Sadhguru
ನಿದ್ದೆಯ ಬಗ್ಗೆ ಸದ್ಗುರು ಸಾಕಷ್ಟು ಮಾತನಾಡಿದ್ದಾರೆ. ಹೇಗೆ ಮಲಗಬೇಕು, ಯಾವ ದಿಕ್ಕಿಗೆ ಮಲಗಬೇಕು, ಮಲಗುವಾಗ ಯಾವ ಭುಜ ಮೇಲೆ ಮಾಡಬೇಕು, ದಿನದ ಯಾವ ಹೊತ್ತಿನಲ್ಲಿ ಮಲಗಬೇಕು, ಮಲಗುವ ಮುನ್ನ ಸ್ನಾನ ಮಾಡಬೇಕೆ ಬೇಡವೆ ಇನ್ನೂ ಹಲವು ವಿಷಯಗಳನ್ನು ಸದ್ಗುರು ವಿವರಿಸಿದ್ದಾರೆ. ಇದೀಗ ಮಲಗುವ ಮುಂಚೆ ಮಾಡಬೇಕಾದ ಪ್ರಮುಖವಾದ ವಿಷಯವೊಂದನ್ನು ಸದ್ಗುರು ತಮ್ಮ ಇತ್ತೀಚೆಗಿನ ಪ್ರವಚನದಲ್ಲಿ ಹೇಳಿದ್ದಾರೆ.
ಸದ್ಗುರು ಹೇಳುವಂತೆ, ಬೆಂಕಿ, ಗಾಳಿ, ನೀರು, ಭೂಮಿ, ಆಕಾಶ ಇವುಗಳು ವಿಶ್ವದ ಪ್ರಮುಖ ಶಕ್ತಿ ಮೂಲಗಳು. ಇವುಗಳಲ್ಲಿ ಬೆಂಕಿ ಅತ್ಯಂತ ಮಹತ್ವದ್ದು ಮತ್ತು ಪ್ರಮುಖವಾದುದು. ಬೆಂಕಿ ಜೀವವನ್ನು ಪ್ರತಿನಿಧಿಸುತ್ತದೆ. ಬೆಂಕಿ ಮನುಷ್ಯನನ್ನು ಕತ್ತಲಿನಿಂದ ಬೆಳಕಿನೆಡೆಗೆ ಕರೆದೊಯ್ಯುತ್ತದೆ. ಬೆಂಕಿಗೆ ಇರುವ ಶಕ್ತಿಯೆಂದರೆ ಅದು ಬೆಳೆಯಬಲ್ಲದು, ನಾಶವನ್ನು ಮಾಡಬಲ್ಲದು, ಜೀವ ನೀಡಬಲ್ಲದು, ರೂಪ ಬದಲಿಸಬಲ್ಲದು, ಅಚಲವಾಗಿ ನಿಲ್ಲಬಲ್ಲದು ಹಾಗಾಗಿ ಬೆಂಕಿಗೆ ಇಷ್ಟು ಮಹತ್ತರ ಸ್ಥಾನ ಇದೆ.
ಬೆಂಕಿ ಋಣಾತ್ಮಕತೆಯನ್ನು ಹೋಗಲಾಡಿಸುತ್ತದೆ, ಹಾಗಾಗಿ ಹೋಮ, ಹವನಗಳಲ್ಲಿ ಬೆಂಕಿಗೆ ಹೆಚ್ಚು ಪ್ರಾಧಾನ್ಯತೆ ಇದೆ. ಇದೇ ಕಾರಣಕ್ಕೆ ದೇವಾಲಯಗಳಲ್ಲಿ ಹಣತೆಗಳನ್ನು ಹಚ್ಚಲಾಗುತ್ತದೆ. ಹಿಂದಿನ ಕಾಲದಲ್ಲಿ ಮನೆಯಲ್ಲಿ ಸಹ ಹಣತೆಗಳನ್ನು ಸದಾ ಉರಿಸಲಾಗುತ್ತಿತ್ತು. ಮಲಗಿರುವಾಗಲೂ ಸಹ ಹಣತೆ ಉರಿಯುತ್ತಿರುವಂತೆ ನೋಡಿಕೊಳ್ಳಲಾಗುತ್ತಿತ್ತು.
ಆದರೆ ಈಗ ಎಲ್ಲರ ಮನೆಗೆ ಬೆಡ್ ಲ್ಯಾಂಪ್’ಗಳು ಬಂದಿವೆ ಹಾಗಾಗಿ ಯಾರೂ ಸಹ ಮನೆಯಲ್ಲಿ ರಾತ್ರಿ ಹೊತ್ತು ಹಣತೆ ಉರಿಸುವುದೇ ಇಲ್ಲ. ಆದರೆ ಸದ್ಗುರು ಹೇಳುವಂತೆ ರಾತ್ರಿ ಮಲಗುವಾಗ ಹಣತೆಯೊಂದನ್ನು ಹಚ್ಚಿ ಮಲಗಿಗೊಳ್ಳ ಬೇಕಂತೆ. ಇದರಿಂದ ಜೀವವೊಂದು ನಿಮ್ಮ ಸಮೀಪವೇ ಇದ್ದಂತಾಗುತ್ತದೆ. ನೀವು ಮಲಗಿರುವ ಕೋಣೆಯಲ್ಲಿನ ಋಣಾತ್ಮಕತೆಯನ್ನು ಆ ಹಣತೆ ಸುಟ್ಟು ಹಾಕುತ್ತದೆ. ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ, ಮಲಗಿರುವಾಗ ಕೆಟ್ಟ ಕನಸುಗಳು ಬೀಳದಂತೆ ಕಾಪಾಡುತ್ತದೆ. ನೀವು ಮುಂಜಾನೆ ಏಳುವಾಗ ಸುಸ್ತು ರಹಿತವಾಗಿ ಉತ್ಸಾಹಪೂರ್ಣವಾಗಿ ಏಳುವಂತೆ ಇದು ಮಾಡುತ್ತದೆಯಂತೆ.
Youtube: ವಿಲೇಜ್ ಕುಕಿಂಗ್ ಚಾನೆಲ್’ನ ತಿಂಗಳ ಆದಾಯ ಎಷ್ಟು ಲಕ್ಷ ಗೊತ್ತೆ?
ಆದರೆ ಹಣತೆ ಹಚ್ಚಬೇಕಾದರೆ ಎಚ್ಚರಿಕೆಯಿಂದ ಹಚ್ಚಬೇಕು. ಹಣತೆಗೆ ಯಾವುದೇ ಬಟ್ಟೆ ಸೋಕದಂತೆ, ಹಣತೆ ಬಿದ್ದು ಬೆಂಕಿ ಹರಡದಂತೆ, ಕಿಟಕಿಯ ಕರ್ಟನ್’ಗಳು ಹಾರಿ ಬಂದು ಹಣತೆಗೆ ತಾಗದಂತೆ ಎಚ್ಚರಿಕೆಯಿಂದ ಹಣತೆಯನ್ನು ಹಚ್ಚಿದರೆ ಅಪಾಯ ಕಡಿಮೆ ಆಗುತ್ತದೆ.