Horoscope
ಜೂನ್ ತಿಂಗಳಲ್ಲಿ ಕುಜ, ಶುಕ್ರ, ಬುಧ, ಸೂರ್ಯರ ಪರಿವರ್ತನೆ ಆಗಲಿದೆ. ಹಲವು ರಾಶಿಗಳಿಗೆ ಉತ್ತಮ ಫಲ, ಕೆಲವರಿಗೆ ಮಧ್ಯಮ, ಕಳಪೆ ಫಲವು ಪ್ರಾಪ್ತವಾಗಲಿದೆ. ಯಾರೂ ತಾಳ್ಮೆಯನ್ನು ಕಳೆದುಕೊಳ್ಳದೆ, ಉತ್ತಮ ಕಾಲದ ನಿರೀಕ್ಷೆಯಲ್ಲಿ ಇರುವುದು ಸೂಕ್ತ.
ಮೇಷ ರಾಶಿ
ಜೂನ್ ತಿಂಗಳಲ್ಲಿ ಮೇಷ ರಾಶಿಗೆ ಶುಭಫಲ ಇರಲಿದೆ. ದ್ವಾದಶದಲ್ಲಿ ಕುಜನು ಸ್ವಕ್ಷೇತ್ರಕ್ಕೆ ಆಗಮಿಸುತ್ತಾನೆ. ಸೂರ್ಯ ಮತ್ತು ಶುಕ್ರರು ತೃತೀಯ ಸ್ಥಾನಕ್ಕೆ ಹಾಗೂ ಬುಧನು ಚತುರ್ಥಕ್ಕೆ ಹೋಗುವನು. ಧೈರ್ಯದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವರು. ಸಾಹಸ ಕಾರ್ಯದಲ್ಲಿ ತೊಡಗಿಕೊಳ್ಳುವ ಅವಕಾಶ ಇದೆ. ಸಹೋದರ ನಡುವಣ ಸಂಬಂಧವನ್ನು ಬೆಸೆಯುವ ಸೂಚನೆ ಕಾಣಿಸುವುದು. ಆಪ್ತರ ಜೊತೆ ಸಮಯ ಕಳೆಯುವಿರಿ.
ವೃಷಭ ರಾಶಿ
ಈ ರಾಶಿಯವರಿಗೆ ಈ ತಿಂಗಳು ಮಿಶ್ರ ಫಲ. ರಾಶಿಯಲ್ಲಿ ಗುರು, ದ್ವಾದಶದಲ್ಲಿ ಕುಜ, ದ್ವಿತೀಯದಲ್ಲಿ ಸೂರ್ಯ, ಶುಕ್ರ, ತೃತೀಯದಲ್ಲಿ ಬುಧನ ಸಂಚಾರವು ಇರಲಿದೆ. ಚಂಚಲ ಮನಸ್ಸು ಶಾಂತವಾಗುವುದು. ಹಣವನ್ನು ಅಪವ್ಯಯ ಮಾಡುತ್ತೀರಿ ಹಿಡಿತವಿರಲಿ. ನಿಮ್ಮ ಮಾತುಗಳನ್ನು ಮೆಚ್ಚುವರು. ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆ ಸಿಗುವುದು. ಉಪಯೋಗಿಸಿಕೊಳ್ಳಿ.ಬೇರೆ ಕೆಲವು ಮೂಲಗಳಿಂದ ಹಣ ಸಂಪಾದನೆ ಮಾಡುವಿರಿ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಅಶುಭಫಲ ತುಸು ಹೆಚ್ಚು. ಸ್ವರಾಶಿಯಲ್ಲಿ ಸೂರ್ಯ ಹಾಗೂ ಶುಕ್ರ, ವ್ಯಯದಲ್ಲಿ ಗುರು, ಏಕಾದಶದಲ್ಲಿ ಕುಜ, ದ್ವಿತೀಯದಲ್ಲಿ ಬುಧ ಸಂಚಾರ ಇರಲಿದೆ. ಯಂತ್ರೋಪಕರಣಗಳಿಂದ ಲಾಭವಾಗುವುದು. ಆರೋಗ್ಯವು ವ್ಯತ್ಯಾಸವಾಗಿ ಸಂಕಟಪಡಬೇಕಾಗುವುದು. ಬಂಧುಗಳಿಂದ ಏನನ್ನಾದರೂ ನಿರೀಕ್ಷಿಸಿದರೆ ಸಾಧ್ಯವಾಗುವುದು. ಆಲಂಕಾರಿಕ ವಿಚಾರಕ್ಕೆ ಹೆಚ್ಚು ಮಹತ್ತ್ವ ಕೊಡುವಿರಿ. ರಾಹುವಿನಿಂದ ಕಾಲಿಗೆ ಗಾಯಗಳು ಆಗುವುದು.
