Quick Delivery
ಕ್ವಿಕ್ ಕಾಮರ್ಸ್ ಬ್ಯುಸಿನೆಸ್ ಗಳು ಸದ್ಯಕ್ಕೆ ಭಾರತದಲ್ಲಿ ನಗರಕ್ಕೊಂದರಂತೆ ತಲೆ ಎತ್ತುತ್ತಿವೆ. ಪರಸ್ಪರರ ಮೇಲೆ ಸ್ಪರ್ಧೆಗೆ ಬಿದ್ದಿರುವ ಈ ಕ್ವಿಕ್ ಕಾಮರ್ಸ್ ಸಂಸ್ಥೆಗಳು, ತಮ್ಮ ಡೆಲಿವರಿ ಬಾಯ್ ಗಳ ಜೀವ ಹಿಂಡಿ ಗ್ರಾಹಕ ಆರ್ಡರ್ ಮಾಡಿದ ವಸ್ತುವನ್ನು ಅತ್ಯಂತ ಕಡಿಮೆ ಸಮಯಕ್ಕೆ ಡೆಲಿವರಿ ಮಾಡಿಸುತ್ತಿವೆ. ಊಟ, ಮೆಡಿಸಿನ್ ಡೆಲಿವರಿ ಬೇಗ ಮಾಡಿದರೆ ಸರಿ, ತ್ವರಿತ ಅವಶ್ಯಕತೆ ಇಲ್ಲದ ವಸ್ತುಗಳನ್ನು ಸಹ ವಿನಾಕಾರಣ ತ್ವರಿತವಾಗಿ ಡೆಲಿವರಿ ಮಾಡುತ್ತಿವೆ. ಆ ಮೂಲಕ ರೂಪಾಯಿಗಳ ಲೆಕ್ಕದಲ್ಲಿ ಕೆಲಸಾಡುವ ಡೆಲಿವರಿ ಬಾಯ್ ಗಳ ಜೀವ ಹಿಂಡುತ್ತಿವೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಘಟನೆಯೊಂದು ನಡೆದಿದೆ. ಬೆಂಗಳೂರಿನ ಸ್ಟಾರ್ ಬಕ್ಸ್ ನಲ್ಲಿ ಕುಳಿತ ವ್ಯಕ್ತಿಯೊಬ್ಬ ದುಬಾರಿ ಲ್ಯಾಪ್ ಟಾಪ್ ಅನ್ನು ಆರ್ಡರ್ ಮಾಡಿದ್ದಾನೆ. ಆ ದುಬಾರಿ ಲ್ಯಾಪ್ ಟಾಪ್ ಕೇವಲ 12 ನಿಮಿಷಕ್ಕೆ ಆತನಿದ್ದ ಸ್ಥಳಕ್ಕೆ ಡೆಲಿವರಿ ಆಗಿದೆ. ಈ ವಿಷಯವನ್ನು ಆತ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾನೆ. ಪೂರ್ಣ ವಿವರ ಇಲ್ಲಿದೆ.
ಜನಪ್ರಿಯ ಕ್ವಿಕ್ ಕಾಮರ್ಸ್ ಸಂಸ್ಥೆಯಾದ ಫ್ಲಿಪ್ ಕಾರ್ಟ್ ಇತ್ತೀಚೆಗಷ್ಟೆ 7 ಮಿನಟ್ಸ್ ಡೆಲಿವರಿ ಹೆಸರಿನ ಹೊಸ ಸೇವೆಯೊಂದನ್ನು ಪರಿಚಯಿಸಿದ್ದಾರೆ. ಈ ಸೇವೆಯ ಅನುಸಾರ ಕೆಲವು ವಸ್ತುಗಳನ್ನು, ಕೆಲವು ನಗರಗಳಲ್ಲಿ ಮತ್ತು ಕೆಲವು ನಿರ್ದಿಷ್ಟ ಏರಿಯಾಗಳಲ್ಲಿ ಕೇವಲ 7 ಬಿಕಿಷದ ಒಳಗೆ ಡೆಲಿವರಿ ನೀಡಲಾಗುತ್ತದೆ.
