Karnataka Police
ಸಮಾಜದ ಗೌರವಾನ್ವಿತ ಹುದ್ದೆಗಳಲ್ಲಿ ಶಿಕ್ಷಕರ ಹುದ್ದೆ ಪ್ರಮುಖದ್ದು. ಆದರೆ ಕೆಲ ಶಿಕ್ಷಕರು ತಮ್ಮ ವೃತ್ತಿಯ ಘನತೆ ತೆಗೆದಿದ್ದಿದೆ. ಇದೀಗ ಕರ್ನಾಟಕ ಪೊಲೀಸರು ಮಾಜಿ ಶಿಕ್ಷಕನೊಬ್ಬನ ಬಂಧಿಸಿದ್ದು, ನಿವೃತ್ತಿಯ ಬಳಿಕ ಈ ಶಿಕ್ಷಕ ಮೋಸ ಮಾಡುವ ಉದ್ಯಮ ನಡೆಸುತ್ತಿದ್ದ! ಅಂದರೆ ಜನರಿಗೆ ಮೋಸ ಮಾಡುವುದೇ ಕಾಯಕ ಮಾಡಿಕೊಂಡಿದ್ದ ಹೀಗೆ ಮೋಸ ಮಾಡಿ ಕೋಟ್ಯಂತರ ರೂಪಾಯಿ ಹಣ ಒಟ್ಟುಗೂಡಿಸಿದ್ದ ಆಸಾಮಿ.
ಕರ್ನಾಟಕದ ವೈದ್ಯರೊಬ್ಬರಿಗೆ ಇತ್ತೀಚೆಗೆ 1.2 ಕೋಟಿ ರೂಪಾಯಿ ಹಣ ಆನ್’ಲೈನ್ ನಲ್ಲಿ ವಂಚನೆ ಮಾಡಲಾಗಿತ್ತು. ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಹೋಗಿ ತಲುಪಿದ್ದು ಅಸ್ಸಾಮಿಗೆ. ಅಲ್ಲಿನ ಒಬ್ಬ ನಿವೃತ್ತ ಶಿಕ್ಷಕ ಹಾಗೂ ಬಿ.ಟೆಕ್ ಪದವೀಧರ ಸೇರಿಕೊಂಡು ಹೀಗೆ ನೂರಾರು ಜನರಿಗೆ ಮೋಸ ಮಾಡಿದ್ದಾರೆ. ಹೀಗೆ ಮೋಸ ಮಾಡಿಕೊಂಡೆ ಸುಮಾರು 10 ಕೋಟಿಗೂ ಹೆಚ್ಚು ಹಣ ವಸೂಲಿ ಮಾಡಿದ್ದರು. ಈಗ ಆ ನಿವೃತ್ತ ಶಿಕ್ಷಕ ಹಾಗೂ ಬಿ.ಟೆಕ್ ಪದವೀಧರ ಇಬ್ಬರೂ ಪೊಲೀಸರ ವಶದಲ್ಲಿದ್ದಾರೆ.
ನಿವೃತ್ತ ಶಿಕ್ಷಕ ಪವನ್ ಕುಮಾರ್ (63), ಹಾಗೂ ಝಾಕೀರ್ ಬೋರಾ (33) ಅನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದು, ನಿವೃತ್ತ ಶಿಕ್ಷಕ ಪವನ್ ಕುಮಾರ್ ಅವರ ಖಾತೆಯಲ್ಲಿದ್ದ ಕೋಟ್ಯಂತರ ರೂಪಾಯಿ ಹಣವನ್ನು ಸೀಜ್ ಮಾಡಿದ್ದಾರೆ. ಮಾತ್ರವಲ್ಲದೆ 90 ಕ್ಕೂ ಹೆಚ್ಚು ಆನ್ ಲೈಬ್ ಫ್ರಾಡ್ ಕೆಲಸಗಳಿಗೆ ಪವನ್ ಕುಮಾರ್ ಖಾತೆಯನ್ನು ಬಳಸಲಾಗಿತ್ತು ಎಂಬುದು ಇದೀಗ ಪತ್ತೆಯಾಗಿದೆ.
