Site icon Samastha News

Sandalwood News: 50 ದಿನ ಪೂರೈಸಿದ ʼಕೆರೆಬೇಟೆʼ: ಹಣ ಮಾಡದಿದ್ದರೂ ಯಶಸ್ಸಿನ ಸಂಭ್ರಮ

Sandalwood News

Sandalwood News

ಯುವ ನಟ ಗೌರಿಶಂಕರ್ ನಟಿಸಿ ರಾಜ್ ಗುರು ನಿರ್ದೇಶನದ ʼಕೆರೆಬೇಟೆʼ ಸಿನಿಮಾ 50 ದಿನಗಳನ್ನು ಪೂರೈಸಿದೆ. ಚಿತ್ರತಂಡವೇ ಹೇಳಿಕೊಂಡಿರುವಂತೆ ಕನ್ನಡ ಸಿನಿಮಾಗಳು ಹಿಟ್ ಆಗುತ್ತಿಲ್ಲ, ಚಿತ್ರಮಂದಿರಕ್ಕೆ ಜನ ಬರ್ತಾ ಇಲ್ಲ ಈ ಪರಿಸ್ಥಿತಿಯಲ್ಲೂ ಕರೆಬೇಟೆ 50 ದಿನ ಪೂರೈಸಿದೆ. ಆದರೆ ಹಣ ಗಳಿಸಿಲ್ಲ. ಹೀಗೆಂದು ಸ್ವತಃ ಚಿತ್ರತಂಡವೇ ಹೇಳಿಕೊಂಡಿದೆ.

ನಿರ್ದೇಶಕ ರಾಜಗುರು ಮತ್ತು ನಾಯಕ ಗೌರಿಶಂಕರ್ ತುಂಬಾ ಕಷ್ಟಪಟ್ಟು ಮಾಡಿದ ಸಿನಿಮಾ ಕೆರೆಬೇಟೆ. ಈ ಸಿನಿಮಾ ಭಾರಿ ನಿರೀಕ್ಷೆ ಮತ್ತು ಕುತೂಹಲದೊಂದಿಗೆ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿತ್ತು. ಕುತೂಹಲಕ್ಕೆ ತಕ್ಕಂತೆ ಸಿನಿಮಾ ಕೂಡ ಅದ್ಭುತವಾಗಿ ಮೂಡಿ ಬಂದಿತ್ತು ಆದರೆ ಯಾಕೋ ದೊಡ್ಡಮಟ್ಟದ ಯಶಸ್ಸು ಕಾಣಲಿಲ್ಲ. ಈ ಬೇಸರ ಸಿನಿಮಾ ತಂಡಕ್ಕಿದೆ. ಕಮರ್ಷಿಯಲಿ ದೊಡ್ಡಮಟ್ಟದ ಸಕ್ಸಸ್ ಆಗದಿದ್ದರೂ ಜನರ ಮನ ಗೆದ್ದಿರುವುದರಿಂದ ಸಿನಿಮಾದ 50 ದಿನದ ಸಂಭ್ರಮವನ್ನು ಆಯೋಜಿಸಿತ್ತು. ಸಿನಿಮಾಗಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಪ್ರಶಸ್ತಿ ಫಲಕಗಳನ್ನು ನೀಡಿ ಸಂಭ್ರಮ ಆಚರಿಸಿತು. ಕೆರೆಬೇಟೆಯ ಸಂಭ್ರಮಕ್ಕೆ ಖ್ಯಾತ ನಿರ್ದೇಶಕರಾದ ಶಶಾಂಕ್, ದಯಾಳ್ ಪದ್ಮನಾಭ ಮತ್ತು ನಿರ್ಮಾಪಕ ಉದಯ ಮೆಹ್ತ ನಟ ಪ್ರಥಮ್ ಸಾಕ್ಷಿಯಾದರು.

ಈ ವೇಳೆ ಮಾತನಾಡಿದ ನಾಯಕ ಗೌರಿ ಶಂಕರ್, ‘ಸಿನಿಮಾ ಕಮರ್ಷಿಯಲಿ ದೊಡ್ಡ ಯಶಸ್ಸು ಕಾಣಲಿಲ್ಲ. ಆದರೆ ಜನ ಒಳ್ಳೆಯ ವಿಮರ್ಶೆ ನೀಡಿದ್ದಾರೆ. ಎಲ್ಲೇ ಹೋದರೂ ಕೆರೆಬೇಟೆ ಹೀರೋ ಅಂತ ಗುರುತಿಸುತ್ತಾರೆ. ಕರ್ನಾಟಕದ ಕೆಲವು ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಪೂರೈಸಿದೆ. ಇನ್ನೂ ಕೆಲವು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಈ ಖುಷಿಯನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು ಎನ್ನುವ ಕಾರಣಕ್ಕೆ ಐವತ್ತು ದಿನದ ಸಂಭ್ರಮವನ್ನು ಇಟ್ಟುಕೊಂಡಿದ್ದೇವೆ. ಕೆರೆಬೇಟೆ ಸಿನಿಮಾ ನನ್ನ ಕನಸಾಗಿತ್ತು. ಆದರೆ ಸಿನಿಮಾ ಯಶಸ್ಸು ಆಗದೆ ಇರುವ ಬೇಸರ ಇದೆ. ಇನ್ಮುಂದೆ ಒಳ್ಳೆಯ ಕಥೆ ಬಂದರೆ ನಟಿಸುತ್ತೇನೆ ಅಷ್ಟೆ. ಆದರೆ ನಿರ್ಮಾಣ ಮಾಡಲ್ಲ’ ಎಂದರು.

