Site icon Samastha News

Maruti: ಬೈಕುಗಳಿಗಿಂತ ಹೆಚ್ಚು ಮೈಲೇಜ್ ಖಡುವ ಈ ಕಾರಿನ ಬೆಲೆಯು ಕಡಿಮೆ!

Maruti

Maruti

ದಿನೇ ದಿನೇ ಏರುತ್ತಲೇ ಸಾಗುತ್ತಿರುವ ಪೆಟ್ರೋಲ್ ಬೆಲೆಗಳ ಸಮಯದಲ್ಲಿ ಎಷ್ಟೋ ಮಂದಿ ಇರುವ ಕಾರುಗಳನ್ನು ಮಾರಿ ಬಸ್ಸು, ಮೆಟ್ರೊ ಹತ್ತುತ್ತಿದ್ದಾರೆ. ಎಲೆಕ್ಟ್ರಿಕ್ ಕಾರು ಖರೀದಿ ಮಾಡೋಣವೆಂದರೆ ಅದು ಬಲು ದುಬಾರಿ. ಮತ್ತು ಇಂಧನ ಕಾರುಗಳಷ್ಟು ಕನ್ವೀನಿಯಂಟ್ ಅಲ್ಲ. ಆದರೆ ಇದೀಗ ಮಾರುಕಟ್ಟೆಗೆ ಬರುತ್ತಿರುವ ಹೊಸ ಕಾರು, ಕೆಲವು ಬೈಕುಗಳಿಗಿಂತಲೂ ಹೆಚ್ಚು ಮೈಲೇಜ್ ಕೊಡುತ್ತದೆ. ಬೆಲೆಯೂ ಕಡಿಮೆಯೇ.

ಮಧ್ಯಮ ವರ್ಗದವರಿಗೆ ಹೊಂದುವ ಕಾರುಗಳನ್ನು ನಿರ್ಮಿಸುವ ಭಾರತದ ಹೆಮ್ಮೆಯ ಸಂಸ್ಥೆ ಮಾರುತಿ. ಇದೀಗ ಇದೇ ಮಾರುತಿ ತಮ್ಮ ಹಳೆಯ ಕಾರಿಗೆ ಕೆಲವು ಅತ್ಯುತ್ತಮ ಮಾರ್ಪಾಡುಗಳನ್ನು ಮಾಡಿ ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಅದುವೇ ಆಲ್ಟೋ ಕೆ10.

ಮಾರುತಿ‌ ಸಂಸ್ಥೆಯ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದು ಆಲ್ಟೋ. ಈಗಾಗಲೇ ಆಲ್ಟೋ ಕೆ10 ಸಹ ಬಿಡುಗಡೆ ಆಗಿ ಹವಾ ಎಬ್ಬಿಸಿದೆ. ಇದೀಗ ಕೆಲ ಬದಲಾವಣೆ ಮಾಡಿ ಮತ್ತೊಮ್ಮೆ ಈ ಕಾರನ್ನು ಬಿಡುಗಡೆ ಮಾಡಲು ಮಾರುತಿ ಸಜ್ಜಾಗಿದೆ. ಈ ಬಾರಿ ಅತ್ಯುತ್ತಮ ಮೈಲೇಜ್ ಜೊತೆಗೆ ಲುಕ್ಸ್ ಸಹ ಭಿನ್ನವಾಗಿ ನೀಡುತ್ತಿದೆ ಮಾರುತಿ.

2025 ರಲ್ಲಿ ಮಾರುತಿಯ ಆಲ್ಟೋ ಕೆ10 ಕಾರು ಬಿಡುಗಡೆ ಆಗಲಿದ್ದು, ಈ ಕಾರಿನ ಮೈಲೇಜ್ ಪ್ರತಿ ಲೀಟರ್’ಗೆ 36 ಕಿ.ಮೀ ಮೈಲೇಜ್ ಇರಲಿದೆಯಂತೆ. ಭಾರತದಲ್ಲಿ ಜನಪ್ರಿಯವಾಗಿರುವ ಎಷ್ಟೋ 350, 400, 650 ಬೈಕುಗಳು ಸಹ ಇಷ್ಟೋಂದು ಮೈಲೇಜ್ ಕೊಡುತ್ತಿಲ್ಲ. ಮಾರುತಿ ಸಂಸ್ಥೆ ವಿನ್ಯಾಸ ಮಾಡಿರುವ ಹೊಸ ಎಂಜಿನ್ ಇಂದಾಗಿ ಹೊಸ ಆಲ್ಟೋ ಕೆ10 ಕಾರು ಬರೋಬ್ಬರಿ‌ 36 ಕಿ.ಮೀ ಮೈಲೇಜ್ ನೀಡಲಿದೆಯಂತೆ.

ಹೊಸ ಆಲ್ಟೊ k10 ಕಾರನ್ನು ಕೆಲ ಕಾರು ಪ್ರದರ್ಶನಗಳಲ್ಲಿ ಮಾರುತಿ ಪ್ರದರ್ಶಿಸಿದೆ. ಹಳೆಯ ಆಲ್ಟೋ ಗಿಂತಲೂ ದೊಡ್ಡದಾಗಿ ಕಾಣುತ್ತಿದೆ ಹೊಸ ಆಲ್ಟೋ, ಜೊತೆಗೆ ವಿನ್ಯಾಸದಲ್ಲಿಯೂ ಕೆಲ ಬದಲಾವಣೆ ಮಾಡಲಾಗಿದ್ದು, ಕೇಂದ್ರ ಸರ್ಕಾರದ ನಿಯಮದಂತೆ ಸುರಕ್ಷತೆಗಳನ್ನು‌ ಸಹ ಒದಗಿಸಲಾಗಿದೆ. ಎಲ್ಲಕ್ಕಿಂತಲೂ ಮುಖ್ಯವಾದ ವಿಷಯವೆಂದರೆ ಈ ಕಾರಿನ ಬೆಲೆ ಭಾರತದ ಮಾರುಕಟ್ಟೆಯಲ್ಲಿ 4 ಲಕ್ಷ ರೂಪಾಯಿಗಳು ಮಾತ್ರವೇ ಇರಲಿದೆಯಂತೆ.

Exit mobile version