Site icon Samastha News

Beers: ಭಾರತದಲ್ಲಿ ಮಾರಾಟವಾಗುತ್ತಿರುವ ಈ ಬಿಯರ್ ಗಳ ಬಗ್ಗೆ ನಿಮಗೆ ಗೊತ್ತೆ?

Beers

Beers

ಅತಿ ಹೆಚ್ಚು ಮದ್ಯ ಮಾರಾಟವಾಗುವ ದೇಶಗಳಲ್ಲಿ ಭಾರತವೂ ಒಂದು. ರಷ್ಯಾ, ಜರ್ಮನಿ ಇನ್ನೂ ಕೆಲವು ದೇಶಗಳಂತೆ ಕುಡಿತ ಸಂಸ್ಕೃತಿಯ ಭಾಗವಲ್ಲದಿದ್ದರೂ ಸಹ ದೊಡ್ಡ ಜನಸಂಖ್ಯೆ ಹೊಂದಿರುವ ಕಾರಣ ಹೆಚ್ಚಿನ ಮದ್ಯ ಭಾರತದಲ್ಲಿ ಮಾರಾಟವಾಗುತ್ತದೆ. ಭಾರತೀಯರ ಮೆಚ್ಚಿನ ಮದ್ಯವೆಂದರೆ ಅದು ಬಿಯರ್ ಮತ್ತು ವಿಸ್ಕಿ. ಅದರಲ್ಲೂ ಬಿಯರ್ ಮೇಲೆ ಭಾರತೀಯರಿಗೆ ಎಲ್ಲಿಲ್ಲದ ಪ್ರೀತಿ. ಅಂದಹಾಗೆ ಭಾರತದಲ್ಲಿ ಕಿಂಗ್ ಫಿಷರ್, ಬಡ್ ವೈಸರ್, ಟುಬರ್ಗ್ ಇನ್ನು ಕೆಲವೇ ಬಿಯರ್ ಗಳನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ಆದರೆ ಭಾರತದಲ್ಲಿ ಇನ್ನೂ ಹಲವಾರು ಉತ್ತಮ ದರ್ಜೆಯ ಬಿಯರ್ ಗಳು ಮಾರಾಟವಾಗುತ್ತಿವೆ. ಮಾಹಿಗಾಗಿ ಪೂರ್ಣ ಓದಿ.

ಸಿಂಭಾ


ಸಿಂಭಾ ಬಿಯರ್ ಭಾರತದ್ದೇ ಬ್ರ್ಯಾಂಡ್ ಭಾಟಿಯಾ ಬ್ರದರ್ಸ್ 2016 ರಲ್ಲಿ ಈ ಬಿಯರ್ ಕಂಪೆನಿ ತೆರೆದರು. ಇನ್ ಹೌಸ್ ಬ್ರುವರಿಗಳಲ್ಲಿ ಈ ಬಿಯರ್ ಮಾಡಲಾಗುತ್ತದೆ. ಇತರೆ ಬಿಯರ್ ಗಳಿಗಿಂತಲೂ ಬಣ್ಣದಲ್ಲಿ, ರುಚಿಯಲ್ಲಿ ಭಿನ್ನವಾಗಿದೆ ಈ ಬಿಯರ್.

ಬ್ಯಾಡ್ ಮಂಕಿ


ಬ್ಯಾಡ್ ಮಂಕಿ ಬಿಯರ್ ಇತ್ತೀಚೆಗೆ ಉತ್ತರ ಭಾರತದಲ್ಲಿ ತುಸು ಜನಪ್ರಿಯವಾಗುತ್ತಿದೆ. 2018 ರಲ್ಲಿ ಪ್ರಭವಾದ ಈ ಬಿಯರ್ ಬ್ರ್ಯಾಂಡ್ ಪ್ರಾರಂಭದಲ್ಲಿ ಮಾಡಿದ್ದು ಕೇವಲ 1 ಲಕ್ಷ ಬಿಯರ್ ಬಾಟಲಿಗಳನ್ನಷ್ಟೆ ಈಗ 10, ಲಕ್ಷ ಬಾಟಲಿಗಳನ್ನು ಮಾರುತ್ತಿದೆ.

