Darshan Case: ದರ್ಶನ್ ಪ್ರಕರಣದಲ್ಲಿ ಮಹತ್ತರ ವಿಷಯ ಬಹಿರಂಗ, ಪೊಲೀಸರು ಸುಳ್ಳು ಹೇಳಿದರೆ?

0
115
Darshan Case

Darshan Case

ರೇಣುಕಾ ಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ನಾಲ್ಕು ತಿಂಗಳಾಗುತ್ತಾ ಬಂದಿದೆ. ಬಳ್ಳಾರಿ ಜೈಲಿನಲ್ಲಿ ಬಂಧಿಯಾಗಿರುವ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ನಿನ್ನೆಯಷ್ಟೆ ದರ್ಶನ್ ಪರ ವಕೀಲ ಸಿವಿ ನಾಗೇಶ್ ನ್ಯಾಯಾಲಯದಲ್ಲಿ ಸುದೀರ್ಘ ವಾದ ಮಂಡಿಸಿದ್ದಾರೆ. ವಾದ ಮಂಡಿಸುವ ವೇಳೆ ನಾಗೇಶ್ ಅವರು ಹಲವು ಪ್ರಮುಖ ಅಂಶಗಳನ್ನು ನ್ಯಾಯಾಲಯದ ಮುಂದಿಟ್ಟಿದ್ದಾರೆ. ಕೆಲವಂತೂ ಅಚ್ಚರಿಯ ಅಂಶಗಳು ಹೊರಗೆ ಬಂದಿವೆ. ಪ್ರಕರಣದಲ್ಲಿ ಪೊಲೀಸರು ಸುಳ್ಳು ಹೇಳಿದ್ದಾರೆಯೇ ಎಂಬ ಅನುಮಾನವೂ ಮೂಡುವಂತಿದೆ.

ಆರೋಪ ಪಟ್ಟಿ, ಮಹಜರು ಹಾಗೂ ಸಾಕ್ಷ್ಯಗಳ ಹೇಳಿಕೆಗಳಲ್ಲಿ ಇರುವ ವೈರುಧ್ಯವನ್ನು ಹಿರಿಯ ವಕೀಲ ಸಿವಿ ನಾಗೇಶ್ ಅವರು ನ್ಯಾಯಾಲಯದ ಗಮನ ಸೆಳೆದರು. ನಾಗೇಶ್ ಅವರ ವಾದದಲ್ಲಿ ಬಹಳ ಪ್ರಮುಖವಾಗಿ ಕಂಡ ಅಂಶವೆಂದರೆ ಜೂನ್ 9 ರಂದೇ ಅಂದರೆ ರೇಣುಕಾ ಸ್ವಾಮಿ ಕೊಲೆ ಆದ ದಿನವೇ ಪೊಲೀಸರು ಪಟ್ಟಣಗೆರೆ ಶೆಡ್​ಗೆ ಭೇಟಿ ನೀಡಿದ್ದರು ಎಂಬುದು!

ಹೌದು, ಈ ವರೆಗೆ ಲಭ್ಯವಿರುವ ಮಾಹಿತಿ ಪ್ರಕಾರ, ಜೂನ್​ 9 ರಂದು ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾ ಸ್ವಾಮಿ ಕೊಲೆ ಆಯ್ತು. ಅದೇ ದಿನ ರಾತ್ರಿ ಹೆಣವನ್ನು ಸುಮನಹಳ್ಳಿ ಮೋರಿಗೆ ಎಸೆಯಲಾಯ್ತು. ಜೂನ್ 10 ರಂದು ತಾವೇ ಕೊಲೆ ಮಾಡಿರುವುದಾಗಿ ಮೂವರು ಹೋಗಿ ಪೊಲೀಸರ ಮುಂದೆ ಶರಣಾದರು. ಜೂನ್ 11 ರಂದು ದರ್ಶನ್, ಪವಿತ್ರಾ ಸೇರಿ ಇತರೆ ಆರೋಪಿಗಳ ಬಂಧನ ಆಯ್ತು. ಮೂವರು ಆರೋಪಿಗಳು ಹೋಗಿ ಪೊಲೀಸರ ಬಳಿ ಶರಣಾಗಿ ಅವರ ವಿಚಾರಣೆ ನಡೆಸಿದ ಬಳಿಕವಷ್ಟೆ ಈ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿರುವುದು ಗೊತ್ತಾಯ್ತು ಎಂಬುದು ಈವರೆಗೆ ಗೊತ್ತಿದ್ದ ಮಾಹಿತಿ, ಆದರೆ ರೇಣುಕಾ ಸ್ವಾಮಿ ಕೊಲೆಯಾದ ದಿನವೇ ಪೊಲೀಸರು ಪಟ್ಟಣಗೆರೆ ಶೆಡ್​ಗೆ ಭೇಟಿ ನೀಡಿದ್ದರು ಎಂದು ನಿನ್ನೆಯ ವಾದದಲ್ಲಿ ಸಿವಿ ನಾಗೇಶ್ ಹೇಳಿದರು.

Darshan: ದರ್ಶನ್ ಈಗಲೇ ಜಾಮೀನು ಸಲ್ಲಿಸಯವುದಿಲ್ಲ, ಏಕೆ?

ರೇಣುಕಾ ಸ್ವಾಮಿ ಕೊಲೆ ನಡೆದ ದಿನವೇ ಆರೋಪಿಗಳಲ್ಲಿ ಒಬ್ಬರು ಸ್ಥಳೀಯ ಪೊಲೀಸ್ ಒಬ್ಬರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಅಲ್ಲದೆ ಪೊಲೀಸರೊಟ್ಟಿಗೆ ಸತತ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಪೊಲೀಸರಿಗೆ ಕೊಲೆ ನಡೆದ ದಿನವೇ ಮಾಹಿತಿ ಗೊತ್ತಾಗಿತ್ತು, ಕೆಲವು ದೊಡ್ಡ ವ್ಯಕ್ತಿಗಳೇ ಕೊಲೆಯಲ್ಲಿ ಶಾಮೀಲಾಗಿರುವುದು ಸಹ ಗೊತ್ತಿತ್ತು, ಪೊಲೀಸರು ಷೆಡ್​ಗೆ ಸಹ ಭೇಟಿ ನೀಡಿದ್ದರು ಎಂದಮೇಲೆ ಎರಡು ದಿನ ತಡವಾಗಿ ದರ್ಶನ್ ಅನ್ನು ಬಂಧಿಸಿದ್ದು ಏಕೆ? ತಡ ಮಾಡಲು ಕಾರಣವೇನು? ಪೊಲೀಸರ ಉದ್ದೇಶ ಏನಾಗಿತ್ತು? ಅಲ್ಲದೆ ದರ್ಶನ್​ಗೆ ಸಂಬಂಧಿಸಿದ ಬಟ್ಟೆ ಹಾಗೂ ಶೂಗಳನ್ನು ವಶಪಡಿಸಿಕೊಂಡಿರುವ ವಿಷಯದಲ್ಲಿಯೂ ಸಹ ಸಿವಿ ನಾಗೇಶ್ ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸರು ಸಾಕ್ಷ್ಯಗಳನ್ನು ಸೃಷ್ಟಿಸಿದ್ದಾರೆ ಎಂದು ರೋಪಿಸಿದ್ದಾರೆ. ಇಂದು ಮಧ್ಯಾಹ್ನ ವಿಚಾರಣೆ ಇದ್ದು, ಇಂದು ಯಾವ ಯಾವ ಅಂಶಗಳು ಹೊರಬರುತ್ತವೆ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here