PhonePe: ಇಂಟರ್​ನೆಟ್ ಇಲ್ಲದೆ ಫೋನ್ ಪೇ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

0
200
PhonePe
UPI Payment

PhonePe

ಗೂಗಲ್ ಪೇ, ಫೋನ್ ಪೇಗಳಿಂದಾಗಿ ಹಣಕಾಸು ವ್ಯವಹಾರ ಬಹಳ ಸುಲಭವಾಗಿದೆ. ಎಷ್ಟೋ ಮಂದಿ ಈಗ ಜೇಬಿನಲ್ಲಿ ನಗದು ಇಟ್ಟುಕೊಳ್ಳುವುದನ್ನೇ ಬಿಟ್ಟಿದ್ದಾರೆ. ಫೋನ್ ಪೇ, ಗೂಗಲ್ ಪೇಗಳು ಬಹಳ ಸುಲಭ, ಸುರಕ್ಷಿತ ಆಗಿರುವ ಕಾರಣ ದೇಶದ ಬಹುತೇಕ ಜನರು ಇದನ್ನೇ ಬಳಸುತ್ತಿದ್ದಾರೆ. ಆದರೆ ಗೂಗಲ್ ಪೇ, ಫೋನ್ ಪೇ ಅಥವಾ ಡಿಜಿಟಲ್ ಪೇಮೆಂಟ್​ ಮಾದರಿಗೆ ಕೆಲವು ಮಿತಿಗಳು ಸಹ ಇವೆ. ಬಹಳ ಮುಖ್ಯವಾದುದೆಂದರೆ ಇಂಟರ್ನೆಟ್ ಇದ್ದರಷ್ಟೆ ಇದು ಕೆಲಸ ನಿರ್ವಹಿಸುತ್ತದೆ. ಎಷ್ಟೋ ಬಾರಿ ಮೊಬೈಲ್​ನಲ್ಲಿ ಬ್ಯಾಟರಿ ಕಡಿಮೆ ಇರುತ್ತದೆ, ನೆಟ್ ಆನ್ ಮಾಡಿದರೆ ಫೋನ್ ಸ್ವಿಚ್ ಆಫ್ ಆಗುವ ಭಯವಿರುತ್ತದೆ. ಹೀಗಿರುವಾಗ ನೆಟ್ ಆನ್ ಮಾಡದೆ ಅಥವಾ ಇಂಟರ್ನ್​ನೆಟ್ ಡಾಟಾ ಇಲ್ಲದ ಸಂದರ್ಭದಲ್ಲಿ ಡಿಜಿಟಲ್ ಪೇಮೆಂಟ್ ಮಾಡುವುದು ಹೇಗೆ? ಇಲ್ಲಿದೆ ಉಪಾಯ.

ಯುಪಿಐ ಪೇಮೆಂಟ್ ಸರ್ವೀಸ್ ಪ್ರಾರಂಭ ಮಾಡಿರುವ ಎನ್​ಪಿಸಿಐ ನವರು ಇಂಟರ್ನೆಟ್ ಇಲ್ಲದೆ ಡಿಜಿಟಲ್ ಪೇಮೆಂಟ್ ಮಾಡುವ ವಿಧಾನವನ್ನು ಪರಿಚಯಿಸಿದ್ದಾರೆ. ಈ ವಿಧಾನದಲ್ಲಿ ಸ್ಮಾರ್ಟ್​ಫೋನ್ ಇಲ್ಲದೆಯೂ ಅಥವಾ ಇಂಟರ್ನೆಟ್ ಡಾಟಾ ಇಲ್ಲದೆಯೂ ಸಹ ಯಾವುದೇ ವ್ಯಕ್ತಿಗೆ ಡಿಜಿಟಲ್ ಪೇಮೆಂಟ್ ಮಾಡಬಹುದಾಗಿದೆ ಆದರೆ ಕಳಿಸುವ ಹಣಕ್ಕೆ ಮಿತಿ ಇದೆ.

ರಾಹುಲ್ ಗಾಂಧಿ ಆಸ್ತಿ ಎಷ್ಟು ಕೋಟಿ, ಎಲ್ಲಿಂದ ಬರುತ್ತಿದೆ ಆದಾಯ? ಹೂಡಿಕೆ ಮಾಡಿದ್ದು ಎಲ್ಲೆಲ್ಲಿ?

* ಮೊದಲು ನಿಮ್ಮ ಮೊಬೈಲ್ ಫೋನ್​ನಲ್ಲಿ *99# ಟೈಪ್ ಮಾಡಿ ಡಯಲ್ ಮಾಡಬೇಕು.‘
* ಇದರಿಂದ ಹಲವು ಸೇವೆಗಳ ಡಯಲ್ ಬಾಕ್ಸ್ ಓಪನ್ ಆಗುತ್ತದೆ. ಅದರಲ್ಲಿ ಆಯ್ಕೆ 1 ಅನ್ನು ಆರಿಸಿಕೊಂಡರೆ ಅಥವಾ 1 ಎಂದು ರಿಪ್ಲೈ ಮಾಡಿದರೆ ಇಂಟರ್ನೆಟ್ ರಹಿತವಾಗಿ ಪೇಮೆಂಟ್ ಮಾಡಬಹುದಾಗಿರುತ್ತದೆ.
* ನೀವು ಯಾರ ಮೊಬೈಲ್ ಸಂಖ್ಯೆಗೆ ಅಥವಾ ಬ್ಯಾಂಕ್ ಖಾತೆಗೆ ಹಣ ಹಾಕಬೇಕಾಗಿರುತ್ತದೆಯೋ ಅವರ ಮೊಬೈಲ್ ನಂಬರ್ ಅಥವಾ ಯುಪಿಐ ಐಡಿಯನ್ನು ದಾಖಲಿಸಿ.
* ನೀವು ಎಷ್ಟು ಹಣ ಕಳಿಸಬೇಕೊ ಅಷ್ಟು ಹಣದ ಮೊತ್ತ ದಾಖಲಿಸಿ. (5000 ಕ್ಕಿಂತಲೂ ಕಡಿಮೆ ಮೊತ್ತವನ್ನಷ್ಟೆ ಈ ಮಾದರಿಯಲ್ಲಿ ಕಳಿಸಬಹುದು)
* ನಿಮ್ಮ ಯುಪಿಐ ಭದ್ರತಾ ಸಂಖ್ಯೆಯನ್ನು ನಮೂದಿಸಿ, ಹಣವನ್ನು ಸೆಂಡ್ ಮಾಡಿ.

ಈ *99# ಡಯಲ್ ವಿಧಾನದಲ್ಲಿ 5000 ಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಯಾರಿಗೂ ಕಳಿಸಲಾಗುವುದಿಲ್ಲ. ಈ ಸೇವೆ ಪಡೆಯುವುದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ.

LEAVE A REPLY

Please enter your comment!
Please enter your name here