Kettle: ನೀರು ಕಾಯಿಸುವ ಕೆಟಲ್ ಮತ್ತು ಭಾರತದ ಪ್ರಗತಿ, ಆಸಕ್ತಿಕರ ಕತೆ ಕೇಳಿ

0
35
kettle

Kettle

ಚಿತ್ರದಲ್ಲಿ ಕಾಣುತ್ತಿರುವ ನೀರು ಕಾಯಿಸುವ ಕೆಟಲ್ ಬಹುತೇಕರಿಗೆ ಚಿರಪರಿಚಿತ. ಕೋವಿಡ್ ಸಮಯದಲ್ಲಂತೂ ಇದರ ಮಾರಾಟ ಬಲು ಜೋರಾಗಿಯೇ ನಡೆಯಿತು. ವರ್ಷವೊಂದಕ್ಕೆ ಸುಮಾರು 10 ಕೋಟಿಗೂ ಹೆಚ್ಚು ಕೆಟಲ್​ಗಳು ಭಾರತದಲ್ಲಿ ಮಾರಾಟವಾಗುತ್ತವೆ. ಕಳೆದ ವರ್ಷವೊಂದರಲ್ಲೇ 10 ಕೋಟಿ ಕೆಟೆಲ್ ಗಳು ಮಾರಾಟ ಆಗಿವೆ. ಕೋವಿಡ್ ಸಮಯದಲ್ಲಿ ಇನ್ನೂ ಹೆಚ್ಚು ಎನ್ನಲಾಗುತ್ತದೆ. ಆದರೆ ಈ ಕೆಟಲ್ ತಯಾರಿ ಮತ್ತು ಮಾರಾಟದಲ್ಲಿ ಭಾರತದ ಪ್ರಗತಿಯ ಕತೆಯೊಂದು ಅಡಗಿದೆ.

ಮೂರು ವರ್ಷದ ಹಿಂದೆ ಈ ನೀರು ಕಾಯಿಸುವ ಕೆಟಲ್ ಅನ್ನು ನಾವು ನೆರೆಯ ದೇಶದಿಂದ ಹಾಗೂ ಇತರೆ ಬೇರೆ ದೇಶಗಳಿಂದ ಪೂರ್ಣವಾಗಿ ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ ಕೇವಲ ಮೂರು ವರ್ಷದಲ್ಲಿ ಅಂದರೆ ಈಗ ನಾವು ಆಮದು ಮಾಡಿಕೊಳ್ಳುತ್ತಿರುವುದು ಕೇವಲ ಕೆಟಲ್​ನ ಸ್ಟೀಲ್ ಬಾಡಿ, ಹೀಟಿಂಗ್ ಪ್ಲೇಟ್ ಮತ್ತು ಕಂಟ್ರೋಲರ್. ಕೆಟಲ್​ನ ಇನ್ನುಳಿದ ಭಾಗವನ್ನು ಭಾರತದಲ್ಲಿಯೇ ತಯಾರು ಮಾಡಲಾಗುತ್ತಿದೆ. ಮೂರು ವರ್ಷದ ಹಿಂದೇ ಒಂದೇ ಒಂದು ಕೆಟಲ್ ಮಾಡದೇ ಇದ್ದ ಭಾರತ ಈಗ ಕೆಟಲ್​ನ ಅರ್ಧಕ್ಕಿಂತಲೂ ಹೆಚ್ಚಿನ ಭಾಗಗಳನ್ನು ತಯಾರಿ ಮಾಡಿ, ಅಸೆಂಬಲ್ ಸಹ ಮಾಡುತ್ತಿದೆ. ಇದು ಸಾಮಾನ್ಯ ಸಾಧನೆಯಲ್ಲ.

