿ ತನ್ನ ಪ್ರಸಾರ ನಿಲ್ಲಿಸಬೇಕು ಎಂದು ಪವರ್ ಟಿವಿಯ ಮಾತೃ ಸಂಸ್ಥೆಯಾದ ಮೆಸರ್ಸ್ ಪವರ್ ಸ್ಮಾರ್ಟ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ಹೆಚ್ಚುವರಿ ನಿರ್ದೇಶಕ ರಾಕೇಶ್ ಸಂಜೀವ ಶೆಟ್ಟಿಗೆ ಆದೇಶ ನೀಡಲಾಗಿದೆ.

https://samasthanews.com/karnataka-government-to-cut-price-of-alcohol-in-state/

ಪವರ್ ಟಿವಿ ಕಳೆದ ಕೆಲ ವರ್ಷದಿಂದ ಸಖತ್ ಸುದ್ದು ಮಾಡುತ್ತಿದೆ. ಬಹುತೇಕ ಮಾಧ್ಯಮಗಳು ಬಿಜೆಪಿ ಪರ ನಿಲವು ಹೊಂದಿದ್ದರೆ ಪವರ್ ಟಿವಿ‌ ತನ್ನ ಬಿಜೆಪಿ ವಿರೋಧಿ ನೀತಿಯಿಂದ ಗಮನ ಸೆಳೆದಿತ್ತು. ಈ ಹಿಂದೆ ಬಿಎಸ್ ವೈ ಪುತ್ರ ವಿಜಯೇಂದ್ರ ಕುರಿತು ಸುದ್ದಿ ಪ್ರಕಟಿಸಿದ್ದಕ್ಕೆ ಪೊಲೀಸರು ಪವರ್ ಟಿವಿ‌ ಮೇಲೆ ದಾಳಿ ಮಾಡಿ ಸುದ್ದಿ ಪ್ರಸಾರಕ್ಕೆ ಅವಶ್ಯಕವಾಗಿದ್ದ ಕೆಲವು ಯಂತ್ರಗಳನ್ನು ಹೊತ್ತೊಯ್ದಿದ್ದರು.

ಕೆಲವು ದಿನಗಳ ಹಿಂದೆ ಸಹಿತ, ಪವರ್ ಟಿವಿಯು ಮಾಜಿ ಪ್ರಧಾನಿ ದೇವೇಗೌಡ, ಎಚ್ ಡಿ ಕುಮಾರಸ್ವಾಮಿ ಕುರಿತಾಗಿ ತುಚ್ಛ ಪದಗಳನ್ನು ಬಳಸಿ ಮಾತನಾಡಿದ್ದಾರೆಂದು ಆರೋಪಿಸಿ ಜೆಡಿಎಸ್ ಸದಸ್ಯರು ದೂರು ನೀಡಿದ್ದರು.

Exit mobile version