ಕರ್ಕಾಟಕ ರಾಶಿ
ಕರ್ನಾಟಕ ರಾಶಿಗೆ ಬುಧನ ಆಗಮನ. ದ್ವಾದಶದಲ್ಲಿ ಸೂರ್ಯ ಹಾಗೂ ಶುಕ್ರ, ದಶಮದಲ್ಲಿ ಕುಜ, ಏಕಾದಶದಲ್ಲಿ ಗುರು. ಉದ್ಯೋಗದಲ್ಲಿ ದುಡುಕುವ ಸಾಧ್ಯತೆ ಇದೆ, ಜಾಗರೂಕತೆಯಿಂದ ವರ್ತಿಸಿ. ಏನನ್ನಾದರೂ ಹೇಳುವ ಮಾಡುವ ಕೆಲವು ಬಾರಿ ಯೋಚಿಸಿ. ವಿವೇಚನೆಯಿಂದ ಮಾತನಾಡಿ. ಧನನಷ್ಟ ಆಗುವ ಸಂಭವ ಇದೆ ಜಾಗೃತೆ ಇರಲಿ. ಎಚ್ಚರಿಕೆಯಿಂದ ವಾಹನ ಓಡಿಸಿ. ಬೌದ್ಧಿಕ ಶ್ರಮ ಪಡಬೇಕಾಗುತ್ತದೆ. ವೈವಾಹಿಕ ಜೀವನವನ್ನು ಬಹಳ ಜೋಪಾನದಿಂದ ನಡೆಸಿ, ತಾಳ್ಮೆ ಇರಲಿ.
ಸಿಂಹ ರಾಶಿ
ಸಿಂಹ ರಾಶಿಗೆ ಈ ತಿಂಗಳು ಉತ್ತಮವಾಗಿದೆ. ಕುಜನು ನವಮದಲ್ಲಿ ಇರುವುದರಿಂದ ಅದೃಷ್ಟ ತುಸು ಕೈ ಕೊಡಬಹುದು. ಆದರೆ ಪ್ರಯತ್ನದಿಂದ ಸಾಧಿಸಲಾರದ್ದು ಏನೂ ಇಲ್ಲ. ಏಕಾದಶದಲ್ಲಿ ಶುಕ್ರ ಹಾಗೂ ಸೂರ್ಯರಿರುವುದರಿಂದ ವಾಹನದಿಂದ ಲಾಭ ಆಗಲಿದೆ, ಕೃಷಿಕರಿಗೆ ಉತ್ತಮ ಬೆಲೆ ಸಿಗಲಿದೆ. ದ್ವಾದಶದಲ್ಲಿ ಬುಧ ನಿಮ್ಮ ಮಾತಿಗೆ ಬೆಲೆ ಬರದೇ ಬೆಲೆ ತೆರಬೇಕಾದ ಸ್ಥಿತಿಯನ್ನು ಸೃಷ್ಟಿಸುವನು. ಸಂಗಾತಿಯ ಮೇಲಿನ ಪ್ರೀತಿಯನ್ನು ಕಡಿತ ಆದಂತೆ ಭಾಸವಾಗುತ್ತದೆ. ರಾಹುವು ಅನಾರೋಗ್ಯವನ್ನು ಸರಿ ಮಾಡುವ ದಾರಿ ತೋರಿಸುವನು.
ಕನ್ಯಾ ರಾಶಿ
ಜೂನ್ ತಿಂಗಳು ಶುಭಫಲ ಸಿಗಲಿದೆ. ನೆಮ್ಮದಿ ಇರಲಿದೆ. ಕೈ ಹಾಕಿದ ಕಾರ್ಯವು ಆಗಲಿದೆ. ವ್ಯಾಪಾರಗಳಲ್ಲಿರುವವರಿಗೆ ಉತ್ತಮ ಲಾಭ ದೊರಕಲಿದೆ. ಗುರುವಿನಿಂದಾಗಿ ಇಷ್ಟಾರ್ಥ ಪೂರ್ಣವಾಗುತ್ತದೆ. ಬುಧನು ಏಕಾದಶದಲ್ಲಿ ಇರುವುದು ಬಂಧುವರ್ಗದಿಂದ ಸಹಕಾರ ಮತ್ತು ಸಂಪತ್ತು ಸಿಗಲಿದೆ. ದಾಂಪತ್ಯದಲ್ಲಿ ಕೆಲವು ಸಂದರ್ಭವನ್ನು ನೀವು ಜೋಪಾನವಾಗಿ ಎದುರಿಸಬೇಕಾಗಬಹುದು. ಸಂಗಾತಿಯಿಂದ ನಿರೀಕ್ಷಿತ ಸಹಕಾರವೂ ಸಿಗದೇ ಹೋಗಬಹುದು, ಪ್ರಯತ್ನ ನಿಲ್ಲಿಸಬೇಡಿ.
