Site icon Samastha News

KSDL: ಸಿದ್ದರಾಮಯ್ಯಗೆ 108 ಕೋಟಿ ಕೊಟ್ಟ ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ

KSDL

KSDL

ಕರ್ನಾಟಕ ಸೋಪ್ ಆಂಡ್ ಡಿಟರ್ಜೆಂಟ್ಸ್ (KSDL) ನವರು ಕರ್ನಾಟಕದ ಹಡಮ್ಮೆಯಾದ ಮೈಸೂರು ಸ್ಯಾಂಡಲ್‌ ಸೋಪು ಮತ್ತಿತರೆ ಮೈಸೂರು ಸ್ಯಾಂಡಲ್ ಉತ್ಪನ್ನಗಳನ್ನು ತಯಾರು ಮಾಡುತ್ತಾರೆ. ನಿನ್ನೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಕೆಎಸ್’ಡಿಎಲ್ ಸಿಬ್ಬಂದಿ ಸಿಎಂ ಅವರಿಗೆ 108.64 ಕೋಟಿ ಮೊತ್ತದ ಚೆಕ್ ವಿತರಣೆ ಮಾಡಿದರು. ಇದು ಮೈಸೂರು ಸ್ಯಾಂಡಲ್ ಉತ್ಪನ್ನದಿಂದ ಬಂದ ಲಾಭದ ಭಾಗವಾಗಿದೆ.

2023-24 ರಲ್ಲಿ ಮೈಸೂರು ಸ್ಯಾಂಡಲ್ ಅಥವಾ  KSDL ಸಂಸ್ಥೆಯು ಅದ್ದೂರಿ ಲಾಭ ಮಾಡಿದೆ. ಈ ಆರ್ಥಿಕ ವರ್ಷದಲ್ಲಿ 362 ಕೋಟಿಗೂ ಹೆಚ್ಚಿನ ಲಾಭವನ್ನು ಕೆಎಸ್’ಡಿಎಲ್ ಮಾಡಿದ್ದು ಲಾಭದ ಡಿವಿಡೆಂಟ್ ಅನ್ನು ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸಿತು. ಒಟ್ಟು ಲಾಭದ 30% ಡಿವಿಡೆಂಡ್ ಅನ್ನು ರಾಜ್ಯ ಸರ್ಕಾರಕ್ಕೆ KSDL ನೀಡಿದೆ‌. ಇದರ ಜೊತೆಗೆ ಹೆಚ್ಚುವರಿಯಾಗಿ 5 ಕೋಟಿ ರೂಪಾಯಿ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಹ ನೀಡಿತು KSDL.

ಐದು ವರ್ಷಗಳ ಹಿಂದೆ ಇದೆ KSDL ಸಂಸ್ಥೆ ಕೇವಲ 15 ಕೋಟಿ ರೂಪಾಯಿ ಡಿವಿಡೆಂಡ್ ನೀಡಿತ್ತು‌. ಈಗ ಇದೇ ಸಂಸ್ಥೆ  108 ಕೋಟಿ ರೂಪಾಯಿ ಡಿವಿಡೆಂಡ್ ನೀಡಿದೆ. ಈ ಐದು ವರ್ಷಗಳಲ್ಲಿ ಕಂಪೆನಿ‌ಬೆಳೆದಿರುವ ರೀತಿ ಮತ್ತು ವೇಗ ಗಮನಾರ್ಹವಾದುದು, ಪ್ರಶಂಸಾರ್ಹವಾದುದು ಎಂದಿದ್ದಾರೆ. ಈ ಸಂದರ್ಭದಲ್ಲಿ ಹಾಜರಿದ್ದ ರಾಜ್ಯ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಸಹ KSDL ನ ಏಳ್ಗೆಯನ್ನು ಪ್ರಶಂಸಿಸಿದರು.

Bengaluru: ಸಾವಿರಾರು ವಿದ್ಯುತ್ ಕಂಬಗಳನ್ನು ಹೂತು ಹಾಕಲಿದೆ ರಾಜ್ಯ ಸರ್ಕಾರ, 200 ಕೋಟಿ ಯೋಜನೆ

ಎಂ ಬಿ ಪಾಟೀಲ್ ಮಾತನಾಡಿ, ‘KSDL ನ ಉತ್ಪನ್ನಗಳನ್ನು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕು. ರಾಜ್ಯದ ಹೆಮ್ಮೆಯ ಸಸ್ಥೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕು’ ಎಂದರು. 2024 ರಲ್ಲಿ ಈ ವರೆಗಿನ ಅತಿ ಹೆಚ್ಚು ಮಾರಾಟವನ್ನು ಮೈಸೂರು ಸ್ಯಾಂಡಲ್ಸ್ ಉತ್ಪನ್ನಗಳು ದಾಖಲಿಸಿವೆ. ಈ ವರ್ಷದಲ್ಲಿ 1570 ಕೋಟಿ ಮೌಲ್ಯದ ಉತ್ಪನ್ನಗಳು ಮಾರಾಟ ಆಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ 14.25% ಹೆಚ್ಚು ಮಾರಾಟ ಈ ವರ್ಷ ಆಗಿದೆ.

Exit mobile version