ಸನ್ನಿ ಆರ್ ಗುಪ್ತಾ ಎಂಬಾತ, ಫ್ಲಿಪ್ ಕಾರ್ಟ್ ನ ಈ ಸೇವೆಯನ್ನು ಪರಿಕ್ಷೆ ಮಾಡಲೆಂದೆ, ಫ್ಲಿಪ್ ಕಾರ್ಟ್ ನ 7 ಮಿನಟ್ಸ್ ಡೆಲಿವರಿ ಸೇವೆ ಲಭ್ಯವಿರುವ ಬೆಂಗಳೂರಿನ ಏರಿಯಾ ಒಂದರ ಸ್ಟಾರ್ ಬಕ್ಸ್ ಕಾಫಿ ಶಾಪ್‌ನಲ್ಲಿ ಕುಳಿತುಕೊಂಡು ಲ್ಯಾಪ್ ಟಾಪ್ ಒಂದನ್ನು ಆರ್ಡರ್ ಮಾಡಿದ್ದಾನೆ. ಆತನ ಆರ್ಡರ್ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾನೆ.
Lorry Driver: ತಿಂಗಳಿಗೆ ಹತ್ತು ಲಕ್ಷ ಗಳಿಸುತ್ತಾರೆ ಈ ಲಾರಿ ಡ್ರೈವರ್
ಆದರೆ ಆರ್ಡರ್ ಮಾಡುತ್ತಿದ್ದಂತೆ, ಡೆಲಿವರಿ ತುಸು ತಡವಾಗುತ್ತದೆ ಎಂದು ಫ್ಲಿಪ್ ಕಾರ್ಟ್ ಅಪ್ಲಿಕೇಶನ್ ತೋರಿಸಿದೆ. ‘ನೀವು ಆರ್ಡರ್ ಮಾಡಿರುವ ವಸ್ತು 7 ನಿಮಿಷಕ್ಕೆ ಬದಲಾಗಿ 12 ನಿಮಿಷದಲ್ಲಿ ಬರಲಿದೆ’ ಎಂದಿದೆ. ಆಗಲೂ ಪಾಪ ಸನ್ನಿ ಗುಪ್ತಾಗೆ ನಂಬಿಕೆ ಬಂದಿಲ್ಲ. ಆದರೆ ಆರ್ಡರ್ ಮಾಡಿದ 11 ನಿಮಿಷದ ಬಳಿಕ ಡೆಲಿವರಿಯವನ ಕರೆ ಬಂದಿದೆ. 12 ನಿಮಿಷಕ್ಕೆ ಆತನ ಬಂದು ಲ್ಯಾಪ್ ಟಾಪ್ ಡೆಲಿವರಿ ನೀಡಿದ್ದಾನೆ. ಓಟಿಪಿ ವಿನಿಮಯ ಇನ್ನಿತರೆಗಳೆಲ್ಲ ಇನ್ನೊಂದು ನಿಮಿಷದಲ್ಲಿ ಮುಗಿದಿವೆ. ಆ ನಂತರ ಆರ್ಡರ್ ಮಾಡಿದ ಲ್ಯಾಪ್ ಟಾಪ್ ಬಾಕ್ಸ್ ಅನ್ನು ತೆರೆದು ತೋರಿಸಿದ್ದಾರೆ ಸನ್ನಿ ಗುಪ್ತಾ.
ಸನ್ನಿ ಗುಪ್ತಾರ ಟ್ವೀಟ್ ವೈರಲ್ ಆಗುತ್ತಿದ್ದಂತೆ. ನೆಟ್ಟಿಗರು ತರಹೇವಾರಿ ಕಮೆಂಟ್ ಗಳನ್ನು ಹರಿಬಿಟ್ಟಿದ್ದಾರೆ. ಜೀವ ಉಳಿಸುವ ಆಂಬುಲೆನ್ಸ್ ಗಳು ಇಷ್ಟು ವೇಗವಾಗಿ ಬೆಂಗಳೂರಿನಲ್ಲಿ ಬರುವುದಿಲ್ಲ ಎಂಬ ಅಭಿಪ್ರಾಯ ಸಹ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ. ಅಂದಹಾಗೆ ಬೆಂಗಳೂರಿನಲ್ಲಿ ಕರೆ ಮಾಡಿದ ಬಳಿಕ ಆಂಬುಲೆನ್ಸ್ ಬರುವ ಸರಾಸರಿ ಸಮಯ 25-30 ನಿಮಿಷ ಎನ್ನಲಾಗುತ್ತದೆ.