Site icon Samastha News

Luxurious Hotel: ವಿಮಾನ ನಿಲ್ದಾಣದ ಬಳಿ ನಿರ್ಮಾಣವಾಗಲಿದೆ ಬೃಹತ್ ಬ್ಯುಸಿನೆಸ್ ಪಾರ್ಕ್, ಏನೇನಿರಲಿದೆ ಈ ಅತ್ಯಾಧುನಿಕ ಸಿಟಿಯಲ್ಲಿ

Luxurious Hotel

Luxurious Hotel

ಬೆಂಗಳೂರಿನ ಹೊರವಲಯದಲ್ಲಿರುವ ದೇವನಹಳ್ಳಿ ಬಳಿಯ ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ಅತ್ಯಾಧುನಿಕ, ಸುಸಜ್ಜಿತ ಬ್ಯುಸಿನಸ್ ಪಾರ್ಕ್, ಹೋಟೆಲ್ ನಿರ್ಮಾಣವಾಗಲಿದ್ದು, ಅತ್ಯಾಧುನಿಕ ಸವಲತ್ತುಗಳನ್ನು ಈ ಬೃಹತ್ ಏರ್ಪೋರ್ಟ್ ಸಿಟಿ ಹೊಂದಿರಲಿದ್ದು, ಬೆಂಗಳೂರಿನ ಹಲವು ಉದ್ಯಮಪತಿಗಳನ್ನು ತನ್ನತ್ತ ಸೆಳೆಯಲಿದೆ.

20 ಲಕ್ಷ ಸ್ವೇರ್ ಫೀಟ್ ನ ದೊಡ್ಡ ಬ್ಯುಸಿನೆಸ್ ಪಾರ್ಕ್ ನಿರ್ಮಾಣಕ್ಕೆ ನೀಲ ನಕ್ಷೆಯನ್ನು ಕಳೆದ ಶುಕ್ರವಾರವಷ್ಟೆ ಬಿಡುಗಡೆ ಮಾಡಲಾಗಿದ್ದು, ಹೂಡಿಕೆದಾರರನ್ನು ಆಹ್ವಾನಿಸಲಾಗಿದೆ. ವಿಮಾನ‌ ನಿಲ್ದಾಣದ ಸಮೀಪವೇ ಅತಿ ದೊಡ್ಡ ಐಶಾರಾಮಿ ಹೋಟೆಲ್ ನಿರ್ಮಾಣಕ್ಕೂ ನೀಲ ನಕ್ಷೆ ತಯಾರಾಗಿದೆ. ಇದಕ್ಕೂ ಸಹ ಹೂಡಿಕೆದಾರರೊಗೆ ಆಹ್ವಾನ ನೀಡಲಾಗಿದೆ.

ಬಿಎಸಿಎಲ್ (ಬೆಂಗಳೂರು ಏರ್ಪೋರ್ಟ್ ಸಿಟಿ ಲಿಮಿಟೆಡ್) ಈ ಪ್ರಾಜೆಕ್ಟ್ ನ ಮೇಲುಸ್ತುವಾರಿ ವಹಿಸಿದೆ. ಸುಸ್ಥಿರ ಅಭಿವೃದ್ಧಿ, ತಂತ್ರಜ್ಞಾನ, ಹಸಿರು ಶಕ್ತಿ ಬಳಕೆ, ಸುಗಮ ಸಂಚಾರ ಇವುಗಳನ್ನು ಆದ್ಯತೆಯಾಗಿಟ್ಟುಕೊಂಡು ಏರ್ಪೋರ್ಟ್ ಸಿಟಿ ನಿರ್ಮಾಣ ಮಾಡಲಾಗುತ್ತಿದೆ ಎಂದಿದೆ ಬಿಎಸಿಎಲ್.  ಈ ಪ್ರಾಜೆಕ್ಟ್ ನ ಕೇಂದ್ರ ಬಿಂದುವೆಂದರೆ ‘ನಗರ ಅರಣ್ಯ’ ಎಂದಿದೆ ಬಿಎಸಿಎಲ್. ಏರ್ಪೋರ್ಟ್ ಸಿಟಿಯ ಹೊರಗು ಹಾಗೂ ಒಳಗೂ ಸಹ ಹಸಿರು ಉಸಿರಾಡುವಂತೆ ವಿನ್ಯಾಸ ಮಾಡಲಾಗುತ್ತಿದೆ ಎಂದಿದೆ ಬಿಎಸಿಎಲ್.

ಬೆಂಗಳೂರಿನಲ್ಲಿ ಭೇಟಿ ನೀಡಲೇ ಬೇಕಾದ ಎಂಟು ಸ್ಥಳಗಳು ಇವು

ಏರ್ಪೊರ್ಟ್ ಗೆ ಬರುತ್ತಿರುವ ಮೆಟ್ರೋ ವಿಮಾನ‌ನಿಲ್ದಾಣ ಹಾಗೂ ಏರ್ಪೋರ್ಟ್ ಸಿಟಿಗೆ ಅನಿಯಮಿತ ಸಂಪರ್ಕವನ್ನು ಬೆಂಗಳೂರು ಹಾಗೂ ಇತರೆ ಭಾಗಗಳಿಂದ ನೀಡುತ್ತಿರುತ್ತದೆ. ಏರ್ಪೋರ್ಟ್ ಸಿಟಿಯನ್ನು ಅವಕಾಶಗಳ ಆಗಾರವಾದ ಬ್ಯುಸಿನೆಸ್ ಪಾರ್ಕ್,  ಬ್ಯುಸಿನೆಸ್ ರಿಸರ್ಚ್ ಸೆಂಟರ್, ಗ್ಲೋಬಲ್ ಕ್ಯಾಪ್ಯಾಸಿಟಿ ಸೆಂಟರ್ ಆಗಿ ಮಾಡುವುದು ಹಾಗೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವುದು ನಮ್ಮ ಉದ್ದೇಶ ಎಂದಿದೆ ಬಿಎಸಿಎಲ್.

Exit mobile version