Bengaluru: ಬೆಂಗಳೂರಿನಲ್ಲಿ ಶುರುವಾಗಿದ ಹೊಸ ರೀತಿಯ ಕಳ್ಳತನ, ಇರಲಿ ಜಾಗೃತೆ

0
161
Bengaluru

Bengaluru

ಬೆಂಗಳೂರು ಟೆಕ್ ರಾಜಧಾನಿ ಆಗಿರಬಹುದು ಅದರ ಜೊತೆಗೆ ಹಲವು ರೀತಿಯ ಸ್ಕ್ಯಾಮ್’ಗಳು ಸಹ ಇಲ್ಲಿವೆ. ಭಾರತದ ಇತರೆ ಕೆಲವು ನಗರಗಳಿಗೆ ಹೋಲಿಸಿದರೆ ಇಲ್ಲಿ ತುಸು ಕಡಿಮೆಯಾದರೂ ಅಪರಾಧ ಪ್ರಕರಣಗಳು ವರದಿ ಆಗುತ್ತಲೇ ಇರುತ್ತವೆ. ಇದೀಗ ಬೆಂಗಳೂರಿನಲ್ಲಿ ಹೊಸ ರೀತಿಯ ಕಳ್ಳತನವೊಂದು ಪ್ರಾರಂಭ ಆಗಿದೆ. ಹಾಗೆಂದು ಈ ಕಳ್ಳತನ ತೀರ ಹೊಸದೆಂದೇನಲ್ಲ. ಆದರೆ ವರ್ಷಗಳ ಬಳಿಕ ಮತ್ತೆ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದೆ.

ಇತ್ತೀಚೆಗೆ ಹಾಲಿದ ದರಗಳು ಹೆಚ್ಚಾಗಿರುವುದು ತಿಳಿದಿರುವ ವಿಷಯವೇ. ಹಾಲಿನ ಬೆಲೆ ಹೆಚ್ಚಾದಂತೆ ಬೆಂಗಳೂರಿನಲ್ಲಿ ಹಾಲಿನ ಪ್ಯಾಕೆಟ್’ಗಳ ಕಳ್ಳತನ ಹೆಚ್ಚಾಗಿದೆ. ಕೆಲ ಕಿಡೊಗೇಡಿಗಳು, ಮನೆಗಳ ಮುಂದೆ ಹಾಕಿರುವ ಹಾಲಿನ ಪ್ಯಾಕೆಟ್’ಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾರೆ. ಬೆಳಿಗ್ಗೆ ನಂದಿನ ಅಥವಾ ಇನ್ಯಾವುದೇ ಏಜೆನ್ಸಿಯವರು ಮನೆಯ ಮುಂದೆ ಹಾಲಿನ ಪ್ಯಾಕೆಟ್’ಗಳನ್ನು ಹಾಕಿ ಹೋಗಿರುತ್ತಾರೆ. ಮನೆ ಮಂದಿ ಪಾಕೆಟ್ ತೆಗೆದುಕೊಳ್ಳುವ ಮುಂಚೆ ಕಿಡಿಗೇಡಿಗಳು ಹೋಗಿ ಹಾಲಿನ ಪಾಕೆಟ್ ಎತ್ತಿಕೊಂಡು ಪರಾರಿ ಆಗುತ್ತಿದ್ದಾರೆ. ಕಳೆದ ಒಂದು ವಾರದಿಂದ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಈ ರೀತಿಯ ಕಳ್ಳತನ ಪ್ರಕರಣಗಳು ವರದಿ ಆಗಿವೆ.

ಮನೆಗಳ ಮುಂದೆ ಇಡಲಾಗುವ ಹಾಲಿನ ಪ್ಯಾಕೆಟ್’ಗಳ ಜೊತೆಗೆ ಹಾಲಿನ ಬೂತ್’ಗಳ‌ ಮುಂದೆ ಕೆಎಂಎಫ್ ಇನ್ನಿತರೆ ಸಂಸ್ಥೆಗಳು ವ್ಯಾಪಾರಕ್ಕೆಂದು ಇಡುವ ಹಾಲನ್ನು ಸಹ ಕಳ್ಳತನ ಮಾಡಲಾಗುತ್ತಿದೆ. ಹಾಲಿನ ಕಳ್ಳತನ ಮಾಡುತ್ತಿರುವ ಸಿಸಿಟಿವಿ‌ ವಿಡಿಯೋಗಳು ಇದೀಗ ಹೊರಬಿದ್ದಿದ್ದು, ಕೆಲ ಯುವಕರು, ಹಾಲಿನ ಬೂತ್’ಗಳ ಮುಂದೆ ಇಡಲಾಗಿದ್ದ ಹಾಲಿನ ಕ್ರೇಟ್’ಗಳನ್ನು ಕದ್ದು ಪರಾರಿಯಾಗಿದ್ದಾರೆ. ಈ ಕೃತ್ಯ ಬೆಳಗಿನ ಜಾವ ನಾಲ್ಕು ಗಂಟೆಗೆ ನಡೆದಿದೆ‌. ಹಲವು ಬೂತ್’ಗಳ ಮುಂದೆ ಇಡಲಾಗಿದ್ದ ಹಾಲಿನ ಪಾಕೆಟ್’ಗಳನ್ನು ಈ ಹಾಲು ಕಳ್ಳರು ಕದ್ದಿದ್ದಾರೆ.

ಇಂದಿರಾನಗರ, ಎಂಜಿ ರಸ್ತೆ, ಕೋಣನಕುಂಟೆ, ಕೋರಮಂಗಲ ಇನ್ನೂ ಕೆಲ ಕಡೆಗಳಲ್ಲಿ ಈ ರೀತಿಯ ಪ್ರಕರಣಗಳು ವರದಿಯಾಗಿವೆ. ದಿಲೀಪ್ ಹೆಸರಿ‌ನ ಹಾಲಿನ ಬೂತ್ ಮಾಲೀಕ ತನ್ನ ಬೂತ್ ಬಳಿ ಇಡಲಾಗಿದ್ದ ಹಾಲಿನ ಕ್ರೇಟ್ ಕಳ್ಳತನ ಆಗಿರುವ ಬಗ್ಗೆ ಪೊಲೀಸರಿಗೆ ದೂರು‌ ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Forest: ಒತ್ತುವರಿ ತಡೆಯಲು ಸ್ಯಾಟಲೈಟ್ ಬಳಕೆ: ಒತ್ತುವರಿದಾರರ ಮೇಲೆ ಕ್ರಮ

ಅಂದಹಾಗೆ ಈ ಹಾಲು ಕಳ್ಳತನ ಬೆಂಗಳೂರಿಗೆ ಹೊಸದೇನೂ ಅಲ್ಲ. ಈ ಹಿಂದೆ ಕೆಲವು ಬಾರಿ ಇಂಥಹಾ ಪ್ರಕರಣಗಳು ಬೆಳಕಿಗೆ ಬಂದಿದ್ದಿದೆ. ಹಾಲು ಖದಿಯುವ ಖದೀಮರು, ಕದ್ದ ಹಾಲನ್ನು ಹೋಟೆಲ್’ಗಳಿಗೆ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಾರೆ.

LEAVE A REPLY

Please enter your comment!
Please enter your name here