Martin Kannada Movie: ‘ಮಾರ್ಟಿನ್’ ಸಿನಿಮಾ ನಿರ್ಮಾಪಕರಿಂದ ದೂರು, ನಿರ್ದೇಶಕನಿಂದ ಲಕ್ಷಾಂತರ ಹಣ ವಂಚನೆ ಆರೋಪ

0
118
Martin
Martin Movie

Martin Kannada Movie

ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಸೆಟ್ಟೇರಿ ಸುಮಾರು ಐದು ವರ್ಷಗಳೇ ಕಳೆದಿವೆ. ಸಿನಿಮಾ ತಯಾರಾಗಿಯೂ ಹಲವು ವರ್ಷಗಳೇ ಆಗಿವೆ. ಆದರೆ ಇತ್ತೀಚೆಗಷ್ಟೆ ಸಿನಿಮಾದ ಘೋಷಣೆ ಮಾಡಲಾಗಿದೆ‌. ‘ಮಾರ್ಟಿನ್’ ಸಿನಿಮಾ ತಂಡದಲ್ಲಿ ಭಿನ್ನಾಭಿಪ್ರಾಯ ಮೂಡಿರುವುದಾಗಿ ಈ ಹಿಂದೆಯೇ ವರದಿಗಳು ಪ್ರಕಟವಾಗಿದ್ದವು ಆದರೆ ಆ ವರದಿಗಳನ್ನು ಚಿತ್ರತಂಡ ಅಲ್ಲಗಳೆದಿತ್ತು. ಆದರೆ ಈಗ ಕೊನೆಗೂ ಭಿನ್ನಾಭಿಪ್ರಾಯದ ಸುದ್ದಿ ಅಧಿಕೃತವಾಗಿ ಹೊರಬಿದ್ದಿದೆ. ಸಿನಿಮಾದ ನಿರ್ಮಾಪಕ ಉದಯ್‌ ಮೆಹ್ತಾ, ಸಿನಿಮಾದ ನಿರ್ದೇಶಕ ಎಪಿ ಅರ್ಜುನ್ ವಿರುದ್ಧ ವಂಚನೆ ಆರೋಪ ಮಾಡಿದ್ದಾರೆ.

Martin

 

ನಿರ್ಮಾಪಕ ಉದಯ್‌ ಮೆಹ್ತಾ, ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನ ಪ್ರಕಾರ, ‘ಮಾರ್ಟಿನ್’ ಸಿನಿಮಾದ ಸಿಜಿ, ಗ್ರಾಫಿಕ್ಸ್ ಕೆಲಸಗಳನ್ನು ಮಾಡಲು ಡಿಜಿಟಲ್ ಟೆರೇನ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರಂತೆ. ಈ ಸಂಸ್ಥೆಯ ಸತ್ಯ ರೆಡ್ಡಿ ಮತ್ತು ಸುನಿಲ್ ಹಾಗೂ ಇತರರಿಗೆ 2023 ರಲ್ಲಿ ವಿವಿಧ ಕಂತುಗಳಲ್ಲಿ 2.50 ಕೋಟಿ ರೂಪಾಯಿ ಹಣ ನೀಡಿದ್ದಾರೆ. ಆದರೆ ಡಿಜಿಟಲ್ ಟೆರೇನ್ ಸಂಸ್ಥೆಯು ಒಪ್ಪಂದದಂತೆ ನಡೆದುಕೊಂಡಿಲ್ಲ. ಅವರು ತಮಗೆ ವಿಎಫ್ಎಕ್ಸ್, ಗ್ರಾಫಿಕ್ಸ್ ಗಳನ್ನು ಮಾಡಿಕೊಟ್ಟಿಲ್ಲ, ಹಣವನ್ನೂ ಸಹ ಮರಳಿಸಿಲ್ಲ ಎಂದು ಉದಯ್ ಮೆಹ್ತ ಆರೋಪ ಮಾಡಿದ್ದಾರೆ.

ಉದಯ್ ಮೆಹ್ತ ನೀಡಿರುವ ದೂರಿನಲ್ಲಿ ‘ಮಾರ್ಟಿನ್’ ಸಿನಿಮಾದ ನಿರ್ದೇಶಕ ಎಪಿ ಅರ್ಜುನ್ ಹೆಸರು ಉಲ್ಲೇಖವಾಗಿಲ್ಲವಾದರೂ, ಎಪಿ ಅರ್ಜುನ್ ಅವರೇ ಈ ಪ್ರಕರಣದ ರೂವಾರಿ ಎಂಬ ಮಾತುಗಳು ಹರಿದಾಡುತ್ತಿವೆ. ವಿಎಫ್ ಎಕ್ಸ್ ಮಾಡಿಕೊಡಲು ಒಪ್ಪಿಕೊಂಡಿದ್ದ ಸಂಸ್ಥೆಯಿಂದ ಎಪಿ ಅರ್ಜುನ್ ಬರೋಬ್ಬರಿ 50 ಲಕ್ಷ ರೂಪಾಯಿ ಕಮೀಷನ್ ಹಣವನ್ನು ಪಡೆದಿದ್ದಾರೆ ಎನ್ನಲಾಗಿದೆ. ಜೊತೆಗೆ ಡಿಜಿಟಲ್ ಟೆರೇನ್ ಗೆ ನೀಡುವಂತೆ ಎಪಿ ಅರ್ಜುನ್ ಗೆ ಕೊಟ್ಟಿದ್ದ ಹಣವನ್ನು ಅವರು ಸಂಸ್ಥೆಗೆ ತಲುಪಿಸಿಲ್ಲ ಎಂಬ ಆರೋಪವೂ ಇದೆ.

AP Arjun_Uday Mehta

ಎಪಿ ಅರ್ಜುನ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದು, “ಸತ್ಯ ನೀತಿ ಧರ್ಮವಿದ್ದರೆ ಹಾರಾಡಿ ಮೆರೆದವರು ತೂರಾಡಿ ಹೋಗುವುದನ್ನ ಕಣ್ಣಾರೆ ನೋಡುವೆ” ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗೊರುವ ಸುದ್ದಿ ಹೊರಬೀಳುತ್ತಿದ್ದಂತೆ ತುರ್ತು ಸುದ್ದಿಗೋಷ್ಠಿಯನ್ನು ಕರೆದಿದ್ದಾರೆ. ಎಪಿ ಅರ್ಜುನ್ ಸುದ್ದಿಗೋಷ್ಠಿ ಕೆಲವೇ ಹೊತ್ತಿನಲ್ಲಿ ಪ್ರಾರಂಭ ಆಗಲಿದೆ.

Allu Arjun: ಅಲ್ಲು ಅರ್ಜುನ್- ಸುಕುಮಾರ್ ಮಧ್ಯೆ ಜಗಳ, ನಿಜಾಂಶವೇನು?

‘ಮಾರ್ಟಿನ್’ ಸಿನಿಮಾದಲ್ಲಿ ಧ್ರುವ ಸರ್ಜಾ ನಟಿಸಿದ್ದು, ಸಿನಿಮಾ ಪಕ್ಕಾ ಆಕ್ಷನ್ ಸಿನಿಮಾ ಆಗಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಎರಡು ಶೇಡ್ ಗಳಲ್ಲಿ ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ. ಮಾರ್ಟಿನ್ ಸಿನಿಮಾ ಅಕ್ಟೋಬರ್ 24 ಕ್ಕೆ ತೆರೆಗೆ ಬರಲಿದೆ.

LEAVE A REPLY

Please enter your comment!
Please enter your name here