ರುಪೀ ಬಿಯರ್


ಭಾರತೀಯ ರೂಪಾಯಿಯ ಚಿಹ್ನೆ ಹೊಂದಿರುವ ರುಪೀ ಬಿಯರ್ ಭಾರತದ್ದೆ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ. ವನಿತಾ ಹಾಗೂ ಸುಮಿತ್ ಎಂಬುವರು ಆರಂಭಿಸಿದ ಈ ಸಂಸ್ಥೆ ಈಗ ಗ್ಲೋಬಲ್ ಮಾರುಕಟ್ಟೆಗೆ ಕಾಲಿಡಲಿದೆ. ಈ ಬಿಯರ್ ಭಾರತದ 14 ರಾಜ್ಯಗಳಲ್ಲಿ ಲಭ್ಯವಿದೆ.

ಬಿಒ ಯಂಗ್


ಬೀ ಯಂಗ್ ಬಿಯರ್ ತುಸು ಜನಪ್ರಿಯ ಬಿಯರ್ ಎನ್ನಬಹುದು. ಹಳದಿ ಬಣ್ಣದ ಪ್ಯಾಕಿಂಗ್ ನಿಂದ ಗಮನ ಸೆಳೆವ ಇದು, ತನ್ನ ಭಿನ್ನ ರುಚಿಯಿಂದಲೂ ಗಮನ ಸೆಳೆದಿರುವ ಬಿಯರ್. 2019 ರಲ್ಲಿ ಆರಂಭವಾದ ಈ ಬಿಯರ್ ಒಳ್ಳೆಯ ಮಾರುಕಟ್ಟೆ ಕಂಡುಕೊಂಡಿದೆ.

ಸಿಕ್ಸ್ ಫೀಲ್ಡ್


ದೇವಾನ್ಸ್ ಮಾಡರ್ನ್ ಬ್ರುವರಿ ಅವರಿ ನಿರ್ಮಿಸುವ ಸಿಲ್ಸ್ ಫೀಲ್ಡ್ ಬಿಯರ್ ಸಹ ಇತ್ತೀಚೆಗೆ ಗಮನ ಸೆಳೆಯುತ್ತಿದೆ. ಪ್ರಸ್ತುತ ಉತ್ತರ ಭಾರತದ ರಾಜ್ಯಗಳಲ್ಲಿ ಮಾತ್ರವೇ ಹೆಚ್ಚು ಪ್ರಸಿದ್ಧವಾಗಿರುವ ಈ ಬ್ರ್ಯಾಂಡ್ ದಕ್ಷಿಣಕ್ಕೂ ಕಾಲಿಡಲಿದೆ.

Ramanagara District: ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಬದಲಾಯ್ತು ರಾಮನಗರ, ಹೆಸರು ಬದಲಾವಣೆಗೆ ಕಾರಣವೇನು?

ಫೋರ್ಟ್ ಸಿಟಿ


2023 ರಲ್ಲಿ ಪ್ರಾರಂಭವಾಗಿರುವ ಫೋರ್ಟ್ ಸಿಟಿ ಬಿಯರ್, ಭಾರತದ ರಾಯಲ್ ಬಿಯರ್ ಗಳ ಸಾಲಿಗೆ ಬರುತ್ತದೆ. ಹೈದರಾಬಾದ್ ಹಾಗೂ ದೆಹಲೊಯಲ್ಲಿ ತಯಾರಾಗುವ ಈ ಬಿಯರ್ ದಕ್ಷಿಣ ಭಾರತದಲ್ಲಿ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿದೆ.

ಇನ್ನೂ ಕೆಲವು ಬಿಯರ್ ಗಳು
ಕೊರೊನಾ, ಹಂಟರ್, ಎಲಿಫೆಂಟ್, ಲಯನ್, ಬೀರ 91.

 

 

Exit mobile version