ಚಿತ್ರದುರ್ಗದ ವೈದ್ಯ ಶ್ರೀನಿವಾಸ ಶೆಟ್ಟಿ, ತಮಗೆ ಆನ್’ಲೈನ್ ನಲ್ಲಿ 1.23 ಕೋಟಿ ವಂಚನೆ ಆಗಿರುವುದಾಗಿ ದೂರು ನೀಡಿದ್ದರು. ಆಗಸ್ಟ್ ತಿಂಗಳಲ್ಲಿ ಕರೆಯೊಂದನ್ನು ಸ್ವೀಕರಿಸಿದ್ದರು ಶ್ರೀನಿವಾಸ ಶೆಟ್ಟಿ. ಕರೆ ಮಾಡಿದ ವ್ಯಕ್ತಿ, ತಾವು ಮುಂಬೈ ಪೊಲೀಸ್ ಆಗಿದ್ದು, ನಿಮ್ಮ ಬ್ಯಾಂಕ್ ಖಾತೆಯನ್ನು ಮನಿ ಲಾಂಡರಿಂಗ್ ಗೆ ಬಳಸಲಾಗಿದೆ. ಅದರ ತನಿಖೆ ಮಾಡಬೇಕಿದೆ ಎಂದು ಹೇಳಿ ಸುಮಾರು 24 ಗಂಟೆಗಳ ಕಾಲ ಹಲವು ಬಾರಿ ಕರೆ ಮಾಡಿ ಬ್ಯಾಂಕ್ ಖಾತೆ ಸಂಖ್ಯೆ ಪಡೆದು ಖಾತೆಯಲ್ಲಿದ್ದ ಅಷ್ಟೂ ಹಣವನ್ನು ದೋಚಿದ್ದಾರೆ.
Mantri Developers: ಮಂತ್ರಿ ಮಾಲೀಕನ ವಿರುದ್ಧ ಜಾಮೀನುರಹಿತ ವಾರೆಂಟ್
ವೈದ್ಯರ ದೂರು ಆಧರಿಸಿ ತನಿಖೆ ನಡೆಸಿದ್ದ ಪೊಲೀಸರು ವೈದ್ಯರ ಖಾತೆಯಿಂದ ಹಣ ಅಸ್ಸಾಂನ ಪವನ್ ಕುಮಾರ್ ಖಾತೆಗೆ ಹೋಗಿರುವುದು ಗುರುತಿಸಿದ್ದರು. ಖಾತೆದಾರರ ಮಾಹಿತಿ ಪಡೆದ ಪೊಲೀಸರು ಅಸ್ಸಾಂನ ಸಿವಾಸ್ ನಗರಕ್ಕೆ ಹೋಗಿ ಪವನ್ ಕುಮಾರ್ ಅನ್ನು ಬಂಧಿಸಿದ್ದಾರೆ. ನಂತರ ವೈದ್ಯ ಶೆಟ್ಟಿಗೆ ಮೋಸ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿ.ಟೆಕ್ ಪದವೀಧರನನ್ನೂ ಬಂಧಿಸಲಾಗಿದೆ. ವೈದ್ಯ ಶೆಟ್ಟಿ ಖಾತೆಯಿಂದ ಪವನ್ ಕುಮಾರ್ ಖಾತೆಗೆ ಹಣ ವರ್ಗಾವಣೆ ಆಗಿದೆ ಆನಂತರ ಪವನ್ ಕುಮಾರ್ ಖಾತೆಯಿಂದ 95 ಖಾತೆಗಳಿಗೆ 1.28 ಕೋಟಿ ಹಣವನ್ನು ವರ್ಗ ಮಾಡಲಾಗಿದೆ. ಇದೀಗ ಎಲ್ಲ ಹಣವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.