ನಿರ್ದೇಶಕ ರಾಜಗುರು ಮಾತನಾಡಿ ನನ್ನ ಕನಸನ್ನು ನನಸು ಮಾಡಿದ ಜನಮನ ಸಿನಿಮಾ ಸಂಸ್ಥೆಗೆ ಧನ್ಯವಾದಗಳು. ಈ ಸಿನಿಮಾಗೆ ದೊಡ್ಡ ದೊಡ್ಡ ಡೈರೆಕ್ಟರ್ಗಳು, ಹೀರೋ ಹಾಗೂ ಹೀರೋಯಿನ್ಸ್ ಸಪೋರ್ಟ್ ಮಾಡಿದ್ದಾರೆ. ಎಲ್ಲರಿಗೂ ಧನ್ಯವಾದಗಳು’ ಎಂದರು. ಇನ್ನು ನಾಯಕಿ ಬಿಂದು ಗೌಡ ಮಾತನಾಡಿ, ‘ಈ ಸಿನಿಮಾ ನೋಡಿದ ಎಲ್ಲರೂ ಒಳ್ಳೆಯ ರಿವ್ಯೂ ಕೊಟ್ಟಿದ್ದಾರೆ. ಆ ಖುಷಿ ಇದೆ. ಸಿನಿಮಾ ತಂಡಕ್ಕೆ ಧನ್ಯವಾದಗಳು ಎಂದರು. ಇನ್ನು ನಟಿ ಹರಣಿ ಮಾತನಾಡಿ ಧನ್ಯವಾದ ತಿಳಿಸಿದರು.

ಇನ್ನು ನಿರ್ದೇಶಕರಾದ ದಯಾಳ್ ಪದ್ಮನಾಭ್, ಶಶಾಂಕ್, ನಿರ್ಮಾಪಕ ಉದಯ್ ಮೆಹ್ತಾ ಸಿನಿಮಾರಂಗದಲ್ಲಿನ ತಮ್ಮ ಅನುಭವವನ್ನು ಬಿಚ್ಚಿಟ್ಟರು. ಸಿನಿಮಾ ಸಕ್ಸಸ್ ಆಗಿಲ್ಲ ಎನ್ನುವ ಬೇಸರದಲ್ಲಿದ್ದ ನಾಯಕ ಗೌರಿಶಂಕರಿಗೆ ಸಮಾಧಾನ ಮಾಡಿದರು. ಸಿನಿಮಾವನ್ನು ಜನ ಒಪ್ಪಿಕೊಂಡಿದ್ದಾರೆ, ಉತ್ತಮ ರಿವ್ಯೂ ಕೊಟ್ಟಿದ್ದಾರೆ ಇದಕ್ಕಿಂತ ಇನ್ನೇನು ಬೇಕು ಎಂದು ಹೇಳಿದರು.

Colors Kannada: ಕಿರುತೆರೆಗೆ ಬಂತು ರೇಣುಕಾ ಸ್ವಾಮಿ ಕೊಲೆ ಪ್ರಕರಣ, ದರ್ಶನ್ ಅಭಿಮಾನಿಗಳು ಸುಮ್ಮನಿರ್ತಾರ?

ಕೆರೆಬೇಟೆ ಸಿನಿಮಾ ಬಗ್ಗೆ ಹೇಳುವುದಾದರೆ ಅಪ್ಪಟ ಹಳ್ಳಿ ಸೊಗಡಿನ ಚಿತ್ರ. ಮಾರ್ಚ್ 15ಕ್ಕೆ ರಾಜ್ಯದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿತ್ತು. ಜನಮನ ಸಿನಿಮಾ ಸಂಸ್ಥೆಯಲ್ಲಿ ಮೂಡಿ ಬಂದಿದ್ದ ಈ ಸಿನಿಮಾ ಮಲೆನಾಡಿನ ಮೀನು ಬೇಟೆ ಸಂಸ್ಕೃತಿಯನ್ನು ಪರಿಚಯಿಸಿತ್ತು. ಸಿನಿಮಾದಲ್ಲಿ ನಾಯಕ ಗೌರಿಶಂಕರ್, ನಾಯಕಿ ಬಿಂದು ಗೌಡ ಜೊತೆಗೆ ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್ ಹರುಣಿ ಸೇರಿದಂತೆ ಅನೇಕ ದೊಡ್ಡ ಕಲಾವಿದರು ಬಣ್ಣ ಹಚ್ಚಿದರು.

Exit mobile version