Site icon Samastha News

Lokayukta: ಕರ್ನಾಟಕದ 11 ಸರ್ಕಾರಿ‌ ನೌಕರರಿಂದ 451 ಕೋಟಿ ಅಕ್ರಮ ಆಸ್ತಿ ವಶಪಡಿಸಿಕೊಂಡ ಲೋಕಾಯುಕ್ತ!

Lokayukta

Karnataka Lokayukta

Lokayukta

ಸರ್ಕಾರಿ ಕಚೇರಿಗಳಲ್ಲಿ ಲಂಚ ನಡೆಯುತ್ತದೆ ಎಂಬುದು ಚಿಕ್ಕ ಹುಡುಗನಿಗೂ ತಿಳಿದಿರುವ ವಿಷಯ ಆದರೆ ಯಾವ ಮಟ್ಟಿಗೆ ಲಂಚಗುಳಿ ಅಧಿಕಾರಿಗಳು ದೋಚುತ್ತಿದ್ದಾರೆ ಎಂಬುದು ಸಾಮಾನ್ಯ ವ್ಯಕ್ತಿಯ ಊಹೆಗೂ ನಿಲುಕುವುದಿಲ್ಲ. ಲೋಕಾಯುಕ್ತ ಅಧಿಕಾರಿಗಳು ಇತ್ತೀಚೆಗೆ ರಾಜ್ಯ ಸರ್ಕಾರದ‌ ವಿವಿಧ ಇಲಾಖೆಯ, ವಿವಿಧ ವಿಭಾಗಗಲ್ಲಿ ಕೆಲಸ ಮಾಡುವ 11 ಆಧಿಕಾರಿಗಳ ಮೇಲೆ ದಾಳಿ ಮಾಡಿದ್ದು, ಈ 11 ಅಧಿಕಾರಿಗಳಿಂದ ಬರೋಬ್ಬರಿ 451 ಕೋಟಿ ರೂಪಾಯಿ ಹಣ, ಚಿನ್ನ ಆಸ್ತಿ ವಶಪಡಿಸಿಕೊಂಡಿದೆ.

ಬಿಬಿಎಂಪಿಯ ಕಂದಾಯ ಅಧಿಕಾರಿ ಬಸವರಾಜ ಮಾಗೆ ಇಂದ 3.30 ಕೋಟಿ. ವಿದ್ಯುತ್ ಪ್ರಸರಣ ಇಲಾಖೆ ಎಂಜಿನಿಯರ್ (ಬೆಳಗಾವಿ) ಮಹದೇವ್ ಬನ್ನೂರು ಇಂದ 9.7 ಕೋಟಿ, ಬೆಳಗಾವಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶೇಖರ್ ಗೌಡ ಇಂದ 78 ಕೋಟಿ, ಪಿಡಬ್ಲುಡಿ ಇಲಾಖೆಯ ನಿವೃತ್ತ ಎಂಜಿನಿಯರ್ ಎಂ ರವೀಂದ್ರ ಇಂದ 57 ಕೋಟಿ, ಪಿಡಬ್ಲುಡಿ ಇಲಾಖೆಯ ಮುಖ್ಯ ಎಂಜಿನಿಯರ್ ಕೆಜಿ‌ ಜಗದೀಶ್ ಇಂದ 52 ಕೋಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿವೃತ್ತ ಎಂಜಿನಿಯರ್ ಎಸ್ ಶಿವರಾಜು ಇಂದ 50 ಕೋಟಿ, ರಾಮನಗರ, ಹಾರೋಹಳ್ಳಿ ತಾಲ್ಲೂಕು ತಹಶೀಲ್ದಾರ್ ಇಂದ 24 ಕೋಟಿ, ಮೈಸೂರಿನ ಕಬಿನಿ-ವರುಣಾ ನಾಲ ಎಂಜಿನಿಯರ್ ಮಹೇಶ್ ಇಂದ 37 ಕೋಟಿ, ಬೆಂಗಳೂರು ದಾಸನಪುರ ಗ್ರಾಮ ಪಂಚಾಯಿತಿ ಗ್ರೇಡ್ 1 ಕಾರ್ಯದರ್ಶಿ ಎನ್ ಎಂ ಜಗದೀಶ್ ಇಂದ 32 ಕೋಟಿ ಒಟ್ಟು 451 ಕೋಟಿ ರೂಪಾಯಿಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಬೆಂಗಳೂರು: ಊಟ ಡಿಲೆವರಿ ಕಾರಣಕ್ಕೆ 60 ಸಾವಿರ ದಂಡ ಕಟ್ಟಲಿರುವ ಜೊಮ್ಯಾಟೊ

ಈ ದಾಳಿಯ ವೇಳೆ ಒಬ್ಬ ಸರ್ಕಾರಿ ಅಧಿಕಾರಿ ಮನೆಯಿಂದ ಕಸಿನೋದ 500 ಕ್ಕೂ ಹಣದ ಕಾಯಿನ್ ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಲೋಲಾಯುಕ್ತ ಹೇಳಿದೆ. ಎಲ್ಲ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯಲಿದೆ.

ಕೇವಲ ಎರಡು-ಮೂರು ಇಲಾಖೆಯ 11 ನೌಕರರಿಂದಲೇ 451 ಕೋಟಿ ವಶಪಡಿಸಿಕೊಳ್ಳಲಾಗಿದೆ ಎಂದಾದರೆ, ಅಬಕಾರಿ, ಪೊಲೀಸ್, ನೊಂದಣಿ ಇಲಾಖೆ, ಕಂದಾಯ ಇಲಾಖೆ, ಬಿಡಿಎ, ಜೈಲಧಿಕಾರಿಗಳು ಇನ್ನೂ ಹಲವು ಚಿನ್ನದ ಮೊಟ್ಟೆ ಇಡುವ ಇಲಾಖೆಗಳಿದ್ದು, ಅಲ್ಲೆಲ್ಲ ಸಾವಿರಾರು ಮಂದಿ ಅಧಿಕಾರಿಗಳು, ನೌಕರರು ಕೆಲಸ ಮಾಡುತ್ತಿದ್ದಾರೆ ಅವರಲ್ಲಿ ಎಷ್ಟು ಮಂದಿ ಲಂಚ ಗುಳಿಗಳು ಇರಬಹುದು, ಅವರ ಆಸ್ತಿಗಳು ಎಷ್ಟಿರಬಹುದು? ಲಕ್ಷ ಕೋಟಿಗೂ ಹೆಚ್ಚು? ಇವರ ಮೇಲೆಲ್ಲ ದಾಳಿ ಯಾವಾಗ?

Exit mobile version