ಒಮ್ಮೆ ಯೋಚಿಸಿ, ವರ್ಷಕ್ಕೆ 10 ಕೋಟಿ ಕೆಟಲ್ ಭಾರತದಲ್ಲಿ ಮಾರಾಟವಾಗುತ್ತವೆ. ಸ್ಟೀಲ್ ಬಾಡಿ, ಹೀಟಿಂಗ್ ಪ್ಲೇಟ್ ಮತ್ತು ಕಂಟ್ರೋಲರ್ ಹೊರತಾಗಿ ಕೆಟಲ್​ಗೆ ಬೇಕಾದ 10 ಕೋಟಿ ವೈಯರ್ ನಮ್ಮಲ್ಲಿ ನಿರ್ಮಾಣವಾಗುತ್ತಿದೆ. 10 ಕೋಟಿ ಪ್ಲಾಸ್ಟಿಕ್ ಭಾಗಗಳು ನಮ್ಮಲ್ಲಿ ನಿರ್ಮಾಣ ಆಗುತ್ತಿವೆ. 10 ಕೋಟಿ ಪ್ಯಾಕೆಜಿಂಗ್, ಪ್ರಿಂಟಿಂಗ್ ನಮ್ಮಲ್ಲಿ ಆಗುತ್ತಿದೆ. ಇದರಿಂದಾಗಿ ಭಾರತದ ಅದೆಷ್ಟು ಜನರಿಗೆ ಹೊಸ ಉದ್ಯೋಗ ಸಿಕ್ಕಿರಬಹುದು? ಎಷ್ಟು ಹೊಸ ಫ್ಯಾಕ್ಟರಿ ನಿರ್ಮಾಣ ಆಗಿರಬಹುದು? ವಿದೇಶಕ್ಕೆ ನೀಡಬೇಕಾಗಿದ್ದ ಸಾವಿರಾರು ಕೋಟಿ ಹಣವನ್ನು ಉಳಿತಾಯ ಮಾಡಿರಬಹುದು ಊಹಿಸಿ. ಇದೆಲ್ಲದರ ಜೊತೆಗೆ ಭಾರತೀಯರಿಗೆ ಕಡಿಮೆ ಹಣದಲ್ಲಿ ಉತ್ಪನ್ನವೊಂದು ಸಿಕ್ಕಂತೆ ಆಗಿದೆ.

Nowruz: ‘ನೋವ್​ರೂಜ್’ ಪರ್ಶಿಯನ್ ಹೊಸವರ್ಷದ ಮಹತ್ವವೇನು?

ಭಾರತದಲ್ಲಿಯೇ ವಸ್ತುಗಳ ನಿರ್ಮಾಣ ಮಾಡುವ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಭಾರತ ಸೆಮಿ ಕಂಡಕ್ಟರ್​ಗಳ ಮೇಲೆ ಸಂಪೂರ್ಣವಾಗಿ ಚೀನಾ ಹಾಗೂ ಇತರೆ ಕೆಲ ದೇಶಗಳ ಮೇಲೆ ಅವಲಂಬಿಸಿದೆ. ಆದರೆ ಇದೀಗ ಭಾರತದಲ್ಲಿಯೇ ಸೆಮಿಕಂಡಕ್ಟರ್​ಗಳ ಉತ್ಪಾದನೆಗೆ ಕೇಂದ್ರ ಸರ್ಕಾರ ಒತ್ತು ನೀಡಿದ್ದು, ಇದಕ್ಕಾಗಿ ದೊಡ್ಡ ಮೊತ್ತದ ಹಣವನ್ನು ಮೀಸಲಿಡಲಾಗಿದೆ. ಒಂದೊಮ್ಮೆ ಸೆಮಿಕಂಡಕ್ಟರ್​ಗಳು ಭಾರತದಲ್ಲಿ ನಿರ್ಮಾಣಗೊಳ್ಳಲು ಆರಂಭವಾದರೆ ಎಲೆಕ್ರಿಟಿಕ್ ವಸ್ತುಗಳು ಈಗಿನದ್ದಕ್ಕಿಂತಲೂ ಸುಮಾರು 25-30% ಕಡಿಮೆ ದರಕ್ಕೆ ಲಭ್ಯವಾಗುತ್ತವೆ. ಮಾತ್ರವಲ್ಲದೆ ಸರ್ಕಾರದ ಲಕ್ಷಾಂತರ ಕೋಟಿ ವಿದೇಶಿ ವಿನಿಮಯ ಹಣ ಉಳಿಕೆ ಆಗುತ್ತದೆ. ಅದು ಭಾರತದ ಮೂಲಸೌಕರ್ಯ ವೃದ್ಧಿಗೆ ಉಪಯೋಗವಾಗುತ್ತದೆ.

LEAVE A REPLY

Please enter your comment!
Please enter your name here