Site icon Samastha News

Work: ಹೆಂಡತಿ ಮುಖ ಯಾಕೆ ನೋಡ್ತಿರಿ, ಭಾನುವಾರವೂ ಬಂದು ಕೆಲಸ ಮಾಡಿ: ಕಂಪೆನಿ ಮಾಲೀಕನ ಹೇಳಿಕೆಗೆ ವಿರೋಧ

Work

Work

ಕೆಲ ಅಭಿವೃದ್ಧಿ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಈಗಾಗಲೇ ಕೆಲಸದ ಅವಧಿ ಹೆಚ್ಚಿದೆ. ಚೀನಾ, ಅಮೆರಿಕಕ್ಕೆ ಹೋಲಿಸಿದರೆ ಭಾರತದಲ್ಲಿ ಕೊಡಯವ ಸಂಬಳವೂ ಕಡಿಮೆ ಹಾಗಿದ್ದರೂ ಸಹ ಇಲ್ಲಿನ ಕಂಪೆನಿ ಮಾಲೀಕರು ತಮ್ಮ ಉದ್ಯೋಗಿಗಳು ವಾರದ ಎಲ್ಲ ದಿನ ಕೆಲಸ ಮಾಡಲಿ ಎಂಸು ನಿರೀಕ್ಷೆ ಮಾಡುತ್ತಿದ್ದಾರೆ. ಇನ್ಫೋಸಿಸ್ ಅಧ್ಯಕ್ಷ ನಾರಾಯಣಮೂರ್ತಿ ಹೇಳಿಕೆ ಬಳಿಕ ಇಂಥಹಾ ಒಂದು ಚರ್ಚೆ ತುಸು ದೊಡ್ಡದಾಗಿ ಪ್ರಾರಂಭ ಆಗಿದೆ.

ಕೆಲ ತಿಂಗಳ ಹಿಂದೆ ಇನ್ಫೋಸಿಸ್ ಅಧ್ಯಕ್ಷ ನಾರಾಯಣಮೂರ್ತಿ ಸಂವಾದವೊಂದರಲ್ಲಿ, ಭಾರತದ ನೌಕರರು ವಾರಕ್ಕೆ 70 ರಿಂದ 80 ಗಂಟೆ ಕೆಲಸ ಮಾಡಬೇಕು ಎಂದಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಆ ನಂತರ ಓಲಾದ ಮಾಲೀಕನೂ ಸಹ ಇಂಥಹುದೇ ಹೇಳಿಕೆ ನೀಡಿದ್ದ. ಇದೀಗ ಭಾರತದ ಮತ್ತೊಂದು ದೊಡ್ಡ ಕಂಪೆನಿ ಮಾಲೀಕ ಇಂಥಹದ್ದೇ ಹೇಳಿಕೆ ನೀಡಿದ್ದು, ಭಾನುವಾರವೂ ಕೆಲಸ ಮಾಡಿ, ಹೆಂಡತಿಯನ್ನೇ ಮರೆತುಬಿಡಿ ಎಂಬರ್ಥದ ಹೇಳಿಕೆ ನೀಡಿದ್ದಾರೆ.

ಭಾರತದ ಅತಿ ದೊಡ್ಡ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದಾದ ಲಾರ್ಸನ್ ಆಮಡ್ ಟರ್ಬೊ (L&T)ಯ ಚೇರ್ಮನ್ ಎಸ್ ಎನ್ ಸುಬ್ರಹ್ಮಣ್ಯನ್ ವಿಡಿಯೋ ಕಾನ್ಫರೆನ್ಸ್ ಒಂದರಲ್ಲಿ ಮಾತನಾಡುತ್ತಾ, ನೌಕರರು ವಾರದ ಎಲ್ಲ ದಿನವೂ ಕೆಲಸ ಮಾಡಬೇಕು, ಮನೆಯಲ್ಲಿ ಅದೇ ಹೆಂಡತಿಯ ಮುಖ ಎಷ್ಟು ಗಂಟೆ ನೋಡುತ್ತೀರಿ ಕಚೇರಿಗೆ ಬಂದು ಕೆಲಸ ಮಾಡಿ ಎಂದಿದ್ದಾರೆ. ಮಾತ್ರವಲ್ಲದೆ, ‘ನಿಮ್ಮನ್ನು (ಸಿಬ್ಬಂದಿ) ಭಾನುವಾರವೂ ಕೆಲಸ ಮಾಡಿಸದೇ ಇರುವುದಕ್ಕೆ ನನಗೆ ಬೇಸರವಿದೆ. ನನಗೆ ಅವಕಾಶ ಸಿಕ್ಕರೆ ನಿಮ್ಮನ್ನು ವಾರದ ಎಲ್ಲ ದಿನ ಕೆಲಸ ಮಾಡುವಂತೆ ಮಾಡುತ್ತೇನೆ’ ಎಂದಿದ್ದಾರೆ.

ಸುಬ್ರಹ್ಮಣಿಯನ್ ನೀಡಿರುವ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದಾರೆ. ಈ ಕಂಪೆನಿ ಮಾಲೀಕರು ತಾವು ಆರಾಮದ ಜೀವನ ಮಾಡಲು, ತಮ್ಮ ಮಕ್ಕಳು ಎಂಜಾಯ್ ಮಾಡಲು, ಹಣ ಗಳಿಸಲು ನಮ್ಮನ್ನು ಹಗಲು ರಾತ್ರಿ ದುಡಿಯಲು ಹೇಳುತ್ತಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Siddaramaiah: ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್

L and T ಸಂಸ್ಥೆಯ ಸಿಬ್ಬಂದಿಯೇ ತಮ್ಮ ಚೇರ್ ಮ್ಯಾನ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ, ನೌಕರರ ಮತ್ತು ಅವರ ಕುಟುಂಬದವರ ಕ್ಷಮೆಯನ್ನು ಸುಬ್ರಹ್ಮಣಿಯನ್ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

Exit mobile version