ತುಲಾ ರಾಶಿ
ಸಂಗಾತಿ ವಿಚಾರದಲ್ಲಿ ಋಣಾತ್ಮಕ ಆಲೋಚನೆ ಮೂಡುತ್ತದೆ, ಆದರೆ ತಾಳ್ಮೆ ಇರಲಿ. ನವಮದಲ್ಲಿ ಸೂರ್ಯ ಹಾಗೂ ಶುಕ್ರನು ಇರುವುದರಿಂದ ಸರ್ಕಾರದ ವಿಚಾರಕ್ಕೆ ಸಂಬಂಧಿಸಿದಂತೆ ಧನಾತ್ಮಕ ಬದಲಾವಣೆ ಆಗುವುದು. ಯಾವುದಾದರೂ ಸ್ಥಾನಮಾನಕ್ಕಾಗಿ ಪ್ರಯತ್ನಿಸಿದರೆ ಸಿಗುವ ಸಾಧ್ಯತೆ ಇದೆ. ವಾಹನದಿಂದ ಲಾಭ ಸಿಗಲಿದೆ. ಐಶಾರಾಮಿ ಜೀವನಕ್ಕೆ ಹೆಚ್ಚು ಒತ್ತು ಕೊಡುವಿರಿ. ಸಹೋದರನಿಂದ ಸಹಾಯವಾಗುತ್ತದೆ.
ವೃಶ್ಚಿಕ ರಾಶಿ
ವೃಶ್ಚಿತ ರಾಶಿಗೆ ಈ ತಿಂಗಳು ಶುಭ. ಶತ್ರುಗಳೂ ಕೂಡ ಶಾಂತರಾಗಿ ಸ್ನೇಹದ ಹಸ್ತ ಚಾಚುವರು. ಪರೋಪಕಾರ ಮಾಡಲು ಮುಂದಾಗುವಿರಿ. ಅಷ್ಟಮದಲ್ಲಿ ಸೂರ್ಯ ಹಾಗೂ ಶುಕ್ರರಿಂದ ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿ ಆತಂಕವಾಗುವುದು. ಬಂಧುಗಳಿಂದ ಸಹಾಯ ಆಗಲಿದೆ. ಅನಿರೀಕ್ಷಿತ ಸನ್ಮಾನ ನಡೆದು ಖುಷಿ ಆಗಲಿದೆ. ಮಕ್ಕಳಿಂದ ಕಿರಿಕಿರಿ ಅಧಿಕವಾಗಿ ಬರಬಹುದು. ಅದನ್ನು ಗಂಭೀರವಾಗಿ ಪರಿಗಣಿಸದೇ ಸ್ತಬ್ಧವಾಗಿ ಇರಿ. ತಾನಾಗಿಯೇ ನಿವಾರಣೆಯಾಗುವುದು.
ಧನು ರಾಶಿ
ಈ ತಿಂಗಳು ಮಿಶ್ರ ಫಲ ಸಿಗಲಿದೆ. ಗುರುಬಲ ಇಲ್ಲದೇ ಇರುವುದರಿಂದ ಮಾನಸಿಕ ಕ್ಷೋಭೆ ಇರಲಿದೆ. ಪಂಚಮದಲ್ಲಿ ಕುಜ ಸಂಚಾರ ವಿದ್ಯಾಭ್ಯಾಸಕ್ಕೆ ಅನುಕೂಲಕರವಲ್ಲ. ಸಪ್ತಮದಲ್ಲಿ ಸೂರ್ಯ ಹಾಗೂ ಶುಕ್ರರ ಸಂಯೋಗವು ವಿವಾಹಕ್ಕೆ ಅನುವುಮಾಡಿಕೊಡುತ್ತದೆ. ನಿಮಗೆ ನರಕ್ಕೆ ಸಂಬಂಧಿಸಿ ಸಮಸ್ಯೆ ಕಾಣಲಿದೆ. ಹಿರಿಯರ ದ್ವೇಷ ಮಾಡಬೇಡಿ. ಕುಟುಂಬದಲ್ಲಿ ಕಲಹ ಆಗುವ ಸಾಧ್ಯತೆ ಇದೆ. ತಾಳ್ಮೆಯಿಂದ ವ್ಯವಹರಿಸಿ.
