Year 2025
ಹೊಸ ವರ್ಷ ಬಂದೇ ಬಿಟ್ಟಿದೆ. 2024 ಕ್ಕೆ ಬೈ ಹೇಳಿದ್ದಾಗಿದೆ. ವರ್ಷದಿಂದ ವರ್ಷಕ್ಕೆ ನಾವು ಎಷ್ಟು ಪ್ರಗತಿ ಸಾಧಿಸಿದೆವು ಎಂದರೆ ಬಹುತೇಕರ ಬಳಿ ಉತ್ತರವೇ ಇಲ್ಲ. 2024 ರ ಆರಂಭದಲ್ಲಿ ಹೇಗಿದ್ದೆವೊ, 2025 ರ ಆರಂಭದಲ್ಲೂ ಹಾಗೆಯೇ ಇದ್ದೀವಿ. ಆದರೆ ಇದು ಜೀವನ ಅಲ್ಲ. ನೆನಪಿರಲಿ ನಿಂತ ನೀರು ಕೊಳಕಾಗುತ್ತದೆ. ವ್ಯಕ್ತಿ ಎಂದರೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಹೋಗಬೇಕು. ಈ ಹೊಸ ವರ್ಷದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಿ ನಿಮ್ಮ ಜೀವನ ತಾನಾಗೆ ಬದಲಾಗುವುದನ್ನು ಗಮನಿಸಿ.
ವೃತಾ ಕಾಲಹರಣಕ್ಕೆ ನೋ ಹೇಳಿ
ಪ್ರಪಂಚದಲ್ಲೇ ಅತ್ಯಂತ ದುಬಾರಿಯಾದುದು ಸಮಯ. ಅದು ಹೋದರೆ ಮತ್ತೆ ಬರುವುದಿಲ್ಲ, ಹಾಗಾಗಿ ವೃತಾ ಸಮಯ ಹಾಳು ಮಾಡುವ ಯಾವುದೇ ಅಭ್ಯಾಸ ಅಥವಾ ಕೆಟ್ಟ ಗೆಳೆಯರ ಕೂಟ ಇದ್ದರೆ ಅದಕ್ಕೆ ನೋ ಹೇಳಿ. ಅತಿಯಾಗಿ ರೀಲ್ಸ್ ನೋಡುವ ಹುಚ್ಚಿದ್ದರೆ ಮೊದಲು ಅದನ್ನು ತ್ಯಜಿಸಿ.
ಹೊಸತು ಕಲಿಯಿರಿ
ಯಾವುದಾದರೂ ಒಂದು ಹೊಸ ವಿದ್ಯೆ ಅಥವಾ ಕೌಶಲ ಕಲಿಯಿರಿ. ಈಗ ನೀವಿರುವ ವೃತ್ತಿಯಲ್ಲಿ ಬಡ್ತಿ ಸಿಗುವ ಯಾವುದಾದರೂ ಕೋರ್ಸ್ ಗಳಿದ್ದರೆ ಅದನ್ನು ಮಾಡಿ. ಎಐ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಸಾಕಷ್ಟು ಚರ್ಚೆಯಲ್ಲಿದೆ ಅದರ ಬಗ್ಗೆ ತಿಳಿದುಕೊಳ್ಳಿ.
ಹಣ ಉಳಿಸಬೇಡಿ ಹೂಡಿಕೆ ಮಾಡಿ
ಹಣ ಉಳಿಸಲು ಯತ್ನಿಸಬೇಡಿ, ಅದನ್ನು ಹೂಡಿಕೆ ಮಾಡಿ. (ಹೂಡಿಕೆ ಮಾಡುವ ಮುನ್ನ ಎಚ್ಚರಿಕೆಯಿಂದ ಮಾಡಿ). ನಿಮ್ಮ ದಿನ ನಿತ್ಯದ ಅಥವಾ ತಿಂಗಳ ಖರ್ಚು ಕಳೆದ ಬಳಿಕ ಉಳಿವ ಹಣವನ್ನು ಸರಿಯಾದ ಜಾಗದಲ್ಲಿ ಹೂಡಿಕೆ ಮಾಡಿ.
ಓದುವ ಅಭ್ಯಾಸ ರೂಡಿಸಿಕೊಳ್ಳಿ
ಪ್ರಪಚದಲ್ಲಿ ಯಶಸ್ವಿಯಾಗಿರುವ ಯಾವುದೇ ವ್ಯಕ್ತಿಯನ್ನು ಕೇಳಿ ಆತ ಒಳ್ಳೆಯ ಓದುಗನಾಗಿರುತ್ತಾನೆ. ಆರಂಭದಲ್ಲಿ ನಿಮಗೆ ಇಷ್ಟವಾಗುವಂಥಹಾ ಪುಸ್ತಕಗಳನ್ನೇ ಓದಿ, ಓದನ್ನು ಹಂತ ಹಂತವಾಗಿ ವಿಸ್ತರಿಸಿಕೊಳ್ಳಿ. ಹಣ-ಹೂಡಿಕೆಗೆ ಸಂಬಂಧಿಸಿದ ಕೆಲವು ಅತ್ಯುತ್ತಮ ಪುಸ್ತಕಗಳಿವೆ ಅವನ್ನು ಓದಿ, ಜ್ಞಾನ ಹೆಚ್ಚಿಸಿಕೊಳ್ಳಿ.
Solar: ಈಗಲೇ ಸೋಲಾರ್ ಹಾಕಿಸಿ, ಜೇಬು ತುಂಬ ಹಣ ಉಳಿಸಿ, ಹಣ ಗಳಿಸಿ
ಗುರಿ ಸೆಟ್ ಮಾಡಿಕೊಳ್ಳಿ
ಈ ವರ್ಷ ಯಾವುದಾದರೂ ಗುರಿ ಹಾಕಿಕೊಳ್ಳಿ. ಆ ಗುರಿ ಈಡೇರಿಸಲು ಶ್ರಮ ಪಡಿ. ಇಷ್ಟು ಹಣ ಉಳಿಸುತ್ತೇನೆ ಅಥವಾ ಈ ವರ್ಷ 20 ಪುಸ್ತಕ ಓದುತ್ತೇನೆ. ಈ ವರ್ಷ ಇಂಥಹಾ ಕೋರ್ಸ್ ಪೂರ್ಣ ಮಾಡುತ್ತೇನೆ. ಈ ವರ್ಷ ವೃತ್ತಿಯಲ್ಲಿ ಬಡ್ತಿ ಪಡೆಯುತ್ತೇನೆ. ಈ ವರ್ಷ ದೈಹಿಕ ಆರೋಗ್ಯ ಅತ್ಯುತ್ತಮಗೊಳಿಸಿ ಕೊಳ್ಳುತ್ತೇನೆ. ಗುರಿ ಸೆಟ್ ಮಾಡಿಕೊಳ್ಳುವಾಗ ಅಸಾಧ್ಯವಾದ ಗುರಿ ಹಾಕಿಕೊಳ್ಳಬೇಡಿ.