ಮಕರ ರಾಶಿ
ಜೂನ್ ತಿಂಗಳಲ್ಲಿ ಈ ರಾಶಿಯವರಿಗೆ ಮಿಶ್ರಫಲ ಇರಲಿದೆ. ಚತುರ್ಥದಲ್ಲಿ ಕುಜ, ಷಷ್ಠದಲ್ಲಿ ಶುಕ್ರ ಹಾಗೂ ಸೂರ್ಯ, ಸಪ್ತಮದಲ್ಲಿ ಬುಧನ ಸಂಚಾರವು ಇರುವ ಕಾರಣ ಭೂಮಿಯಿಂದ ಲಾಭವಾಗೂವುದಾದರೂ ಕೆಲವು ಸಮಸ್ಯೆಗಳು ಇರಲಿದೆ. ಕುಟುಂಬದಲ್ಲಿ ಹೊಂದಾಣಿಕೆ ಕೊರತೆ. ತಂದೆಯ ನಡವಳಿಕೆಯಿಂದ ಬೇಸರ ಆಗಲಿದೆ. ಸಂಗಾತಿಯ ವಿಚಾರದಲ್ಲಿ ಸಮಾಧಾನ ಇರಲಿದೆ. ಬಂಧುಗಳ ಬಗ್ಗೆ ನಿಮಗೆ ಸದಭಿಪ್ರಾಯ ಇರುವುದು. ಸಂಪತ್ತಿನ ಕಡೆ ಗಮನವು ಕಡಿಮೆಯಾಗುವುದು. ಗುರುಬಲವು ನಿಮ್ಮ ನೋವನ್ನು ಕುಗ್ಗಿಸುತ್ತದೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಮಿಶ್ರಫಲವು ಇರಲಿದೆ. ತೃತೀಯಕ್ಕೆ ಕುಜನ ಸಂಚಾರವಾಗಲಿದೆ. ಪಂಚಮದಲ್ಲಿ ಸೂರ್ಯ ಮತ್ತು ಶುಕ್ರರಿದ್ದರೆ, ಬುಧನು ಷಷ್ಠದಲ್ಲಿ ಇರುವನು. ಬಂಧುಗಳು ನಾನಾ ಪ್ರಕಾರದಲ್ಲಿ ಪೀಡಿಸುವರು. ಮಕ್ಕಳು ಮತ್ತು ತಾಯಿಯ ನಡುವೆ ಕಲಹವಾಗುವುದು. ಹೆಣ್ಣು ಮಕ್ಕಳ ಪ್ರೀತಿ ಸಿಗಲಿದೆ. ಪ್ರತಿಭೆ ಪ್ರದರ್ಶಿಸಲು ಅವಕಾಶ ಸಿಗಲಿದೆ. ಭೂಮಿಗೆ ಸಂಬಂಧಿಸಿದ ವಿಚಾರದಲ್ಲಿ ಜಯ ನಿಮ್ಮದಾಗಲಿದೆ. ಅತಿಯಾಗಿ ಶ್ರಮ ಪಡುವಿರಿ, ಆದಾಯವನ್ನೂ ಗಳಿಸುವಿರಿ.
Allu Arjun: ಅಲ್ಲು ಅರ್ಜುನ್- ಸುಕುಮಾರ್ ಮಧ್ಯೆ ಜಗಳ, ನಿಜಾಂಶವೇನು?
ಮೀನ ರಾಶಿ
ಮೀನ ರಾಶಿಯವರಿಗೆ ಮಿಶ್ರಫಲ ಇರಲಿದೆ. ಕುಜನು ಮೇಷಕ್ಕೆ ಬರುವನು. ಸೂರ್ಯ ಹಾಗು ಶುಕ್ರನು ಚತುರ್ಥ ಸ್ಥಾನಕ್ಕೆ ಹೋಗುವರು. ಬುಧನೂ ಪಂಚಮಸ್ಥಾನಕ್ಕೆ ಹೋಗುವನು. ಬರಬೇಕಾದ ಸಂಪತ್ತು ತಡವಾಗುತ್ತದೆ. ನಿಮ್ಮಿಂದಲೇ ಸಂಪತ್ತಿನ ಆಗಮನ ತಡವಾಗುತ್ತದೆ. ಮಾತಿನ ಕಾರಣಕ್ಕೆ ಸಮಸ್ಯೆ ಅನುಭವಿಸುತ್ತೀರಿ, ಜಾಗರೂಕತೆಯಿಂದ ಮಾತನಾಡಿ. ಸಂಗಾತಿಯಿಂದ ಮತ್ತು ಸಂಗಾತಿಯ ಕಡೆಯಿಂದ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುವುದಿಲ್ಲ. ಮಕ್ಕಳಿಂದ ಕಿರಿಕಿರಿ ಆಗಲಿದೆ. ಮಾನಸಿಕವಾಗಿ ಚಾಂಚಲ್ಯವು ಇರಲಿದ್ದು ನಿರ್ಧಾರಗಳನ್ನು ಮಾಡಲು ಕಷ್ಟಪಡುತ್ತೀರಿ.